Advertisement

ಸಕ್ಕರೆ-ಅಕ್ಕಿ ಬಿಡದೆ ಆರೋಗ್ಯ ಸುಧಾರಿಸೊಲ್ಲ

01:33 PM Mar 14, 2017 | Team Udayavani |

ದಾವಣಗೆರೆ: ಸಕ್ಕರೆ, ಈಗಿನ ಹಾಲು, ಅಕ್ಕಿ, ಗೋಧಿಯನ್ನ ನಿತ್ಯದ ಆಹಾರವನ್ನಾಗಿ ಸೇವಿಸುವುದನ್ನು ನಿಲ್ಲಿಸುವ ತನಕ ನಮ್ಮ ಆರೋಗ್ಯದ ಸ್ಥಿತಿ ಸುಧಾರಿಸುವುದು ಕನಸಿನ ಮಾತು ಎಂದು ಮೈಸೂರಿನ ಆಹಾರ ತಜ್ಞ ಡಾ| ಖಾದರ್‌ ಪ್ರತಿಪಾದಿಸಿದ್ದಾರೆ. 

Advertisement

ಸೋಮವಾರ ನಗರದ ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಗಳ ಹಿರೇಮಠದಲ್ಲಿ ನೆಮ್ಮದಿಯ ಬದುಕಿಗೆ ಸಿರಿಧಾನ್ಯಗಳೇ ವರದಾನ.. ವಿಷಯ ಕುರಿತುಉಪನ್ಯಾಸ ನೀಡಿದ ಅವರು, ನಾವು ಈಗ  ಅಳವಡಿಸಿಕೊಂಡಿರುವ ಆಹಾರ ಪದ್ಧತಿ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಇದು ನಮ್ಮ ಪದ್ಧತಿಯಲ್ಲ.

ಇದರಿಂದ ಒಂದು ಕಡೆ ರೈತ ಸಾಯುತ್ತಿದ್ದರೆ ಇನ್ನೊಂದು ಕಡೆ ದೇಶದ ಜನರು ರೋಗಿಗಳಾಗುತ್ತಿದ್ದಾರೆ. ಸಕ್ಕರೆ, ಹಾಲು, ಅಕ್ಕಿ, ಗೋಧಿ ಸೇವನೆಯಿಂದ ಬಹುರಾಷ್ಟ್ರೀಯ ಕಂಪನಿಗಳು ಶ್ರೀಮಂತಗೊಳ್ಳುತ್ತಿವೆ. ವೈದ್ಯರೂಸೇರಿದಂತೆ ವಿವಿಧ ರಂಗದ ಜನರು ಇವುಗಳ  ಕೃಪಕಟಾಕ್ಷದಲ್ಲಿ ಬದುಕುತ್ತಿದ್ದಾರೆ ಎಂದರು. 

ಇಂದು ಭಾರತ ಮಧುಮೇಹಿಗಳ ದೇಶವಾಗಿದೆ. ಸದ್ಯ 100ಕ್ಕೆ 28 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. 2020ರ ವೇಳೆ ಶೇ.50ರಷ್ಟು ಮಂದಿ ಮಧುಮೇಹಿಗಳಾಗುತ್ತಾರೆ ಎಂದು ವಿಶ್ವ  ಆರೋಗ್ಯ ಸಂಸ್ಥೆ ವರದಿ ಕೊಟ್ಟಿದೆ. ಹಾಗಿದ್ದರೂನಮ್ಮ ದೇಶದ ಯಾವುದೇ ನೇತಾರ, ವಿಜ್ಞಾನಿ, ವೈದ್ಯ, ಸಂಘ, ಸಂಸ್ಥೆಗಳು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ನಮ್ಮ ದೇಶದ ಜನರಿಂದಾಗಿ ಕೋಟ್ಯಂತರ ರೂಪಾಯಿ ಗಳಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಎಲ್ಲವನ್ನೂ ಮುಚ್ಚಿಹಾಕುತ್ತಿವೆ ಎಂದು ಅವರು ಹೇಳಿದರು. ನಮ್ಮ ದೇಹಕ್ಕೆ ಬೇಕಾಗಿರುವುದು 5 ಗ್ರಾಂ ಸಕ್ಕರೆ ಪದಾರ್ಥ ಮಾತ್ರ. ಆದರೆ, ನಾವಿಂದು ಸೇವಿಸುವ ಆಹಾರದಿಂದ ನೂರಾರು ಗ್ರಾಂ ಸಕ್ಕರೆ ಪದಾರ್ಥ ದೇಹ ಸೇರುತ್ತಿದೆ. 

Advertisement

ದೇಹದಿಂದ ಇದನ್ನು ಕರಗಿಸಲು ಸಾಧ್ಯವಾಗದೇ ಇರುವುದರಿಂದ ಸಕ್ಕರೆ ಅಂಶ ಕೊಲೆಸ್ಟಾÅಲ್‌ ಸೇರಿದಂತೆ ವಿವಿಧ ಅನಾವಶ್ಯಕ ಪದಾರ್ಥಗಳು ದೇಹದಲ್ಲಿ ಉಳಿದುಕೊಂಡು ಮಧುಮೇಹ, ಕಿಡ್ನಿ ವೈಫಲ್ಯ, ಮಲಬದ್ಧತೆ, ಕುರುಡುತನ, ಹೃದ್ರೋಗ ಕಾಣಿಸಿಕೊಳ್ಳುತ್ತವೆ. ಹೆಣ್ಣುಮಕ್ಕಳು 4ನೇ ವಯಸ್ಸಿಗೆ ಋತುಮತಿಯಾಗುತ್ತಿದ್ದಾರೆ.

