Advertisement

ನಿರ್ಭೀತ, ನ್ಯಾಯಯುತ ಮತದಾನಕ್ಕೆ ಸಲಹೆ

01:07 PM Mar 29, 2019 | Team Udayavani |

ಮುಳಬಾಗಿಲು: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮತದಾರರು ನ್ಯಾಯಯುತ ಹಾಗೂ ಮುಕ್ತ ಮತ್ತು ನಿರ್ಭೀತಿಯಿಂದ ಮತದಾನ ಮಾಡಲು ಪೌರಾಯುಕ್ತ ಎನ್‌.ರಾಜು ಮತ್ತು ತಾಪಂ ಇಒ ಡಾ.ಕೆ.ಸರ್ವೇಶ್‌ ಸಲಹೆ ನೀಡಿದರು

Advertisement

ಮುಳಬಾಗಿಲು ನಗರಸಭೆ ಕಾರ್ಯಾಲಯ ಮತ್ತು ತಾಪಂ ವತಿಯಿಂದ ಸ್ವೀಪ್‌ ಕಾರ್ಯಕ್ರಮದಡಿ ಕಡ್ಡಾಯ ಮತದಾನ ಮಾಡಲು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರಿಗೆ ಮತ್ತು ಕೆಎಸ್‌ಆರ್‌ಟಿಸಿ ಘಟಕದಲ್ಲಿ ವ್ಯವಸ್ಥಾಪಕ ದಯಾನಂದ್‌ ಒಳಗೊಂಡಂತೆ ಚಾಲಕರು ಮತ್ತು ನಿರ್ವಾಹಕರು ಹಾಗೂ ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಮಾತನಾಡಿದ ಪೌರಾಯುಕ್ತ ಎನ್‌.ರಾಜು, ಏ.18 ರಂದು ಲೋಕಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತದಾನ ನಡೆಯಲಿರುವುದರಿಂದ ಮತದಾರರು ಎಪಿಕ್‌ ಕಾರ್ಡ್‌ ಹಾಜರು ಪಡಿಸಿ ಮತದಾನ ಮಾಡಬೇಕಾಗಿರುತ್ತದೆ. ಚುನಾವಣಾ ಆಯೋಗವು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನ್ಯಾಯಯುತ ಹಾಗೂ ಮುಕ್ತ ಮತ್ತು ನಿರ್ಭೀತಿಯಿಂದ ಮತದಾನ ಮಾಡಲು 18 ವರ್ಷ ಮೇಲ್ಪಟ್ಟಿರಬೇಕಲ್ಲದೇ ಗುರುತಿಗಾಗಿ ಎಪಿಕ್‌ ಕಾರ್ಡ್‌ ಹೊಂದಿರಬೇಕು. ಮತಪಟ್ಟಿಯಲ್ಲಿ ಹೆಸರು ಖಾತ್ರಿ ಪಡಿಸಿಕೊಂಡು ಮತದಾನ ಮಾಡಬೇಕು. ಒಂದಕ್ಕಿಂತ ಹೆಚ್ಚುಕಡೆ ಪಟ್ಟಿಯಲ್ಲಿ ಹೆಸರಿರುವುದು ಕ್ರಿಮಿನಲ್‌ ಅಪರಾಧವಾಗಿದ್ದು, ಸಾಭೀತಾದರೆ ಒಂದು ವರ್ಷ ಜೈಲು ಸಜೆ ಕಡ್ಡಾಯ. ಹೀಗಾಗಿ ಮುಕ್ತ ಮತದಾನ ಮಾಡಿ ಎಂದು ಹೇಳಿದರು.

ನಗರಸಭೆ ಕಂದಾಯಾಧಿಕಾರಿ ವಠಾರ್‌, ಸ್ವೀಪ್‌ ಸದಸ್ಯರಾದ ಐ.ಸುನೀಲ್‌ಕುಮಾರ್‌ ಮತ್ತು ಶೋಭನ್‌ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ.ಆನಂದ್‌, ಡಾ.ಶಂಕರ್‌ ಮತ್ತು ಕೆಎಸ್‌ಆರ್‌ಟಿಸಿ ಘಟಕದ ಚಾಲಕರು ಮತ್ತು ನಿರ್ವಾಹಕರು ಹಾಗೂ ಸಿಬ್ಬಂದಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next