Advertisement

ಆತ್ಮಹತ್ಯೆ, ವಂಚನೆ ಎರಡೂ ಆಯಾಮಗಳಲ್ಲೂ ತನಿಖೆ

08:35 AM Jul 21, 2017 | Harsha Rao |

ಕಾಪು: ಪಡುಬೆಳ್ಳೆಯಲ್ಲಿ ಒಂದೇ ಕುಟುಂಬದ ನಾಲ್ಕು ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸ್‌ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ತನಿಖಾ ಹಂತದಲ್ಲಿ ಆತ್ಮಹತ್ಯೆಗೆ ನಿಖರ ಕಾರಣಗಳ ಬಗ್ಗೆ ಹೇಳಲಾಗದು ಎಂದು ಉಡುಪಿ ಎಸ್ಪಿ ಕೆ. ಟಿ. ಬಾಲಕೃಷ್ಣ ಹೇಳಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪಡುಬೆಳ್ಳೆ ಘಟನೆಯ ಬಗ್ಗೆ ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿಕೊಳ್ಳಲಾಗಿದೆಯಾದರೂ, ಅದರ ಜೊತೆಗೆ ನಕಲಿ ಚಿನ್ನಾಭರಣ ನೀಡಿ ಬ್ಯಾಂಕ್‌ಗೆ ವಂಚಿಸಿದ ಘಟನೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು. 

ಮೃತ ಶಂಕರ್‌ ಆಚಾರ್ಯ ಅವರು ಇನ್ನಂಜೆ ಸಿ. ಎ. ಬ್ಯಾಂಕ್‌ನಲ್ಲಿ ಸುಮಾರು 2.75 ಕೆ. ಜಿ. ತೂಕದಷ್ಟು ನಕಲಿ ಚಿನ್ನ ಅಡವಿರಿಸಿ 64 ಲಕ್ಷ ರೂ. ಸಾಲ ಪಡೆದಿರುವ ಬಗ್ಗೆ ಮಾಹಿತಿಯಿದ್ದು, ಕರ್ತವ್ಯ ಲೋಪವಿಲ್ಲದೇ ತನಿಖೆ ನಡೆಯುತ್ತಿದೆ. ಅದುವರೆಗೂ ನಾವು ಕಾಯಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next