ಈದ್ ಮಿಲಾದ್ ಹಬ್ಬದ ಆಚರಣೆಗೆ ಸಜ್ಜುಗೊಂಡಿದ್ದ ಬಲೂಚಿಸ್ತಾನ ಪ್ರಾಂತ್ಯದ ಮಸ್ತುಂಗ್ ನಗರದ ಮದೀನಾ ಮಸೀದಿಯಲ್ಲಿ ಮೊದಲಿಗೆ ಆತ್ಮಾಹುತಿ ದಾಳಿ ನಡೆದಿದೆ. ಮಸೀದಿಗೆ ತೆರಳಿದ್ದ ಡಿಎಸ್‌ಪಿ ನವಾಜ್ ಗಿಶ್ಕೋರಿ ಅವರ ಕಾರಿನ ಬಳಿಯಲ್ಲೇ ಸ್ಫೋಟ ಸಂಭವಿಸಿದ್ದು, ಮೃತರ ಪೈಕಿ ನವಾಜ್ ಕೂಡ ಸೇರಿದ್ದಾರೆ. ಸ್ಫೋಟದ ತೀವ್ರತೆಗೆ 50 ಮಂದಿ ಗಾಯಗೊಂಡು, 52 ಮಂದಿ ಮೃತರಾಗಿದ್ದಾರೆ.
Advertisement
ಇದಾದ ಬೆನ್ನಲ್ಲೇ ಜುಮಾ ಪ್ರಾರ್ಥನೆಗಾಗಿ ಜನರು ಸೇರಿದ್ದ ಖೈಬರ್‌ಪಖುಂಖ್ವಾದಲ್ಲಿನ ಮಸೀದಿಯ ಒಳಗೆ ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಘಟನೆಯಲ್ಲಿ 4 ಮಂದಿ ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದವರ ಪೈಕಿ ಒಬ್ಬ ಉಗ್ರನನ್ನು ಪೊಲೀಸರು ಗುರುತಿಸಿ ಹೊಡೆದುರುಳಿಸಿದ್ದಾರೆ. ಇನ್ನೊಬ್ಬ ಪೊಲೀಸರ ಕೈನಿಂದ ತಪ್ಪಿಸಿಕೊಂಡು ಮಸೀದಿಗೆ ತೆರಳಿ ಸ್ಫೋಟ ನಡೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.