ಮೃತ ಇಂದ್ರಪಾಲ್ ನಿಶಾದ್ ಗುಜರಾತ್‌ನ ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ರಜೆ ಹಿನ್ನೆಲೆಯಲ್ಲಿ ಕಾನ್ಪುರಕ್ಕೆ ಆಗಮಿಸಿದ್ದ.
Advertisement
ಕಾನ್ಪುರದ ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಶುಕ್ರವಾರ ಫೇಸ್‌ಬುಕ್ ಲೈವ್‌ಗೆ ಬಂದಿದ್ದ ನಿಶಾದ್, ತನ್ನ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದ. ಶನಿವಾರ ಸಂಜೆ ಜಗಳ ನಡೆದು, ಪತ್ನಿ ಮತ್ತು ಮಕ್ಕಳನ್ನು ಥಳಿಸಿ, ತೀವ್ರವಾಗಿ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾನೆ. ನಂತರ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.