Advertisement
ಹೌದು. ಧಾರವಾಡ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ರಭಸದ ಬೆಳೆಯಾಗಿ ಎಲ್ಲಾ ಸಾಂಪ್ರದಾಯಿಕ ಬೆಳೆಗಳನ್ನು ಹಿಂದಿಕ್ಕಿ ಮುನ್ನಡೆದ ಕಬ್ಬು ಬೆಳೆ ಈ ವರ್ಷ 90 ಸಾವಿರ ಹೆಕ್ಟೇರ್‌ಗೆ ಏರಿಕೆಯಾಗಿದೆ. ಅದರಲ್ಲೂ ಕಲಘಟಗಿ,ಧಾರವಾಡ-ಅಳ್ನಾವರ ತಾಲೂಕಿನಲ್ಲಿ ಶೇ.80 ಕಬ್ಬು ಬೆಳೆ ಆವರಿಸಿದ್ದು, ಇನ್ನುಳಿದ ಎಲ್ಲಾ ಬೆಳೆಗಳು ಮಂಗಮಾಯವಾಗಿ ಹೋಗಿವೆ.
Related Articles
Advertisement
ಉತ್ತಮ ಹೈನು: ಇನ್ನು ಕಬ್ಬಿನ ಸ್ವಾಗಿ ಸಿಹಿಯಾಗಿರುವುದರಿಂದ ಜಾನುವಾರುಗಳು ಕೂಡ ಇದನ್ನು ಇಷ್ಟ ಪಟ್ಟು ತಿನ್ನುತ್ತಿದೆ. ಅಷ್ಟೇಯಲ್ಲ, ಉತ್ತಮ ಹಾಲು ನೀಡುತ್ತಿವೆ. ಹೀಗಾಗಿ ಯುವಕರು ನಾಲ್ಕು ಆಕಳು ಅಥವಾ ಎಮ್ಮೆಗಳನ್ನು ತಮ್ಮ ಹೊಲದಲ್ಲಿ ಕಟ್ಟಿಕೊಂಡಾದರೂ ಸರಿ ಹೈನುಗಾರಿಕೆ ಮಾಡಬಹುದು ಎನ್ನುವ ಧೈರ್ಯ ತೋರುತ್ತಿದೆ. ಇದರಲ್ಲಿನ ಸಿಹಿ ಪ್ರಮಾಣದಿಂದ ಜಾನುವಾರಗಳು ಇದು ಅರ್ಧಮರ್ಧ ಒಣಗಿದರೂ ತಿಂದು ಬಿಡುತ್ತವೆ. ಇದು ಜಾನುವಾರು ಸಾಕುವ ರೈತರಿಗೆ ವರದಾನವಾಗಿ ಪರಿಣಮಿಸಿದೆ.
ಉಚಿತ ಪೂರೈಕೆ: ಇನ್ನು ರೈತರು ತಮ್ಮ ಹೊಲದಲ್ಲಿನ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಸ್ವಾಗಿಮೇವು ಅರಸಿ ಬರುವ ಯಾವುದೇ ರೈತರಿಗೆ ಬೇಡ ಎನ್ನುವುದಿಲ್ಲ. ಹಸಿ ಸ್ವಾಗಿ ಮೇವು ಕಬ್ಬು ಕಟಾವಿನ ನಂತರ ಉಳಿದರೆ ಅದು ಒಣಗಿ ಹೋಗುತ್ತದೆ. ನಂತರ ಅದನ್ನು ಸುಟ್ಟು ಹಾಕಬೇಕು ಅಥವಾ ರೂಟೇಟರ್ ಹೊಡೆದು ಗೊಬ್ಬರ ಮಾಡಬೇಕು. ಹೀಗಾಗಿ ದನಕರುಗಳಿಗೆ ಮೇವು ಬೇಕೆಂದು ಬಂದವರಿಗೆ ಕಬ್ಬು ಬೆಳೆದವರು ಕಟಾವಿನ ವೇಳೆ ಉಚಿತವಾಗಿಯೇ ಸ್ವಾಗಿ ಮೇವು ನೀಡುತ್ತಾರೆ.
