Advertisement
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರ ಪ್ರೇರಣೆಯಂತೆ 10 ಗ್ಯಾರಂಟಿಗಳನ್ನು ಜನತೆಗೆ ನೀಡಿದ್ದೆವು, ಅದರಲ್ಲಿ ಮೊದಲನೆಯದಾಗಿ ಸರ್ಕಾರಿ ನೌಕರರ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನ ಕೈಗೊಂಡಿದ್ದು, ಈಗಾಗಲೇ ಅದು ಜಾರಿಗೊಂಡಿದೆ ಎಂದರು.
Related Articles
Advertisement
ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಮೂಲಭೂತ ಸೌಕರ್ಯ ನೀಡಿಕೆ, ಡ್ರಗ್ಸ್ ದಂಧೆಗೆ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹಿಮಾಚಲ ಪ್ರದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಸವಾಲು ನಮ್ಮ ಮುಂದಿದೆ ಎಂದರು.
ಕರ್ನಾಟಕದಲ್ಲಿಯೂ ರಾಜಕೀಯ ಬದಲಾವಣೆ ಗಾಳಿ ಬೀಸುತ್ತಿದ್ದು ಬಿಜೆಪಿಯ ಭ್ರಷ್ಟ ಆಡಳಿತದಿಂದ ಬೇಸತ್ತಿರುವ ಜನರು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದು, ಇಲ್ಲಿಯೂ 5 ಗ್ಯಾರಂಟಿಗಳನ್ನು ಜನತೆಗೆ ನೀಡಲಾಗಿದ್ದು ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಅನುಷ್ಠಾನಗೊಳಿಸಲು ಪಕ್ಷ ಬದ್ಧವಾಗಿದೆ ಎಂದರು.
ಪಕ್ಷದ ನಾಯಕ ರಾಹುಲ್ ಗಾಂಧಿಯವರು ಭರವಸೆಗಳನ್ನು ನೀಡುವುದರಿಂದ ಹಿಡಿದು ಅವುಗಳ ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳನ್ನು ಖುದ್ದಾಗಿ ಪರಿಶೀಲಿಸುವ, ಮೇಲ್ವಿಚಾರಣೆ ನಡೆಸುವ, ಸಲಹೆ ನೀಡುವ ಕಾರ್ಯವನ್ನು ಮಾಡುತ್ತಿದ್ದು ಕರ್ನಾಟಕದಲ್ಲಿಯೂ ಅದನ್ನು ಮುಂದುವರಿಸಲಿದ್ದಾರೆ ಎಂದು ಸುಖವಿಂದರ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಇ.ಡಿ, ಐಟಿ ದಾಳಿ ಮೂಲಕ ವಿಪಕ್ಷಗಳವರನ್ನು ಬೆದರಿಸುವ ತಂತ್ರ ಮಾಡುತ್ತಿದ್ದು, ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕರ್ನಾಟಕದ ಮತದಾರರಿಗೆ ನನ್ನ ಮನವಿ ಬಿಜೆಪಿಯವರು ಶಾಸಕರನ್ನು ಕದ್ದು ಒಯ್ಯುವುದಕ್ಕೂ ಅವಕಾಶ ಇಲ್ಲದ ರೀತಿಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ನೀಡಿ ಎಂದರು.
ಹಿಮಾಚಲ ಪ್ರದೇಶದಲ್ಲಿ ಶಾಸಕರನ್ನು ಕದ್ದೋಯುವ ಯತ್ನಕ್ಕೆ ಬಿಜೆಪಿ ಮುಂದಾಗಬಹುದಾಗಿದೆ ಆದರೂ ಅಲ್ಲಿ ಅಂತಹದಕ್ಕೆ ನಮ್ಮ ಶಾಸಕರು ಅವಕಾಶ ನೀಡುವುದಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ಅಲೋಕ್ ಶರ್ಮ ಮಾತನಾಡಿ ಕರ್ನಾಟಕದಲ್ಲಿ ಕೋಮು ಸೌಹಾರ್ದ ಕದಡುವ ಸಂಘಟನೆಗಳನ್ನು ನಿಷೇಧಿಸುವುದಾಗಿ ನಾವು ಹೇಳಿದ್ದೇವೆ ಆದರೆ ಬಿಜೆಪಿಯವರು ಬಜರಂಗದಳ ನಿಷೇಧ ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದು, ಇದೇ ಬಿಜೆಪಿಯವರು ಗೋವಾದಲ್ಲಿ ಶ್ರೀರಾಮ ಸೇನೆ ನಿಷೇಧಿಸಿದ್ದು ಅಲ್ಲಿ ಶ್ರೀರಾಮನಿಗೆ ಅಪಮಾನ ಮಾಡಿದಂತಾಗಿಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಮತ ತುಷ್ಟಿಕರಣಕ್ಕೆ ಮುಂದಾಗಿಲ್ಲ ಬದಲಾಗಿ ಬಿಜೆಪಿಯವರು ಕಾಂಗ್ರೆಸ್ ಬಂದರೆ ದಂಗೆ ಯಾಗಲಿದೆ ಎಂದು ಸಮಾನ ನಾಗರಿಕ ಸಹಿತೆ ಜಾರಿಗೊಳಿಸುತ್ತೇವೆಂದು ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವುದು ತುಷ್ಟಿಕರಣದ ನೀತಿ ಅಲ್ಲವೇ ಎಂದು ಕೇಳಿದರು.
ಕಾಂಗ್ರೆಸ್ ನ ವಿವಿಧ ಮುಖಂಡರು ಹಿಮಾಚಲ ಪ್ರದೇಶದ ಕೆಲ ಸಚಿವರು ಶಾಸಕರು ಇದ್ದರು.