Advertisement

Sulkeri : ಬೈಕ್‌ ಸ್ಕಿಡ್‌; ಸವಾರನಿಗೆ ಗಾಯ

11:51 PM Jan 15, 2024 | Team Udayavani |

ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ಸುಲ್ಕೇರಿ ಸೇತುವೆ ಬಳಿ ಬೈಕ್‌ ಸ್ಕಿಡ್‌ ಆಗಿ ಸವಾರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

Advertisement

ಸುಲ್ಕೇರಿ ಗ್ರಾಮದ ಸುಲ್ಕೇರಿ ಸೇತುವೆ ಬಳಿ ಬೈಕನ್ನು ಅದರ ಸವಾರ ಜಂಶಾದ್‌ ದುಡುಕುತನ ಹಾಗೂ ನಿರ್ಲಕ್ಷÂತನದಿಂದ ಚಲಾಯಿಸಿದ ಪರಿಣಾಮ, ಸವಾರನ ಹತೋಟಿ ತಪ್ಪಿ ಬೈಕ್‌ ಸ್ಕಿಡ್‌ ಆಗಿ ರಸ್ತೆಗೆ ಬಿದ್ದಿದ್ದು, ಪರಿಣಾಮವಾಗಿ ಜಂಶಾದ್‌ ಅವರ ತಲೆಗೆ ತೀವ್ರ ರಕ್ತ ಗಾಯವಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಸಾವ್ಯ ಗ್ರಾಮದ ನಿವಾಸಿ ಹರೀಶ್‌ ಹೆಗ್ಡೆ ಹಾಗೂ ಅಲ್ಲಿ ಸೇರಿದ್ದ ಸಾರ್ವಜನಿಕರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.

ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆೆ. ಈ ಬಗ್ಗೆ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next