Advertisement
ಸುಖ್ವಿಂದರ್ ಸಿಂಗ್ ಅವರೊಂದಿಗೆ ರಾಡ್ನಿ ಖಾಡಿಲ್ಕರ್ ಅವರೂ ಹಲವು ಹಾಡುಗಳ ಮೂಲಕ ಜನರನ್ನು ರಂಜಿಸಿದರು. “ಜೈಹೋ’, “ರಮ್ತಾ ಜೋಗಿ, ಚಂಯ ಚಂಯ ದಂಥ ಹಾಡುಗಳಿಗೆ ಪ್ರೇಕ್ಷಕರೂ ಸ್ಪಂದಿಸಿದರು. ಹಲವು ಹಾಡುಗಳಿಗೆ ಸಭಿಕರೂ ದನಿಗೂಡಿಸಿದರು. ವೇದಿಕೆಯ ಕೆಳಗಡೆ ಎರಡೂ ಪಾರ್ಶ್ವಗಳಲ್ಲಿ ನಿಂತಿದ್ದ ಯುವಜನರೆಡೆಗೆ ಮೈಕ್ ಎಸೆದು ಅವರಿಂದಲೂ ಹಾಡಿಸಿದರು.
ಗಾನ ಮಾಧುರ್ಯದಿಂದ ಸಭಿಕರ ಮನ ಸೆಳೆದ ಸುಖ್ವಿಂದರ್ ಸಿಂಗ್ ಸಭೆಯಲ್ಲಿದ್ದ ಪುಟಾಣಿಗಳನ್ನು ವೇದಿಕೆಗೆ ಬರಮಾಡಿಕೊಂಡು ಹಾಡಿಸಿ, ಕುಣಿಸಿ ರಂಜಿಸಿದರು. “ಚಕ್‌ದೇ ಇಂಡಿಯಾ’ ಹಾಡಿಗೆ ಧ್ವನಿಗೂಡಿಸಿದ ಮಕ್ಕಳು, “ಹುಡ್ ದಬಂಗ್’ ಹಾಡಿಗೆ ಸಿಂಗ್ ನರ್ತಿಸಿದಂತೆ ಲಘುವಾಗಿ ಹೆಜ್ಜೆಹಾಕಿ ಖುಷಿಪಟ್ಟರು. “ಇಂದಿನ ಕಾರ್ಯಕ್ರಮ ನನ್ನ ಜೀವನದ ಅತ್ಯುತ್ತಮ ಪ್ರಸ್ತುತಿಯಾಗಬಹುದು’ ಎಂದು ಮೊದಲಲ್ಲೇ ಆಶಾವಾದ ವ್ಯಕ್ತಪಡಿಸಿದ ಸುಖ್ವಿಂದರ್ ಕೊನೆಗೂ ತನ್ನ ಸಂತೃಪ್ತಿಯನ್ನು ವ್ಯಕ್ತಪಡಿಸಿದರು.
Related Articles
* ಸೂರ್ಯಪ್ರಕಾಶ್ ಅವರಿಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ಪ್ರದಾನ
* ಶಂಕರ್ ಮಹಾದೇವನ್ ಬಳಗದ ಚಿತ್ರಸಂಜೆ
ಮೂಡುಬಿದಿರೆ: ಆಳ್ವಾಸ್ ವಿರಾಸತ್ ರಜತ ಸಂಭ್ರಮದ ಕೊನೆಯ ದಿನವಾದ ರವಿವಾರ ಸಂಜೆ 5.45ಕ್ಕೆ ಹೈದರಾಬಾದ್‌ನ ಕಲಾವಿದ ಸೂರ್ಯಪ್ರಕಾಶ್ ಅವರಿಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಗುವುದು.
Advertisement
ಸಂಜೆ 6ರಿಂದ ಶಂಕರ್ ಮಹಾದೇವನ್, ಸಿದ್ದಾರ್ಥ್ ಮಹಾದೇವನ್ ಮತ್ತು ಶಿವನ್ ಮಹಾದೇವನ್ ಅವರು “ಚಿತ್ರ ರಸ ಸಂಜೆ’, ಕೋಲ್ಕತಾದ ಪರಂಪರಾ ತಂಡದವರು “ಕಲರ್ ಆಫ್ ಭರತನಾಟ್ಯಂ, ಆಳ್ವಾಸ್ ತಂಡಗಳಿಂದ ಭರತನಾಟ್ಯ, ಮಣಿಪುರದ ಧೋಲ್ ಚಲಮ್, ಪಂಜಾಬಿನ ಬಾಂಗಾ ನೃತ್ಯ ಹಾಗೂ ತೆಂಕುತಿಟ್ಟು ಯಕ್ಷಗಾನ “ಅಗ್ರಪೂಜೆ’ ಪ್ರಸ್ತುತಪಡಿಸಲಿದ್ದಾರೆ.