Advertisement

ಯುದ್ಧಕ್ಕೂ ಮುನ್ನ ಸೂತ್ರಾಭ್ಯಾಸ: ಗೆಳತಿ ಜತೆ ವಾದ ನಿಲ್ಲಿಸಲು 5 ಸೂತ್ರ

12:22 PM Aug 01, 2017 | Team Udayavani |

ಒಬ್ಬರು ವೃದ್ಧ ದಂಪತಿಗೆ, “ನಿಮ್ಮ ದೀರ್ಘ‌ ಕಾಲದ ದಾಂಪತ್ಯದ ಗುಟ್ಟೇನು?’ ಎಂದು ಪ್ರಶ್ನಿಸಿದಾಗ ತಾತ, “ನನಗೆ ಕಿವಿ ಕೇಳುವುದಿಲ್ಲ’ ಎಂದರಂತೆ! ಆದರೆ, ಇಂದಿನ ಯುವಜೋಡಿಗಳಿಗೆ ಕಿವಿ ಮತ್ತು ಬಾಯಿ ಸ್ವಲ್ಪ$ಜಾಸ್ತಿ ಕೆಲಸ ಮಾಡುತ್ತದೆ! ಪರಿಣಾಮವಾಗಿ, ವಾಗ್ವಾದ, ಜಗಳ, ಬ್ರೇಕಪ್‌ ಎಲ್ಲವೂ ತೀರಾ ಸಾಮಾನ್ಯ ಎನ್ನುವಂತೆ ಕಂಡುಬರುತ್ತವೆ.

Advertisement

ಬಹಳಷ್ಟು ಸಲ ಹುಡುಗರು ದುಡುಕಿ ಸುಖಾಸುಮ್ಮನೆ ಜಗಳವಾಡಿ ಆಮೇಲೆ ಒಬ್ಬರೇ ಕುಳಿತು ಹಣೆ ಹಣೆ ಚಚ್ಚಿಕೊಳ್ಳುತ್ತಾರೆ. ನಂತರ ಥತ್‌, ನಾನು ಆವೇಶದಲ್ಲಿ ಮಾತಾಡಿಬಿಟ್ಟೆ ಎಂದುಕೊಂಡು ಅದೇ ಬೇಸರದಲ್ಲಿ ಗುಂಡುಹಾಕಿ ಪಶ್ಚಾತ್ತಾಪ ಪಡುತ್ತಾರೆ. ಎಲ್ಲ ಸಮಸ್ಯೆಗಳಿಗೂ ಬಗೆಬಗೆಯ ಸೂತ್ರಗಳಿರುವ ಈ ದಿನಗಳಲ್ಲಿ, ಗೆಳತಿಯೊಂದಿಗಿನ ವಾದ ನಿಲ್ಲಿಸಲು ಕೆಲವು ಜಾಣ ಸಲಹೆಗಳು ಇಲಿವೆ…

1. ಯಾವುದೇ ಚಿಕ್ಕ ವಿಷಯಕ್ಕೆ ನಿಮ್ಮ ಹುಡುಗಿ ಬೇಸರಿಸಿಕೊಂಡು ಸಿಟ್ಟಾದರೆ, ನೀವು ಪ್ರತಿಯಾಗಿ ಸಿಟ್ಟು ಮಾಡಿಕೊಳ್ಳದಿರಿ. ಶಾಂತತೆಯನ್ನು ಕಾಪಾಡಿಕೊಳ್ಳಿ. ಗೆಳತಿಯ ಸಿಟ್ಟಿಗೆ ಮೂಲ ಕಾರಣವನ್ನು ಹುಡುಕುವ ಪ್ರಯತ್ನ ಮಾಡಿ.

