Advertisement

ಕಬ್ಬು ಬೆಳೆಗಾರರಿಗೆ ತೊಂದರೆ ಆಗಲು ಬಿಡುವುದಿಲ್ಲ

07:01 AM Jul 08, 2020 | Lakshmi GovindaRaj |

ಚನ್ನರಾಯಪಟ್ಟಣ: ಕಬ್ಬು ಬೆಳೆಗಾರರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ರಾಜ್ಯ ಸರ್ಕಾರ ಬಿಡುವುದಿಲ್ಲ ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಅವರು ವಿಶ್ವಾಸ ವ್ಯಕ್ತ ಪಡಿಸಿದರು. ತಾಲೂಕಿನ  ಶ್ರೀನಿವಾಸಪುರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದ ಅವರು, ಹಲವು ವರ್ಷದಿಂದ ಕಬ್ಬು ಅರೆಯದೇ ಕಾರ್ಖಾನೆ ಉನ್ನತೀಕರಣಕ್ಕೆ ಮುಂದಾಗಿದೆ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ  ಖಾಸಗಿಯವರು ತಮ್ಮ ಕಾರಾರಿನ ಪ್ರಕಾರ ಕಾರ್ಖಾನೆ ಚಾಲನೆ ನೀಡಬೇಕು ಎಂದು ಆದೇಶಿಸಿದರು.

Advertisement

ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕಬ್ಬು ಬೆಳೆ ಜಮೀನಿನಲ್ಲಿಯೇ ಹಾಳಾಗಬಾರದು, ಆದರೆ ನಿಮ್ಮ ವಿಳಂಬದ  ಕಾಮಗಾರಿ ಯಿಂದ ತಾಲೂಕಿನಲ್ಲಿ ರೈತರ ಕಬ್ಬು ಜಮೀನಿನಲ್ಲಿಯೇ ಉಳಿದಿದೆ. ಕೊರೊನಾ ವೇಳೆ ರೈತರಿಗೆ ತೊಂದರೆ ಆಗುತ್ತಿದೆ ಎಂದರಲ್ಲದೇ ಸರ್ಕಾರದಿಂದ ಮೈಷುಗರ್‌ ಕಾರ್ಖಾನೆಗೆ 439 ಕೋಟಿ ರೂ. ಬಂಡವಾಳ  ಹಾಕಿದ್ದೇವೆ ಇದರಿಂದ ನಾಲ್ಕು ಕಾರ್ಖಾನೆಗಳನ್ನು ತೆರೆಯ ಬಹುದು ಆದರೆ ಕೈಗೊಂಡಿರುವ ಕಾಮಗಾರಿ ಪೂರ್ಣಗೊಳಿಸಿಲ್ಲ,

ಇದಕ್ಕೆ ನಿಖರ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಪರಿಷತ್‌ ಸದಸ್ಯ ಎಂ.ಎ.  ಗೋಪಾಲ ಸ್ವಾಮಿ ಮಾತನಾಡಿ, ಪ್ರತಿವರ್ಷವೂ ಒಂದೊಂದು ಕಾರಣ ನೀಡುವ ಮೂಲಕ ಕಬ್ಬು ಅರೆಯುವುದನ್ನು ಮೂಮದೂಡು ತ್ತಿದ್ದಾರೆ ಎಂದು ಆಪಾದಿಸಿದರು. ಕೂಡಲೇ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿ ತಾಲೂಕಿನ ರೈತರ ಸಂಕಷ್ಟಕ್ಕೆ ನೆರವಾಗಬೇಕಿದೆ  ಎಂದರು.

ಶಾಸಕ ಸಿ.ಎನ್‌.ಬಾಲಕೃಷ್ಣ ಮಾತ ನಾಡಿ, ತಾಂತ್ರಿಕ ಕಾರಣದಿಂದ ಕಬ್ಬು ಅರೆಯುವುದು ವಿಳಂಬವಾಗಿದೆ. ಸೆಪ್ಟೆಂಬರ್‌ ಮೊದಲ ವಾರದಿಂದಲೇ ಕಬ್ಬು ಹರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು  ಎಂದರು. ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಾಗರಾಜ್‌, ಎಚ್‌ಎಸ್‌ ಎಸ್‌ಕೆ ಅಧ್ಯಕ್ಷ ವೆಂಕಟೇಶ, ನಿರ್ದೇಶಕ ರಾದ ನಾಗಣ್ಣ, ಕೃಷ್ಣೇಗೌಡ, ಚಂದ್ರಣ್ಣ, ತಹಶೀಲ್ದಾರ್‌ ಜೆ.ಬಿ.ಮಾರುತಿ, ಪ್ರಮುಖ ರಾದ ಅಣತಿ ಆನಂದ, ಪ್ರವೀಣ  ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next