ಬದಲಾಯ್ತು ಜಾನುವಾರ ಆಹಾರ ಕ್ರಮಮೊದಲು ಒಣ ಭತ್ತದ ಹುಲ್ಲು, ಕಡ್ಡ, ಗಾಂವಠಾಣಾ ವ್ಯಾಪ್ತಿಯಲ್ಲಿನ ದೇಶಿ ತಳಿಯ ಹುಲ್ಲನ್ನು ರೈತರು ಶೇಖರಣೆ ಮಾಡಿಟ್ಟು ಬೇಸಿಗೆಯಲ್ಲಿ ಅದನ್ನು ಒಣಗಿಸಿ ಒಟ್ಟಾಗಿಸಿ ಬಣವಿ ಹಾಕುತ್ತಿದ್ದರು. ಅದನ್ನು ಮಳೆಗಾಲ ಅಥವಾ ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ತಿನ್ನಿಸುತ್ತಿದ್ದರು. ಆದರೆ ಇದೀಗ ಆರು ತಿಂಗಳು ಕಬ್ಬಿನ ಸ್ವಾಗಿಮೇವು ಲಭ್ಯವಾಗುತ್ತಿದೆ. ಮಳೆಗಾಲ ನಂತರವೂ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿದೆ. ಅದೂ ಅಲ್ಲದೇ ಕಬ್ಬಿನ ಗದ್ದೆಗಳ ಮಧ್ಯದ ಬದುಗಳಲ್ಲಿ ಹೈಬ್ರಿಡ್ ಹುಲ್ಲು ನೆಡುತ್ತಿದ್ದಾರೆ. ಅದು ಕೂಡ ವರ್ಷಪೂರ್ತಿಯಾಗಿ ಹಸಿರು ಮೇವಾಗಿ ಲಭ್ಯವಿದೆ. ಒಟ್ಟಿನಲ್ಲಿ ಮನುಷ್ಯ ಮಾತ್ರವಲ್ಲ, ಜಾನುವಾರಗಳ ಆಹಾರ ಕ್ರಮ ಕೂಡ ಇದೀಗ ಬದಲಾಗಿದೆ. ಕಬ್ಬಿನ ಸ್ವಾಗಿಯಲ್ಲಿ ಸಾಕಷ್ಟು ಉತ್ತಮ ಪೋಷಕಾಂಶಗಳು ಇದ್ದು ಇದು ಜಾನುವಾರುಗಳು ಇಷ್ಟಪಟ್ಟು ತಿನ್ನುವ ಮೇವಾಗಿದೆ. ಹೈನುಗಾರಿಕೆ ಹುಲುಸಾಗಲಿದ್ದು, ಜಾನುವಾರುಗಳು ಗಟ್ಟಿಯಾಗಲಿವೆ. ರೈತರು ಇದನ್ನು ಮೇವಾಗಿ ಪರಿವರ್ತಿಸಿಕೊಂಡಿದ್ದು ಉತ್ತಮ ಸಂಗತಿ.
ಉಮೇಶ ಕೊಂಡಿ,ಡಿ.ಡಿ.,
ಪಶುಪಾಲನಾ ಇಲಾಖೆ,ಧಾರವಾಡ. ಮೊದಲಿನಂತೆ ಹಳ್ಳಿಗಳಲ್ಲಿ ಜಾನುವಾರು ಸಾಕಾಣಿಕೆ ಸಾಧ್ಯವಿಲ್ಲ. ಈಗ ಅಳಿದುಳಿದ ಎರಡೂ¾ರು ಜಾನುವಾರುಗಳನ್ನು ಸಾಕಲು ಕಬ್ಬಿನ ಸ್ವಾಗಿಮೇವು ಆಧಾರವಾಗಿದೆ. ಹೀಗಾಗಿ ಇದನ್ನೇ ಬಳಸಿಕೊಂಡು ಹೈನುಗಾರಿಕೆ ಮಾಡುತ್ತಿದ್ದೇವೆ.
ಮಂಜುನಾಥ ಪೂಜಾರ,
ಕಬ್ಬು ಬೆಳೆಗಾರ, ಮನಸೂರು. *ಡಾ|ಬಸವರಾಜ ಹೊಂಗಲ್