Advertisement

ಕನ್ನಡ ಶಾಲೆ ಉಳಿಸಿ-ಬೆಳೆಸಲು ಸಲಹೆ

12:44 PM Nov 27, 2018 | |

ವಿಜಯಪುರ: ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುವ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಕಂಕಣಬದ್ಧರಾಗಬೇಕು ಎಂದು ಕರವೇ (ಪ್ರವೀಣ ಶೆಟ್ಟಿ ಬಣ) ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಶರಣು ಗದ್ದುಗೆ ಕರೆ
ನೀಡಿದರು.

Advertisement

ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದಿಂದ ಹಮ್ಮಿಕೊಂಡಿದ್ದ ಕನ್ನಡ ಅಭಿಮಾನ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ, ಮಕ್ಕಳಿಗೆ ಕನ್ನಡ ಶಿಕ್ಷಣ ದೊರಕಬೇಕಿದೆ. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲಿಸಬೇಕು, ಆಗ ಮಾತ್ರ ಕನ್ನಡ ಶಾಲೆಗಳು ಉಳಿಯಲು ಸಾಧ್ಯ. ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವ ಸಂಕಲ್ಪ ಮಾಡಬೇಕು, ಕನ್ನಡ ಮಾತನಾಡಬೇಕು, ಕನ್ನಡ ಕುರಿತು ಅಭಿಮಾನ ಹೊಂದಬೇಕು, ಕನ್ನಡ ಜಾಗೃತಿಯ ಕಾರ್ಯ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ ಎಂದರು.

ಕನ್ನಡ ನಾಡು, ನುಡಿ ಜಲಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಾ ಬಂದಿದೆ, ಕನ್ನಡ ಪರವಾದ ಹೋರಾಟವೇ ಸಂಘಟನೆಯ ಪ್ರಧಾನ ಧ್ಯೇಯ ಎಂದರು. ಯರನಾಳ ವಿರಕ್ತಮಠದ ಗುರುಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶಕ್ತಿಕುಮಾರ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ಡಾ| ಸುರೇಶ ಬಿರಾದಾರ, ಶಂಕರ ಚವ್ಹಾಣ, ಶರಣು ಸಬರದ, ಬಿ.ಡಿ. ಹೆಬ್ಟಾಳ, ಎಸ್‌.ಎಂ. ಖೇಡಗಿ ವೇದಿಕೆಯಲ್ಲಿದ್ದರು. 

ಸಾಧಕರಿಗೆ ಸನ್ಮಾನ: ಸೈನಿಕರಾದ ಎಸ್‌.ಡಿ. ಪೋತರೆಡ್ಡಿ, ವಿ.ಎಸ್‌. ನಿಂಬಾಳಕರ, ಶಂಕರತಮ್ಮಣ್ಣ ಬಾಡಗಿ, ಉಸ್ಮಾನ ಅಲಿ ಮನಗೂಳಿ ಅವರಿಗೆ ವೀರಯೋಧ ಪ್ರಶಸ್ತಿ, ರೈತ ಸುಭಾಷ್‌ ಶಿರಬೂರ, ಸಂಗಪ್ಪ ಚಿಂಚಲಿ, ಸುರೇಶ ಚಿಂಚಲಿ, ಸೋಮಲಿಂಗ ಗಣಾಚಾರಿ, ಪ್ರಶಾಂತ ಕಲ್ಲಪ್ಪ ನಾಯಕ, ಸಂಗನಗೌಡ ಪಾಟೀಲ ಅನ್ನದಾತ ಪ್ರಶಸ್ತಿ, ಸಾಹಿತಿಗಗಳಾದ ಸಿದ್ದಣ್ಣ ಬಾಡಗಿ, ಸಿದ್ದು ದಿವಾನ, ಹಿರೇಸೋಮಣ್ಣನವರ, ಜಿ.ಡಿ. ಕೊಟ್ನಾಳ, ಆರ್‌.ಜಿ. ಮುತ್ತಿನಮಠ, ಎಸ್‌.ಎಸ್‌. ಉಕ್ಕಲಿ, ಎಸ್‌.ಎಂ. ಖೇಡಗಿ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ, ಪತ್ರಕರ್ತರಾದ ಗೋಪಾಲ ನಾಯಕ, ರಫಿಕ್‌ ಭಂಡಾರಿ, ಮೋಹನ ಕುಲಕರ್ಣಿ, ಸಂಗಮೇಶ ಚೂರಿ, ರುದ್ರಪ್ಪ ಆಸಂಗಿ, ಅಶೋಕ ಕುಲಕರ್ಣಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಯೋಗ ಗುರುಗಳಾದ ಆನಂದ ಭೂತಾಡಿ, ಪರಶುರಾಮ ಜಾಲಗಾರ ಅತ್ಯುತ್ತಮ ಯೋಗ ಶಿಕ್ಷಕ ಪ್ರಶಸ್ತಿ, ಕಲಾವಿದರಾದ ಈಶ್ವರ ಉಮರಾಣಿ, ಸಾಗರ ಬಾಗಲಕೋಟ, ಸಂತೋಷ ಚವ್ಹಾಣ, ಆನಂದ ಹೂಗಾರ, ವಿರೇಶ ವಾಲಿ ಅವರಿಗೆ ಅತ್ಯುತ್ತಮ ಗಾಯಕ ಪ್ರಶಸ್ತಿ, ಮನೋಜ ಕೋಳಿ, ಚಿದಾನಂದ ಖತಿಜಾಪುರ, ಗೋಪಾಲ ಹೂಗಾರ, ಗೋಪಾಲ ಇಂಚಗೇರಿ ಹಾಸ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next