Advertisement

ಸಕ್ಕರೆ ಕಾರ್ಖಾನೆ ಖಾಸಗೀಕರಣ ದುರಂತ: ಎಚ್‌.ಡಿ.ಕುಮಾರಸ್ವಾಮಿ

03:14 PM Jan 11, 2021 | Team Udayavani |

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲಾ ಸಕ್ಕರೆ ಕಾರ್ಖಾನೆ ಉಳಿವಿಗಾಗಿ 450 ಕೋಟಿ ರೂ. ಮೀಸಲಿಟ್ಟಿದ್ದೆ. ಆದರೆ ಇಂದಿನ ಬಿಜೆಪಿ ಸರ್ಕಾರ ರಾಜರ ಕಾಲದ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿರುವುದು ದುರಂತ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ದೂರಿದರು.

Advertisement

ತಾಲೂಕಿನ ನೇರಳಕೆರೆ ಗ್ರಾಮದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾತಿ-ಹಣಕ್ಕೆ ಮನ್ನಣೆ ನೀಡದೆ ನನಗೆ 5 ವರ್ಷ ಅಧಿಕಾರ ನೀಡಿ ರಾಜ್ಯದ ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ಕಳೆದ ಸರ್ಕಾರಗಳಲ್ಲಿ ನಾನು ಮುಖ್ಯಮಂತ್ರಿಯಾದ ವೇಳೆ ಅರ್ಧಕ್ಕೆ ಸರ್ಕಾರಗಳು ಮೊಟಕುಗೊಳಿಸಿದ್ದಾರೆ. ಇದರಿಂದ ಜನಪರ ಕೆಲಸಗಳಿಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮುಂದೆ 2023ರ ವೇಳೆ ಜೆಡಿಎಸ್‌ಗೆ ಅಧಿಕಾರ ನೀಡಿದರೆ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಅದಕ್ಕಾಗಿ ಸಂಪೂರ್ಣವಾಗಿ ಪಕ್ಷವನ್ನು ಬಲಪಡಿಸಲು ನಿಮ್ಮ ಸಹಕಾರ ಅಗತ್ಯವಿದೆ ಎಂದರು.

50 ಲಕ್ಷ ಮನೆ: ಮೊದಲ ವರ್ಷದಲ್ಲಿ ಮನೆಯಿಲ್ಲದ 50 ಲಕ್ಷದ ಜನರಿಗೆ ಉಚಿತ ಮನೆ ನೀಡಿದ್ದೇನೆ. ನಮ್ಮ ಸರ್ಕಾರ ಬಂದರೆ ಒಂದು ಮನೆಗೆ 5 ಲಕ್ಷ ರೂ. ವೆಚ್ಚದಲ್ಲಿ ವಸತಿ ಹೀನರಿಗೆ ನಿರ್ಮಾಣ ಮಾಡಲಾಗುತ್ತದೆ. 2ನೇ ವರ್ಷದಲ್ಲಿ ಶಿಕ್ಷಣಕ್ಕೆ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಬಡವರಿಗೆ ಇಂಗ್ಲಿಷ್‌ ಶಿಕ್ಷಣ ನೀಡಲು ಸರ್ಕಾರದಲ್ಲಿ ಮುಂದುವರಿಸಲಾಗುತ್ತದೆ. 3ನೇ ವರ್ಷದಲ್ಲಿ ಆರೋಗ್ಯಕ್ಕಾಗಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 50 ಬೆಡ್‌ನ‌ ಆಸ್ಪತ್ರೆ ನಿರ್ಮಿಸಿ ಆರೋಗ್ಯ ಭಾಗ್ಯ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ಸಾಲಮನ್ನ ನೆನೆಯಲ್ಲ: 2 ಸಾವಿರ ರೂ. ಕೊಡುವ ಸರ್ಕಾರ ನಂಬುವರು 2 ಲಕ್ಷ ರೂ. ಸಾಲ ಮನ್ನಾ ಮಾಡಿದವರನ್ನು ಜನರು ನೆನೆಯುತ್ತಿಲ್ಲ. ಪ್ರಧಾನ ಮಂತ್ರಿ 2 ಸಾವಿರ ರೂ. ನೀಡಿ ವರ್ಷಕ್ಕೆ 6 ಸಾವಿರ ರೂ. ಕೊಡುತ್ತಿರುವ ಬಗ್ಗೆ ಗಮನದಲ್ಲಿದ್ದಾರೆ. ಇದರಿಂದ ರಾಜ್ಯಕ್ಕೆ 300ರಿಂದ 500 ಕೋಟಿ ರೂ. ಬರುತ್ತದೆ. ಆದರೆ ನಾನು ಮಾಡಿದ ಸಾಲಮನ್ನದಲ್ಲಿ ಪ್ರತಿಯೊಬ್ಬರು ಸಾಲ ಮುಕ್ತರಾಗಿದ್ದಾರೆ. ಅದರ ಬಗ್ಗೆ ರೈತರು ಗಮನಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಯುಗಾದಿ ನಂತರ ಜೆಡಿಎಸ್‌ ಹೊಸ ಅಲೆ: ಮುಂಬರುವ ಯುಗಾದಿಯ ನಂತರ ಜೆಡಿಎಸ್‌ ಪಕ್ಷದಲ್ಲಿ ಹೊಸ ಅಲೆ ಏಳಲಿದೆ. ರಾಜ್ಯ ವ್ಯಾಪ್ತಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ ಎಂದರು. ನಂತರ ಮಹದೇವಪುರ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ 15 ಕೋಟಿ ರೂ. ವೆಚ್ಚದ ಬಂಗಾರದೊಡ್ಡಿ ನಾಲೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಎನ್‌. ಅಪ್ಪಾಜಿಗೌಡ, ರವೀಂದ್ರ ಶ್ರೀಕಂಠಯ್ಯ, ಮಾಜಿ ಶಾಸಕಿ ಪ್ರಭಾವತಿ ಜಯರಾಂ, ಜಿಪಂ ಮಾಜಿ ಅಧ್ಯಕ್ಷ ವೆಂಕಟೇಶ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಪೈ. ಮುಕುಂದ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next