Advertisement

Sullia: ಸಂಪಾಜೆಯಲ್ಲಿ ಎರಡು ಮನೆಗಳಲ್ಲಿ ಕಳವು ಪ್ರಕರಣ

07:35 PM Oct 10, 2024 | Team Udayavani |

ಸುಳ್ಯ: ಸಂಪಾಜೆಯ ಎರಡು ಮನೆಗಳಲ್ಲಿ ಚಿನ್ನಾಭರಣ ಮತ್ತು ಹಣ ಕದ್ದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು, ಪ್ರಕರಣದಲ್ಲಿ ಭಾಗಿಯಾದ ಇಬ್ಬರಿಗೂ ಸುಳ್ಯ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲಾಗಿದೆ.

Advertisement

ಪ್ರಕರಣದ ಆರೋಪಿಗಳಾದ ಅಹ್ಮದ್‌ ಕಬೀರ್‌ ಹಾಗೂ ಸಾಜುದೀನ್‌ ಫಾರೂಖ್‌ ಶಿಕ್ಷೆಗೆ ಒಳಗಾದವರು.

ಪ್ರಕರಣದ ವಿವರ
2014ರ ಜ. 29ರಂದು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಪೆಲತ್ತಡ್ಕ ಸನತ್‌.ಪಿ.ಎಸ್‌. ಅವರ ಮನೆಯ ಹಿಂಬದಿಯಲ್ಲಿರುವ ಬಾಗಿಲನ್ನು ಮುರಿದು ಒಳಪ್ರವೇಶಿಸಿ ಕಪಾಟಿನಲ್ಲಿರಿಸಿದ್ದ ಸುಮಾರು 62,900 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು 10,000 ರೂ. ಕಳವಾಗಿತ್ತು. ಅದೇ ದಿನ ಸಂಪಾಜೆ ಗ್ರಾಮದ ಗೂನಡ್ಕ ಪೂಜಾರಿ ಮನೆಯ ಮಾಧವ ಪಿ. ಅವರ ಮನೆಯ ಹಿಂಬದಿಯಲ್ಲಿರುವ ಕಿಟಕಿಯ ಕಬ್ಬಿಣದ ರಾಡನ್ನು ಬಗ್ಗಿಸಿ ಮನೆಯೊಳಗೆ ಪ್ರವೇಶಿಸಿ ಸುಮಾರು 2,27,600 ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಎರಡೂ ಪ್ರಕರಣಗಳಲ್ಲಿ 2ನೇ ಆರೋಪಿ ತಲೆಮರೆಸಿಕೊಂಡಿದ್ದರಿಂದ ಎರಡೂ ಪ್ರಕರಣವನ್ನು ವಿಭಜಿಸಿ ಅನಂತರ ಆರೋಪಿ ಪತ್ತೆಯಾದ ಮೇಲೆ ಎಲ್ಲ ನಾಲ್ಕು ಪ್ರಕರಣಗಳನ್ನು ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯವು ಇಬ್ಬರೂ ಆರೋಪಿಗಳು ಮಾಡಿರುವ ಅಪರಾಧ ಸಾಬೀತಾಗಿದ್ದು, ದೋಷಿ ಎಂದು ಪರಿಗಣಿಸಲಾಗಿದೆ. ಅವರಿಗೆ ಮೂರು ವರ್ಷ ಜೈಲು ತಲಾ 10 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ. ಬಿ. ಮೋಹನ್‌ ಬಾಬು ಅವರು ಆದೇಶ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next