Advertisement

ಪರೀಕ್ಷೆಯಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳಿಗೆ ನೀವೇನು ಹೇಳಬಯಸುತ್ತೀರಿ?

04:28 PM Jul 15, 2020 | keerthan |

ಮಣಿಪಾಲ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಂದಿನಂತೆ ಬಾಲಕಿಯರೇ ಮೇಲಗೈ ಸಾಧಿಸಿದ್ದಾರೆ. ಈ ವರ್ಷ ಪಾಸಾದ ಮತ್ತು ಅಲ್ಪ ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳಿಗೆ ನೀವೇನು ಹೇಳಬಯಸುತ್ತೀರಾ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ರಾಘವೇಂದ್ರ ಬಿಲ್ಲವ: ಪರೀಕ್ಷೆಯು ಶಿಕ್ಷಣದ ಒಂದು ಭಾಗವಷ್ಟೆ. ಉತ್ತಮ ಅಂಕಗಳಿಸಿದ, ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿ ಮಿತ್ರರಿಗೂ ಅಭಿನಂದನೆಗಳು. ಸತತ ಪ್ರಯತ್ನದ ಹೊರತಾಗಿಯೂ ಉತ್ತಮ ಅಂಕಗಳಿಸುವಲ್ಲಿ ವಿಫಲರಾದ ನನ್ನ ಮಿತ್ರರಿಗೆ, ನಿಮ್ಮ ಪ್ರಯತ್ನ ಮುಂದುವರಿಯಲಿ. ಪ್ರಯತ್ನಕ್ಕೆ ತಕ್ಕ ಫಲ ಇದ್ದೆ ಇದೆ. ಇದು ಅಂತ್ಯವಲ್ಲ. ಎದೆಗುಂದದೆ ಅಧ್ಯಯನದ ಕಡೆ ಗಮನ ಕೊಡಿ. ಜೀವನದ ದಾರಿಯಲ್ಲಿ ತುಂಬಾ ದೂರ ಸಾಗಬೇಕಿದೆ. ಎಲ್ಲರ ಬುದ್ದಿಮತ್ತೆಯು ಒಂದೆ ರೀತಿ ಇರುವುದಿಲ್ಲ. ಇರಲು ಸಾಧ್ಯವೂ ಇಲ್ಲ. ತರಗತಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ತುಂಬಾ ಜನರು ಜೀವನದ ಪಯಣದಲ್ಲಿ ಸಾಧನೆಯ ಶಿಖರವನ್ನೆ ಏರಿದ ದೃಷ್ಟಾಂತ ಗಳು ನಮ್ಮ ಮುಂದೆ ಇದೆ. ಸೋಲಿಗೆ ಕುಗ್ಗದೆ, ತಪ್ಪುಗಳನ್ನು ಸರಿಪಡಿಸಿ ಮುಂದೆ ಸಾಧಕರಾಗೋಣ.

ದೇವರಾಜ್ ಗೋಣ್ಯಪ್ಪನವರ್: ಫೇಲ್ ಆದವರು ಮತ್ತು ಜೆಸ್ಟ್ ಪಾಸದವರೆ ಇತಿಹಾಸ ಸೃಷ್ಟಿಸುವವರು. ಉದಾ: ನಾನು ಪಿಯುಸಿ ನನ್ನ ಅಂಕಗಳು 177 ಮತ್ತೆ ಓದಿ ಇಂಜಿನಿಯರಿಂಗ್ ಪದವಿ ಪಡೆದು ಇವತ್ತು ನಾನು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯಲ್ಲಿ ಸಹಾಯಕ ಲೋಕೊ ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದೇನೆ.

ಮಂಜುನಾಥ್ ಮಿರ್ಜಿ: ಗೆದ್ದವನ ಬೆನ್ನು ತಟ್ಟುವುದು ಬಿಟ್ಟು, ಸೋತವನ ಬೆನ್ನು ಮೇಲೆ ಕೈ ಇಟ್ಟು ಸಂತಯಿಸುವುದು ಮುಖ್ಯ

ಸುರೇಶ್ ಕೆ ಸಿ: ಮರಳಿ ಯತ್ನ ಮಾಡಿದರೆ ಮುಂದೆ ಫಲಿತಾಂಶ ದೊರಕಬಹುದು

Advertisement
Advertisement

Udayavani is now on Telegram. Click here to join our channel and stay updated with the latest news.

Next