Advertisement

ಆತ್ಮಹತ್ಯೆ: ತಡೆಯುವ ಕ್ರಮಗಳು

06:00 AM Sep 16, 2018 | Team Udayavani |

ಹಿಂದಿನ ವಾರದಿಂದ- ಯಾರಾದರೊಬ್ಬರು ಆತ್ಮಹತ್ಯೆಯ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದಾರೆ 
ಎಂಬುದರ ಎಚ್ಚರಿಕೆ ಸಂಕೇತಗಳು: ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಹೊಂದಿರುವ ವ್ಯಕ್ತಿಗಳು ಬಹುತೇಕ ಬಾರಿ ವಾಚಿಕ, ವರ್ತನಾತ್ಮಕ ಮತ್ತು ದೈಹಿಕ ಸೂಚನೆಗಳನ್ನು ಹೊಂದಿರುತ್ತಾರೆ. ಅವುಗಳೆಂದರೆ:

Advertisement

ವರ್ತನಾತ್ಮಕ ಸೂಚನೆಗಳು
– ಏಕಾಕಿಯಾಗುವುದು
– ಮನೋಭಾವ ಅಥವಾ ವರ್ತನೆಯಲ್ಲಿ ಹಠಾತ್‌ ಬದಲಾವಣೆ
– ಮಾದಕವಸ್ತುಗಳ ಸೇವನೆ ಅಥವಾ ಮದ್ಯಪಾನ
– ಆತ್ಮಹತ್ಯೆಗೆ ಪ್ರಯತ್ನ ಅಥವಾ ಸ್ವಹಾನಿಯ ಪ್ರಯತ್ನ
– ಶಾಲೆ ಅಥವಾ ಕೆಲಸದಲ್ಲಿ ಕಷ್ಟಪಡುವುದು
– ಚಟುವಟಿಕೆಗಳನ್ನು ನಿಲ್ಲಿಸುವುದು
– ರೂಢಿಗತ ಚಟುವಟಿಕೆಗಳಲ್ಲಿ ನಿರಾಸಕ್ತಿ
– ನಿದ್ದೆ ಮಾಡುವುದಕ್ಕೆ ಅಥವಾ ಆಹಾರ ಸೇವಿಸುವುದಕ್ಕೆ ನಿರಾಸಕ್ತಿ, ಕಷ್ಟ
– ಅತಿ ವೇಗದಲ್ಲಿ ಚಲಾಯಿಸುವುದೇ ಮುಂತಾದ ಅಪಾಯಕಾರಿ ವರ್ತನೆಗಳು

ದೈಹಿಕ ಸೂಚನೆಗಳು
– ತಮ್ಮ ಸ್ವರೂಪ, ವೈಯಕ್ತಿಕ ನೈರ್ಮಲ್ಯ, ಬಟ್ಟೆಬರೆಯ ಬಗ್ಗೆ ನಿರಾಸಕ್ತಿ
– ದೀರ್ಘ‌ಕಾಲಿಕ ನೋವು ಮುಂತಾಗಿ ಸತತ ದೈಹಿಕ ದೂರು 
– ಹಸಿವು ನಷ್ಟ ಅಥವಾ ಹೆಚ್ಚುವುದರಿಂದ ತೂಕ ನಷ್ಟ ಅಥವಾ ಗಳಿಕೆ
– ಏಕಾಗ್ರತೆಯ ಕೊರತೆ ಅಥವಾ ದಣಿವು

ವಾಚಿಕ ಸೂಚನೆಗಳು
– ತನ್ನನ್ನು ತಾನು ಕೊಂದುಕೊಳ್ಳುವ ಬೆದರಿಕೆ
– “ನಾನು ಸತ್ತು ಹೋದರೆ ಯಾರಿಗೂ ಏನೂ ನಷ್ಟವಿಲ್ಲ’ ಮುಂತಾದ ಮಾತುಗಳು
– ಇತರರಿಗೆ ಹೊರೆಯಾಗಿರುವ ಬಗ್ಗೆ ಮಾತನಾಡುವುದು
– ನಿಕಟ ಬಂಧುಗಳು, ಕುಟುಂಬಿಕರು, ಗೆಳೆಯ ಗೆಳತಿಯರಿಗೆ ವಿದಾಯ ಹೇಳುವುದು, ಮೌಲ್ಯಯುತ ಅಥವಾ ತುಂಬಾ ಇಷ್ಟವಾದ ವಸ್ತುಗಳನ್ನು ತೊರೆಯುವುದು ಅಥವಾ ವಿಲ್‌ ಬರೆಯುವುದು.
(ಮುಂದುವರಿಯುತ್ತದೆ)

Advertisement

Udayavani is now on Telegram. Click here to join our channel and stay updated with the latest news.

Next