ಇದನ್ನೆಲ್ಲಾ ನಾವು ಗಂಭೀರವಾಗಿ ಪರಿಗಣಿಸದೇ ಹೋದರೆ ನಾನಾ ಸಮಸ್ಯೆಗಳಿಗೆ ಸಿಲುಕುತ್ತೇವೆ ಎಂದು ಅವರು ಎಚ್ಚರಿಸಿದರು. ಪ್ರಸ್ತುತ ನಾವು ಬೆಳೆಯುತ್ತಿರುವ ಕಬ್ಬು, ಭತ್ತ, ಮಾಂಸದ ಆಕರಗಳು, ಮೀನಿನಲ್ಲಿ ಅಪಾಯಕಾರಿ ಅಂಶಗಳು ಸೇರಿಕೊಳ್ಳುತ್ತಿವೆ. ವಿಪರೀತ ನೀರು ಬಳಕೆಯಾಗುತ್ತಿದೆ. ಇದರಿಂದ ಮುಂದೆ ಕುಡಿಯಲು ಸಹ ನೀರಿಲ್ಲದಂತಹ ಸ್ಥಿತಿ ನಿರ್ಮಾಣ ಆಗುತ್ತದೆ.

ಒಂದು ಕೆಜಿ ಮಾಂಸಕ್ಕೆ 66,000 ಲೀಟರ್‌, ಭತ್ತ ಬೆಳೆಯಲು 8000 ಲೀಟರ್‌ ನೀರು ಬೇಕಾಗುತ್ತದೆ. ಇವುಗಳನ್ನು ಬೆಳೆದು ಸೇವಿಸುವುದರಿಂದ ನಮ್ಮ ದೇಹಾರೋಗ್ಯ ಚೆನ್ನಾಗಿರುತ್ತದೆ ಎಂಬುದು ಸುಳ್ಳು. ಇವುಗಳನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತಿರುವುದು ಬಹುರಾಷ್ಟ್ರೀಯ ಕಂಪನಿಗಳು.

ಅವುಗಳಿಗೆ ಹಣ ಬಿಟ್ಟರೆ ಆರೋಗ್ಯದ ಕಾಳಜಿ ಇರಲಾರದು. ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು. ನೀರನ್ನೂ ಸಹ ನಾವಿಂದು ಕಲುಷಿತ ಮಾಡಿದ್ದೇವೆ. ಮನೆಗೆ ಬಂದವರಿಗೆ ಮೊದಲು ನೀರು ಕೊಟ್ಟು ಉಪಚರಿಸುವ ನಮ್ಮ ಸಂಸ್ಕೃತಿ ಮಾಯವಾಗಿದೆ.

ದುಡ್ಡಿಗಾಗಿ ನೀರು ಮಾರುವ ಸ್ಥಿತಿಗೆ ಬಂದಿದ್ದೇವೆ. ಇದಕ್ಕೆ ಕಾರಣ ವ್ಯಾಪಾರಿ ಮನೋಭಾವ ಹೊಂದಿದ ಕಂಪನಿಗಳು. ಇಂದು ಪ್ಲಾಸ್ಟಿಕ್‌ ಬಾಟಲಿಯಲ್ಲಿ ಮಾರುತ್ತಿರುವ ನೀರು, ಆರ್‌ಒ ಘಟಕದಿಂದ ಶುದೀœಕರಿಸಿದ ನೀರು ಜೀವಕ್ಕೆ ಅಪಾಯಕಾರಿ. ನಮ್ಮ ಹಿರಿಯರು ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸುತ್ತಿದ್ದ ನೀರು ಆರೋಗ್ಯಕ್ಕೆ ಅತಿ ಅವಶ್ಯಕವಾದದ್ದಾಗಿತ್ತು.

ಇದನ್ನು ನಾವು ಮನಗಾಣಬೇಕಿದೆ ಎಂದು ಅವರು ಹೇಳಿದರು. ನವಣೆ, ರಾಗಿ, ಆರ್ಕ, ಸಾಮೆ, ಬರಗು ಸಿರಿಧಾನ್ಯಗಳನ್ನು ನಾವು ನಿತ್ಯದ ಆಹಾರವಾಗಿ ಸೇವನೆ ಮಾಡಬೇಕು. ಆಗ ದೇಹಕ್ಕೆ ಬೇಕಾದ ಎಲ್ಲಾ ಅಂಶಗಳು ಸಿಗುತ್ತವೆ. ಆರೋಗ್ಯ ಸ್ಥಿತಿ ಚೆನ್ನಾಗಿ ಇರುತ್ತದೆ. ಇದನ್ನು ಯಾವುದೇ ವೈದ್ಯರು ನಿಮಗೆ ಹೇಳುವುದಿಲ್ಲ.

ವೈದ್ಯರು ಹೇಳುವುದು ಕೇವಲ ಔಷಧ ಸೇವನೆ, ಚಿಕಿತ್ಸೆ ಬಗ್ಗೆ   ಅಷ್ಟೇ. ನಾವೇ ಇಂತಹ ವಿಷಯ ತಿಳಿದುಕೊಳ್ಳಬೇಕು ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಮಠದ ಆಡಳಿತ ಮಂಡಳಿ ಕಾರ್ಯದರ್ಶಿ ಡಾ| ಸ್ವಾಮಿ ತ್ರಿಭುವನಾನಂದ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next