Advertisement

ಅಫ್ಘಾನಿಸ್ತಾನ: ಆತ್ಮಾಹುತಿ ದಾಳಿಗೆ 29 ಬಲಿ

08:06 AM Aug 02, 2017 | |

ಹೆರಾತ್‌: ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಹೆರಾತ್‌ನ ಮಸೀದಿಯೊಂದರ ಮೇಲೆ ಮಂಗಳವಾರ ಇಬ್ಬರು ಉಗ್ರರು ದಾಳಿ ಮಾಡಿ 29 ಜನರನನ್ನು ಬಲಿ ಪಡೆದಿದ್ದಾರೆ.

Advertisement

ಶಿಯಾ ಪಂಗಡದವರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದಾರೆ.  ಹೆರಾತ್‌ ನಗರದ ಡೆಹರ್‌ ಅಬಾದ್‌ ಜವಾಡಿಯ ಮಸೀದಿಯೊಳಗೆ ನುಗ್ಗಿದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಪರಿಣಾಮ 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಎರಡು ದಿನಗಳ ಹಿಂದಷ್ಟೇ ರಾಜಧಾನಿ ಕಾಬೂಲ್‌ನಲ್ಲಿರುವ  ಇರಾಕ್‌ ರಾಯಭಾರಿ ಕಚೇರಿ ಮೇಲೆ ಐಸಿಸ್‌ ಉಗ್ರರು ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next