Advertisement
ಕುಕ್ಕಿಹಳ್ಳಿಯ ರಕ್ಷಿತಾ ನಾಯಕ್ (19) ಮೃತ ಯುವತಿ. ಯುವತಿಯ ಪ್ರಿಯಕರ ಪ್ರಶಾಂತ್ ಕುಂದರ್ ಎಂಬಾತ ಆತನ ಪತ್ನಿಯನ್ನು ತೊರೆದು ತನ್ನ ಜತೆ ಸಂಸಾರ ಮಾಡಿಲ್ಲವೆಂದು ನೊಂದುಕೊಂಡು ಯುವತಿ ಅಂಬಾಗಿಲಿನಲ್ಲಿರುವ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಪ್ರಿಯಕರನಿಗೆ ಕರೆಮಾಡಿ “ನನ್ನ ಜತೆ ಸಂಸಾರ ಮಾಡಬೇಕು. ಇಲ್ಲವಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದುವೇ ನನ್ನ ಕೊನೆಯ ಕರೆಯಾಗಬಹುದು’ ಎಂದು ದೂರವಾಣಿ ಮೂಲಕ ಎಚ್ಚರಿಕೆ ನೀಡಿದ್ದಳು. ಇದರಿಂದ ಹೆದರಿದ ಪ್ರಿಯಕರ ತತ್‌ಕ್ಷಣ ಆಕೆಯ ಮನೆಯತ್ತ ತೆರಳಿದ್ದಾನೆ. ಆದರೆ ಆ ವೇಳೆಗಾಗಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಇದನ್ನು ಮನೆಯ ಹೊರಭಾಗದಿಂದ ನೋಡಿದ್ದ ಆತ ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿ ಆಕೆಯನ್ನು ಆಟೋದಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹುಡುಗಿಯ ಮನೆಯವರಿಗೆ ಮಾಹಿತಿ ನೀಡಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯ
ಇಂಟಿರಿಯರ್ ಡಿಸೈನ್ ಕೆಲಸ ಮಾಡುತ್ತಿದ್ದ ಪ್ರಶಾಂತ್‌ಗೆ ಇನ್‌ಸ್ಟಾಗ್ರಾಂ ಮೂಲಕ ರಕ್ಷಿತಾಳ ಪರಿಚಯವಾಗಿತ್ತು. ಆನ್‌ಲೈನ್‌ನಲ್ಲಿ ಇವರು ಇಂಟಿರಿಯರ್ ಡಿಸೈನ್ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದ ಈಕೆಗೆ 40 ಸಾವಿರಕ್ಕೂ ಅಧಿಕ ಮಂದಿ ಫಾಲೋವರ್ಸ್‌ಗಳಿದ್ದರು.
Related Articles
ತನಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದು ಉತ್ತಮ ವೇತನವೂ ಇದೆ. ಉಡುಪಿಯಲ್ಲಿ ಸ್ನೇಹಿತೆಯೊಂದಿಗೆ ವಾಸವಿರುವುದಾಗಿ ಮನೆಯಲ್ಲಿ ತಿಳಿಸಿದ್ದಳು. 15 ದಿನಕ್ಕೊಮ್ಮೆ ಮನೆಗೂ ತೆರಳುತ್ತಿದ್ದಳು, ಕೆಲವು ಬಾರಿ ಪ್ರಶಾಂತ್ ಈಕೆಯೊಂದಿಗೂ ಕಾಣಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಪ್ರಶಾಂತ್‌ನನ್ನು ಉಡುಪಿ ಪೊಲೀಸರು ಸೋಮವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. “ನನ್ನ ಜತೆ ಸಂಸಾರ ನಡೆಸಲು ಆಕೆ ಒತ್ತಾಯಪಡಿಸುತ್ತಿದ್ದಳು. ನನಗೆ ಮದುವೆಯಾಗಿದೆ ಎಂದು ಹೇಳಿದ್ದೆ’
Advertisement