ನಟ ಡಾರ್ಲಿಂಗ್ ಕೃಷ್ಣ ಅಭಿನಯದ “ಶುಗರ್ ಫ್ಯಾಕ್ಟರಿ’ ಸಿನಿಮಾ ಇದೇ ನವೆಂಬರ್ 24 ರಂದು ತೆರೆಗೆ ಬರುತ್ತಿದೆ.
ಈಗಾಗಲೇ ಬಿಡುಗಡೆಯಾಗಿರುವ “ಶುಗರ್ ಫ್ಯಾಕ್ಟರಿ’ ಸಿನಿಮಾದ ಹಾಡುಗಳು ನಿಧಾನವಾಗಿ ಕೇಳುಗರ ಗಮನ ಸೆಳೆಯುತ್ತಿದ್ದು, ಹಿಟ್ ಲಿಸ್ಟ್‌ನಲ್ಲಿ ಸೇರುತ್ತಿವೆ. ಇನ್ನು “ಶುಗರ್ ಫ್ಯಾಕ್ಟರಿ’ ಸಿನಿಮಾದ ಮೂಲಕ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಕಬೀರ್ ರಫಿ ಕನ್ನಡ ಚಿತ್ರರಂಗಕ್ಕೂ ಪರಿಚಯವಾಗುತ್ತಿದ್ದಾರೆ.
ಇದೇ ವೇಳೆ ತಮ್ಮ ಚೊಚ್ಚಲ ಕನ್ನಡ ಸಿನಿಮಾದ ಹಾಡುಗಳ ಸಂಗೀತ ನಿರ್ದೇಶಕ ಕಬೀರ್ ರಫಿ ಒಂದಷ್ಟು ಮಾತನಾಡಿದ್ದಾರೆ. “ಕನ್ನಡದಲ್ಲಿ “ಶುಗರ್ ಫ್ಯಾಕ್ಟರಿ’ ನನ್ನ ಮೊದಲ ಸಂಗೀತ ನಿರ್ದೇಶನದ ಸಿನಿಮಾ. ಈಗಾಗಲೇ “ಶುಗರ್ ಫ್ಯಾಕ್ಟರಿ’ ಸಿನಿಮಾದ ಹಾಡುಗಳು ರಿಲೀಸ್ ಆಗಿದ್ದು, ನಮ್ಮ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾದಲ್ಲಿ ಒಟ್ಟು ಏಳು ಹಾಡು ಗಳಿದ್ದು, 3 ಮೆಲೋಡಿ ಹಾಡುಗಳು, ಎರಡು ಪೆಪ್ಪಿ ಹಾಡು, ಒಂದು ಮಾಸ್ ಹಾಡು ಸಿನಿಮಾದಲ್ಲಿದೆ.
ಅರ್ಮನ್ ಮಲ್ಲಿಕ್, ವಿಜಯ ಪ್ರಕಾಶ್, ಚಂದನ್ ಶೆಟ್ಟಿ, ನಿಹಾಲ್ ಥಾವ್ರೊ, ಅಮೃತಾ ನಾಯಕ್, ಕರೀಂಮುಲ್ಲಾ, ಭಾಗ ಸೆಹಗಲ್, ರುಚೇರಾ ವೈದ್ಯ ಮೊದಲಾದವರು ಗೀತೆಗಳಿಗೆ ಧ್ವನಿಯಾಗಿದ್ದಾರೆ’ ಎಂದು ಹಾಡುಗಳ ಬಗ್ಗೆ ವಿವರಣೆ ನೀಡುತ್ತಾರೆ ಕಬೀರ್ ರಫಿ.
“ಕೋವಿಡ್ ನಂತರ ಮೊದಲ ಬಾರಿಗೆ ಕನ್ನಡದಲ್ಲಿ “ಶುಗರ್ ಫ್ಯಾಕ್ಟರಿ’ ಸಿನಿಮಾಕ್ಕೆ ಸಂಗೀತ ನೀಡುವ ಅವಕಾಶ ನನಗೆ ಸಿಕ್ಕಿತು. ನಿರ್ದೇಶಕ ದೀಪಕ್ ಅರಸ್ ಹೇಳಿದ ಕಥೆ ಕೂಡ ತುಂಬ ಚೆನ್ನಾಗಿತ್ತು. ಇಡೀ ಕಲಾವಿದರು ಮತ್ತು ಒಳ್ಳೆಯ ತಂತ್ರಜ್ಞರಿಂದ “ಶುಗರ್ ಫ್ಯಾಕ್ಟರಿ’ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ರಿಲೀಸ್ ಆಗಿರುವ “ಶುಗರ್ ಫ್ಯಾಕ್ಟರಿ’ ಹಾಡುಗಳು ಹಿಟ್ ಆಗುತ್ತಿದೆ. ನನ್ನ ಮೊದಲ ಮ್ಯೂಸಿಕ್‌ಗೆ ಕನ್ನಡ ಆಡಿಯನ್ಸ್ ಕಡೆಯಿಂದ ಇಷ್ಟೊಂದು ದೊಡ್ಡ ರೆಸ್ಪಾನ್ಸ್ ನಿರೀಕ್ಷಿಸಿರಲಿಲ್ಲ. ಕನ್ನಡ ಆಡಿಯನ್ಸ್ ನನ್ನ ಹಾಡುಗಳ ಬಗ್ಗೆ ಮಾತನಾಡಿ ದಾಗ ಖುಷಿಯಾಗುತ್ತದೆ’ ಎನ್ನುತ್ತಾರೆ ಕಬೀರ್.