Advertisement
ಎರಡು ಕಡೆ ವಿತರಣೆತಾಲೂಕಿನಲ್ಲಿ ಎರಡು ರೈತ ಸಂಪರ್ಕ ಕೇಂದ್ರಗಳಿವೆ. ಸುಳ್ಯ ಹೋಬಳಿಗೆ ಸಂಬಂಧಿಸಿ ನಗರದಲ್ಲಿ ಹಾಗೂ ಪಂಜ ಹೋಬಳಿಗೆ ಸಂಬಂಧಿಸಿ ಪಂಜ ಪೇಟೆಯಲ್ಲಿ ಕೇಂದ್ರವಿದೆ. ಆಯಾ ಹೋಬಳಿ ರೈತರು ತಮ್ಮ ವ್ಯಾಪ್ತಿಯ ಕಚೇರಿಗೆ ತೆರಳಿ ಸೌಲಭ್ಯ ಪಡೆದುಕೊಳ್ಳಬಹುದು.
20 ಕ್ವಿಂಟಾಲ್ ಎಂಒ4 (ಭದ್ರಾ) ತಳಿ ಭತ್ತದ ಬೀಜ ಸಂಗ್ರಹವಿದೆ. ಸುಳ್ಯ ಕೇಂದ್ರದಲ್ಲಿ 15 ಕ್ವಿಂಟಾಲ್ ಹಾಗೂ ಪಂಜ ಕೇಂದ್ರದಲ್ಲಿ 5 ಕ್ವಿಂಟಾಲ್ ದಾಸ್ತಾನು ಇದೆ. ಈಗಾಗಲೇ 7 ಕ್ವಿಂಟಾಲ್ ವಿತರಿಸಲಾಗಿದೆ. ಬೇಡಿಕೆ ಆಧರಿಸಿ ಪೂರೈಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. 300 ಹೆಕ್ಟೇರ್
ತಾಲೂಕಿನಲ್ಲಿ 300 ಹೆಕ್ಟೇರ್ ಭತ್ತದ ಗದ್ದೆ ಇದೆ. ಈಗಾಗಲೇ 2 ಹೆಕ್ಟೇರಿನಲ್ಲಿ ಬೇಸಾಯ ಕಾರ್ಯ ಪ್ರಾರಂಭವಾಗಿದೆ. ಯಾಂತ್ರೀಕೃತ ಪದ್ಧತಿಯಲ್ಲಿ ನಾಟಿ ಮಾಡಿದಲ್ಲಿ ಎಕರೆಗೆ 12 ರಿಂದ 15 ಕೆ.ಜಿ.ಭತ್ತದ ಬೀಜ ಸಾಕಾಗುತ್ತದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ 25 ಕೆ.ಜಿ.ಬೇಕಾಗುತ್ತದೆ. ಇದರ ಆಧಾರದಲ್ಲಿ ವಿತರಣೆ ನಡೆಯುತ್ತದೆ ಅನ್ನುವುದು ಇಲಾಖೆ ನೀಡುವ ಅಂಕಿ ಅಂಶ.
ಟರ್ಪಾಲು ಬಂದಿಲ್ಲ
ಕೀಟನಾಶಕ, ಕೃಷಿ ಸುಣ್ಣ, ಸಾವಯವ ಗೊಬ್ಬರ, ಟರ್ಪಾಲು ಪವರ್ ವೀಡರ್, ಕೈಗಾಡಿ, ಸ್ಪ್ರಿಂಕ್ಲರ್ ಸೆಟ್ ಈ ಎಲ್ಲ ಸೌಲಭ್ಯಗಳು ಇನ್ನಷ್ಟೇ ಪೂರೈಕೆ ಆಗಬೇಕಿದೆ. ಕಳೆದ ವರ್ಷ ಟಾರ್ಪಾಲಿಗೆ 1500 ಕ್ಕೂ ಅಧಿಕ ಅರ್ಜಿಗಳ ಸಲ್ಲಿಕೆ ಆಗಿದೆ. 20 ಟಾರ್ಪಾಲು ಮಾತ್ರ ಪೂರೈಕೆ ಆಗಿದೆ. ಹತ್ತು ದಿನದಲ್ಲಿ ಬರುವ ನಿರೀಕ್ಷೆ ಇದೆ ಅನ್ನುತ್ತಿವೆ ಇಲಾಖಾ ಮೂಲಗಳು.
Related Articles
ಕೆ.ಜಿ.ಯೊಂದಕ್ಕೆ 32 ರೂ.ಧಾರಣೆ ನಿಗದಿ ಪಡಿಸಲಾಗಿದೆ. ಇದರಲ್ಲಿ ಸಾಮಾನ್ಯ ವರ್ಗದ ಬೆಳೆಗಾರರಿಗೆ ಪ್ರತಿ ಕೆಜಿಗೆ 8 ರೂ.ಸಬ್ಸಿಡಿ ಇದೆ. ಪ್ರತಿ ಖರೀದಿದಾರ ಸಹಾಯಧನ ಕಡಿತಗೊಳಿಸಿ ಉಳಿದ ಮೊತ್ತ ಪಾವತಿಸಿ ಭತ್ತದ ಬೀಜ ಪಡೆದುಕೊಳ್ಳಬಹುದು. ಪ್ರತಿ ಕೆ.ಜಿ.ಯೊಂದರಲ್ಲಿ ಪರಿಶಿಷ್ಟ ಜಾತಿ/ಪಂಗಡ-10 ರೂ. ಸಬ್ಸಿಡಿ ನೀಡಲಾಗುತ್ತಿದೆ. ಅರ್ಹ ಬೆಳೆಗಾರರು ಪಹಣಿ ಪತ್ರ (ಆರ್‌ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪ್ರತಿ ಹಾಗೂ ಒಂದು ಭಾವಚಿತ್ರದೊಂದಿಗೆ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು. ಕಿಸಾನ್ ಕಡ್ಡಾಯ (ಬೆಳೆಗಾರರ ನೋಂದಣಿ) ಆಗಿರುವ ಕಾರಣ ಈ ಎಲ್ಲ ದಾಖಲೆಗಳು ಅವಶ್ಯ.
Advertisement
ಭತ್ತದ ಬಿತ್ತನೆ ಬೀಜ ಲಭ್ಯತಾಲೂಕಿನಲ್ಲಿ 20 ಕ್ವಿಂಟಾಲ್ ಎಂಓ4 (ಭದ್ರಾ) ತಳಿಯ 20 ಕ್ವಿಂಟಾಲ್ ಭತ್ತದ ಬೀಜ ಸಂಗ್ರಹವಿದ್ದು, ಈಗಾಗಲೇ 7 ಕ್ವಿಂಟಾಲ್ ಪೂರೈಕೆ ಆಗಿದೆ. ಆಯಾ ಹೋಬಳಿ ರೈತ ಕೇಂದ್ರಕ್ಕೆ ಬೆಳೆಗಾರರು ದಾಖಲೆಯೊಂದಿಗೆ ಸಂಪರ್ಕಿಸಿದರೆ ವಿತರಿಸಲಾಗುತ್ತದೆ.
-ಮೋಹನ್ ನಂಗಾರು, ಕೃಷಿ ಅಧಿಕಾರಿ, ಕೃಷಿ ಇಲಾಖೆ, ಸುಳ್ಯ.