Advertisement

“ಸುಖೀ ಸಮಾಜ ನಿರ್ಮಾಣ ಧರ್ಮದ ಕೆಲಸ’

02:16 PM Apr 13, 2017 | |

ಬೆಳ್ತಂಗಡಿ : ಜನರಿಗೆ ಹಿತ, ಸುಖೀ ಸಮಾಜ ನಿರ್ಮಾಣ ಮಾಡುವುದೇ ಧರ್ಮದ ಕೆಲಸ. ಶ್ರದ್ಧಾ ಭಕ್ತಿಯ ತಾದಾತ್ಮé ಬಾರದೆ ಭಗವಂತನ ದರ್ಶನ ಪಡೆಯುವುದು ಅಸಾಧ್ಯ. ಸತ್ಯ, ಧರ್ಮ, ಭಗವಂತನ ಕೃಪೆ, ನಿರಂತರ ಶ್ರದ್ಧಾಭಕ್ತಿಯಿಂದ ಮಾತ್ರ ನಾವು ಸತ್ಕಾರ್ಯದಲ್ಲಿ ಮುನ್ನಡೆಯಲು ಸಾಧ್ಯ. ಯೋಗ, ಧ್ಯಾನ, ಸತ್ಸಂಗದಿಂದ ಸನಾತನ ಹಿಂದೂ ಧರ್ಮದ ಬೆಳಕು ನಮ್ಮನ್ನು ಮುನ್ನಡೆಸುತ್ತದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Advertisement

ಅವರು ಮಂಗಳವಾರ ನಿಡಿಗಲ್‌ನ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದ ವರ್ಷಾವಧಿ ಸಿರಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯ ಮುಕುಂದ ಸುವರ್ಣ, ಲಾೖಲ ಜಿ.ಪಂ. ಕ್ಷೇತ್ರದ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ನಡ ತಾ.ಪಂ. ಸದಸ್ಯೆ ವೇದಾವತಿ, ಉಜಿರೆ ತಾ.ಪಂ. ಸದಸ್ಯ ಶಶಿಧರ ಎಂ., ದೇವಸ್ಥಾನದ ವ್ಯವಸ್ಥಾಪನ  ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಮೊದಲಾದವರಿದ್ದರು.

ತುಳು ಜನಪದ ಕ್ಷೇತ್ರದ ಸಾಧಕ ಮಾಚಾರು ಗೋಪಾಲ ನಾೖಕ,  ನಾಟಿ ವೈದ್ಯ ಚನನ ಗೌಡ ಬಿಲ್ಲರೋಡಿ ಅವರನ್ನು ಸಮ್ಮಾನಿಸಲಾಯಿತು.

ಮೂವರು ಯುವ ಕ್ರೀಡಾ ಪ್ರತಿಭೆಗಳನ್ನು ಪುರಸ್ಕರಿಸಲಾಯಿತು. ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾಯೋಜಕರನ್ನು ಗೌರವಿಸಲಾಯಿತು.

Advertisement

ವ್ಯವಸ್ಥಾಪನ ಸಮಿತಿ ಸದಸ್ಯ ನವೀನ್‌ ಶೆಟ್ಟಿ ಗುತ್ತಿಲಾರಬೆಟ್ಟು ಸ್ವಾಗತಿಸಿ, ಒಡಿಯೂರು ಸಂಸ್ಥಾನದ ಸಂಪನ್ಮೂಲ ವ್ಯಕ್ತಿ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಗುರುರಾಜ್‌ ವಂದಿಸಿದರು.

ರಾತ್ರಿ ಕುಮಾರ ದರ್ಶನ, ದೇವರ ಉತ್ಸವ, ಕಟ್ಟೆಪೂಜೆ, ವಾರ್ಷಿಕ ಸಿರಿ ಜಾತ್ರೆ ಹಾಗೂ ಸಸಿಹಿತ್ಲು ಭಗವತಿ ಮೇಳದ ಕಲಾವಿದರಿಂದ “ಪುಣ್ಣಮೆದ ಪೊಣ್ಣು’ ಯಕ್ಷಗಾನ ಪ್ರದರ್ಶನಗೊಂಡಿತು.

ವೇ| ಮೂ| ಮುಂಡೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ವಿಜಯರಾಘವ ಪಡ್ವೆಟ್ನಾಯರ ಮಾರ್ಗದರ್ಶನದಲ್ಲಿ ಅಜ್ಜರಪಾದ ಮತ್ತು ಭಂಡಾರ ಕಟ್ಟೆ ಪ್ರತಿಷ್ಠೆ, ಭೂತರಾಜ ಮಹಿಷಂತಾಯ, ಮೂರ್ತಿಲ್ಲಾಯ ದೈವಗಳ ನೇಮ, ಶತರುದ್ರಾಭಿಷೇಕ, ಅಬ್ಬಗ ದಾರಗರ ಚೆನ್ನೆಮಣೆ ಆಟ, ರಕ್ತೇಶ್ವರಿ,ಸೇಮಕಲ್ಲ ಪಂಜುರ್ಲಿ ದೈವಗಳ ಭೇಟಿ, ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯರಿಂದ ಆಶ್ಲೇಷಾ ಬಲಿ, ನಾಗದರ್ಶನ, ಸಾರ್ವಜನಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next