Advertisement

ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರ ಇಳಿಕೆ

01:07 AM Apr 01, 2021 | Team Udayavani |

ಹೊಸದಿಲ್ಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿ ಕೇಂದ್ರ ವಿತ್ತ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ. ಎಪ್ರಿಲ್-ಜೂನ್‌ ತ್ತೈಮಾಸಿಕ ಅವಧಿಗೆ ಅನ್ವಯವಾಗುವಂತೆ ಬಡ್ಡಿ ದರ ಪರಿಷ್ಕರಿಸಲಾಗಿದೆ. ಅದರಂತೆ, ಗುರುವಾರದಿಂದಲೇ (ಎ.1) ಪಿಪಿಎಫ್ ಬಡ್ಡಿ ದರವನ್ನು ಶೇ.6.4(ಹಿಂದಿನ ದರ: ಶೇ. 7.1)ಕ್ಕಿಳಿಸಲಾಗಿದ್ದು, ಎನ್‌ಎಸ್‌ಸಿ  ಬಡ್ಡಿ ದರ ಶೇ.5.9ಕ್ಕೆ (ಹಿಂದಿನ ದರ: ಶೇ. 6.8) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಶೇ.6.9(ಹಿಂದಿನ ದರ: ಶೇ. 7.6)ಕ್ಕಿಳಿಸಲಾಗಿದೆ.

Advertisement

ಅದೇ ರೀತಿ 5 ವರ್ಷಗಳ ಅವಧಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿಯನ್ನು ಶೇ.6.5, ಕಿಸಾನ್‌ ವಿಕಾಸ್‌ ಪತ್ರದ ಬಡ್ಡಿಯನ್ನು ಶೇ.6.2ಕ್ಕೆ ಇಳಿಸಲಾಗಿದೆ. ಅಂಚೆ ಕಚೇರಿ ಉಳಿತಾಯ ಠೇವಣಿಗಳ ಮೇಲೆ ಇನ್ನು ಶೇ.3.5ರಷ್ಟು ಬಡ್ಡಿ ಮಾತ್ರ ದೊರೆಯಲಿದೆ. 1-5 ವರ್ಷಗಳ ಅವಧಿ ಠೇವಣಿಗೆ ಶೇ.4.4-5.1ರ ವರೆಗೆ ಬಡ್ಡಿ ಪಾವತಿಸಲಾಗುತ್ತದೆ ಎಂದೂ ವಿತ್ತ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next