ಕೊರಟಗೆರೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್ ಡಿ ಎಮ್ ಸಿ ರಚನೆ ಮಾಡಲಾಯಿತು.ಎಸ್ ಡಿಎಮ್ ಸಿ ರಚನಾ ಸಮಿತಿಯಲ್ಲಿ ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಆಯ್ಕೆಯಾದರು.
ಅಧ್ಯಕ್ಷೆಯಾದ ಸುಕನ್ಯ ಮಾತನಾಡಿ, ನಮ್ಮ ಶಾಲೆಗೆ ಮುಂದಿನ ದಿನಗಳಲ್ಲಿ ಎಲ್ಲಾ ಕೆಲಸಗಳಿಗೆ ಒತ್ತು ಕೊಡುತ್ತೇವೆ ಹಾಗೂ ಈ ಶಾಲೆಯನ್ನು ಅಭಿವೃದ್ದಿ ಪಡಿಸಲು ಶ್ರಮಿಸುತ್ತೇವೆ ಎಂದರು.
ನಮ್ಮ ಶಾಲೆಯು ಶೈಕ್ಷಣಿಕವಾಗಿ ಮುಂದುವರೆದಿದೆ. ಈ ಹಿಂದೆ ಎಸ್. ಎಸ್. ಎಲ್ .ಸಿ. ಫಲಿತಾಂಶದಲ್ಲಿ ಶೇಕಡ 90% ಹೆಚ್ಚಿನ ಉತ್ತಮ ಫಲಿತಾಂಶ ಬಂದಿದ್ದು, ಹಳೆಯ ವಿದ್ಯಾರ್ಥಿ ಸಂಘದಿಂದ ಶಾಲೆಯ ಮುಂಭಾಗದಲ್ಲಿ ಉತ್ತಮವಾದ ಬಣ್ಣವನ್ನು ಮಾಡಲಾಗಿದೆ. ಭೌತಿಕ ಸೌಲಭ್ಯವನ್ನು ಉನ್ನತೀಕರಿಸಲಾಗಿದೆ. ಹಾಗೂ ಶಾಲೆಯ ಒಳಭಾಗದಲ್ಲಿ ಭೌತಿಕ ಸೌಲಭ್ಯ ಇನ್ನು ಬಾಕಿ ಇದೆ. ಕ್ಷೇತ್ರದ ಶಾಸಕರಾದ ಡಾ. ಜಿ. ಪರಮೇಶ್ವರ್ ಅವರು ನಮ್ಮ ಶಾಲೆಗೆ ಸಹಕಾರವನ್ನು ಕೊಟ್ಟು ಸುಮಾರು 10 ಲಕ್ಷಗಳನ್ನು ಅನುದಾನವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅಭಿವೃದ್ದಿ ಕೆಲಸವನ್ನು ಪ್ರಾರಂಭಿಸಬೇಕು ಎಂದು ತಿಳಿಸಿದರು.
ಉಪಾಧ್ಯಕ್ಷ ಜಮೀರ್ ಖಾನ್ ಮಾತನಾಡಿ, ನಮ್ಮ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಕೊರಟಗೆರೆ ಪಟ್ಟಣದ ಸರ್ಕಾರಿ ಫ್ರೌಡಶಾಲಾ ವಿಭಾಗದ ಎಸ್ ಎಸ್ ಎಲ್ ಸಿ ಮಕ್ಕಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿರುತ್ತಾರೆ. ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಲು ಮುಖ್ಯವಾಗಿ ಶಿಕ್ಷಕ ವೃಂದದವರು ಅಷ್ಟೇ ಗುಣಮಟ್ಟದ ಶಿಕ್ಷಣ ಪಡೆದಿರಬೇಕು. ಮತ್ತು ಈ ಶಾಲೆಯಲ್ಲಿ ಸುಮಾರು ವರ್ಷಗಳಿಂದ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ದೈಹಿಕ ಶಿಕ್ಷಕರು ಇರುವುದಿಲ್ಲ. ಇನ್ನು ಮುಂದಾದರು ಮೇಲಾಧಿಕಾರಿಗಳು ಈ ಶಾಲೆಗೆ ಆದಷ್ಟು ಬೇಗ ದೈಹಿಕ ಶಿಕ್ಷಕರನ್ನು ನೇಮಿಸಬೇಕೆಂದರು.
ಉಪ ಪ್ರಾಂಶುಪಾಲೆ ಚೈತ್ರ ಎನ್ ಮಾತನಾಡಿ, ನಾನು ಈ ಶಾಲೆಯಲ್ಲಿ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಸುಮಾರು 3 ಎಸ್‌ಡಿಎಂಸಿ ರಚನಾ ಸಭೆಗಳನ್ನು ರಚನೆ ಮಾಡಲಾಗಿದೆ. ಈ ಭಾರಿ ಆಯ್ಕೆಯಾಗಿರುವ ಸುಕನ್ಯಾ ಹಾಗೂ ಜಮೀರ್ ಖಾನ್ ಮತ್ತು ಸದಸ್ಯ ರೆಲ್ಲರೂ ಉತ್ಸಾಹಿತರಾಗಿದ್ದಾರೆ ಎಂದರು.
ಸಭೆಯಲ್ಲಿ ಶಿಕ್ಷಕರಾದ ಜಿ.ಕೆ ಮಾರುತಿ, ಶಿವಕುಮಾರ್, ದಿವ್ಯಾಎಸ್, ಗೋವಿಂದಪ್ಪ ನೂತನ ಎಸ್ ಡಿಸಿಎಂಸಿ ಸದಸ್ಯರಾದ ಗಂಗಾಧರ, ಕಾಂತರಾಜು,ಅನುರಾಧ, ಅನಸೂಯ, ಪದ್ಮಾವತಿ, ಪಾರ್ವತಿ, ಕಾಕಿಮಲ್ಲಯ್ಯ ಇದ್ದರು.