Advertisement

ಲಂಕಾ; Suicide ಬಾಂಬರ್ಸ್ ಬೆಂಗಳೂರು, ಕೇರಳದಲ್ಲಿ ತರಬೇತಿ ಪಡೆದಿದ್ದರೇ?Army

09:38 AM May 06, 2019 | Team Udayavani |

ಕೊಲಂಬೋ:ಶ್ರೀಲಂಕಾದಲ್ಲಿ ಈಸ್ಟರ್ ರವಿವಾರದಂದು ಕೆಲವು ಆತ್ಮಹತ್ಯಾ ಬಾಂಬರ್ಸ್ ಗಳು ಸರಣಿ ದಾಳಿ ನಡೆಸುವ ಮೂಲಕ 300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಅಲ್ಲದೇ ಭಯೋತ್ಪಾದನಾ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ಕರ್ನಾಟಕ, ಕೇರಳಕ್ಕೆ ಭೇಟಿ ನೀಡಿದ್ದು, ತರಬೇತಿ ಪಡೆದಿರುವ ಸಾಧ್ಯತೆ ಇದ್ದಿರುವುದಾಗಿ ಶ್ರೀಲಂಕಾ ಮಿಲಿಟರಿ ವರಿಷ್ಠರು ತಿಳಿಸಿದ್ದಾರೆ.

Advertisement

ಆತ್ಮಹತ್ಯಾ ಬಾಂಬರ್ ಗಳು ಕಾಶ್ಮೀರ, ಬೆಂಗಳೂರು, ಕೇರಳಕ್ಕೆ ತೆರಳಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನಾನಾಯಕೆ ಬಿಬಿಸಿ ವರ್ಲ್ಡ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಕೆಲವು ವಿದೇಶಿ ಸಂಘಟನೆಗಳ ಜೊತೆ ತರಬೇತಿ ಪಡೆಯುವ ನಿಟ್ಟಿನಲ್ಲಿ ಅವರು ಭಾರತಕ್ಕೆ ಭೇಟಿ ನೀಡಿರುವ ಸಾಧ್ಯತೆ ಇದ್ದಿರಬಹುದು ಎಂದು ಸೇನಾನಾಯಕೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.  ಏಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆಸಿದ್ದ ಭೀಕರ ಆತ್ಮಹತ್ಯಾ ಬಾಂಬರ್ ದಾಳಿಗೆ ಕನಿಷ್ಠ ಒಂಬತ್ತು ಮಂದಿ ಆತ್ಮಹತ್ಯಾ ದಾಳಿಕೋರರು ಹೊಣೆಗಾರರು ಎಂದು ವರದಿ ತಿಳಿಸಿದೆ.

ಶ್ರೀಲಂಕಾದಲ್ಲಿ ಈಸ್ಟರ್ ಸಂಡೆಯಂದು ಶಂಕಿತ ಉಗ್ರರಿಂದ ಭಯೋತ್ಪಾದನಾ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭಾರತ ಕೆಲವು ಬಾರಿ ಎಚ್ಚರಿಕೆ ನೀಡಿತ್ತು. ಅಷ್ಟೇ ಅಲ್ಲ ಏಪ್ರಿಲ್ 21ರಂದು ಮೊದಲ ಆತ್ಮಹತ್ಯಾ ಬಾಂಬರ್ ದಾಳಿ ನಡೆಸುವ ಒಂದು ಗಂಟೆ ಮೊದಲು ಕೂಡಾ ಭಾರತ ಶ್ರೀಲಂಕಾ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಆದರೆ ಲಂಕಾ ಗುಪ್ತಚರ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ದೊಡ್ಡ ದುರಂತ ನಡೆದು ಹೋಗಲು ಕಾರಣವಾಯ್ತು ಎಂದು ಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next