2. ಜಗಳ, ವಾದಗಳೆಂದರೆ ಅಲ್ಲಿ ಕೆಟ್ಟಪದ ಬಯುಳಗಳದ್ದೇ ಕಾರುಬಾರು. ನೀವು ಕೆಟ್ಟ ಪದ ಬಳಸಿ ವಾದಿಸಿದರೆ ಅವರೂ ಅದೇ ದಾರಿ ಹಿಡಿಯಬಹುದು ಅಥವಾ ಆ ಹುಡುಗಿ ಬಹಳ ಸೂಕ್ಷ್ಮ ಮನಸ್ಸಿನವಳಾಗಿದ್ದರೆ, ನಿಮ್ಮ ಒರಟು ಮಾತನ್ನು ಕೇಳಿ ಶಾಕ್‌ ಆಗಿ, ಎದ್ದು ಹೋಗಿಬಿಡಬಹುದು. ಹಾಗಾಗಿ, ಜಗಳದ ಸಂದರ್ಭದಲ್ಲಿ ಆದಷ್ಟೂ ಸಂಭಾವಿತ ಭಾಷೆ ಬಳಸಿ.

3. ಹುಡುಗಿಯರು ಹುಡುಗರಿಗಿಂತ ಕೋಮಲ ದನಿಯುಳ್ಳವರು. ತಮ್ಮ ಹುಡುಗನೂ ತಮ್ಮಂತೆಯೇ ಮಾತಾಡಲಿ ಎಂದೇ ಅವರು ಆಸೆ ಪಡುತ್ತಾರೆ. ಆದರೆ, ಕೆಲವೊಂದು ಸನ್ನಿವೇಶದಲ್ಲಿ ಹುಡುಗರು ಸಾರ್ವಜನಿಕವಾಗಿ ಗೆಳತಿಗೆ ಏರು ಧ್ವನಿಯಲ್ಲಿ ಏಕವಚನ ಬಳಕೆ ಮಾಡಿ ಬಿಡುವುದುಂಟು. ಇದರಿಂದ ಸಂಬಂಧ ಶಾಶ್ವತವಾಗಿ ಹದಗೆಡಬಹುದು. ಹಾಗಾಗಿ, ಎಚ್ಚರಿಕೆಯಿಂದ ವ್ಯವಹರಿಸಿ. 

Advertisement

4. ಕೆಲ ಹುಡುಗರು ಗೆಳತಿಯರಿಗೆ ಮಾತಾಡುವ ಅವಕಾಶವನ್ನೇ ನೀಡುವುದಿಲ್ಲ. ಅವರ ಬೇಕು ಬೇಡಗಳಿಗೆ ಕಿವಿಯಾಗುವುದಿಲ್ಲ. ತಮ್ಮ ಬಗ್ಗೆಯೇ ಕೊಚ್ಚಿಕೊಳ್ಳುತ್ತಿರುತ್ತಾರೆ. ಅದರ ಬದಲಿಗೆ ಅವರಿಗೂ ಮಾತಾಡಲು ಅವಕಾಶ ನೀಡಿ, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದರೆ, ಸಣ್ಣಪುಟ್ಟ ವ್ಯತ್ಯಾಸಗಳು ಮಾಯವಾಗಿ ಸ್ನೇಹ ಗಾಢವಾಗುವುದು.

5. ನಿಮ್ಮ ಕಡೆಯಿಂದ ಆಕಸ್ಮಿಕವಾಗಿ ತಪ್ಪು ಆಗಿರುತ್ತದೆ. ಅದು ಸಹಜವೇ… ಆದರೆ, ತಪ್ಪು$ಮಾಡಿದಾಗ, “ನಾನು ಗಂಡಸು. ನನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ’ ಎಂಬ ಅಹಂ ಒಳ್ಳೆಯದಲ್ಲ. ನಿಮ್ಮ ತಪ್ಪನ್ನು ನಿಮ್ಮ ಗೆಳತಿಗೆ ಹೇಳಿದರೆ, ಕ್ಷಮಾಯಾಧರಿತ್ರಿ ಗುಣದ ಹುಡುಗಿಯರು ಖಂಡಿತವಾಗಿಯೂ ಕ್ಷಮಿಸುವರು. ಆಗ ವಾಗ್ವಾದ, ಜಗಳಕ್ಕೆ ಆಸ್ಪದವಿರುವುದಿಲ್ಲ .

ಸಿ.ಜಿ. ವೆಂಕಟೇಶ್ವರ, ಗೌರಿಬಿದನೂರು

Advertisement

Udayavani is now on Telegram. Click here to join our channel and stay updated with the latest news.

Next