Advertisement
ಹಿಂದೆ ಬೈಕಾಡಿ ಬಡಹಾಡಿ ಎಂದೇ ಕರೆಯಿಸಿಕೊಂಡಿದ್ದ ಸುಮಾರು ನೂರಾ ಹತ್ತು ಎಕರೆ ಜಾಗದಲ್ಲಿ ಹಬ್ಬಿ ಹರಡಿ ನಿಂತ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಈ ಜಾಗವನ್ನ ಗುರುತಿಸಿ ಕೊಟ್ಟದ್ದು ಆ ಕಾಲದ ಹಿರಿಯ ರಾಜಕಾರಣಿ ಹೇರೂರು ಬಾಲಕೃಷ್ಣ ಶೆಟ್ಟರು. ಜಿಲ್ಲೆಯ ಸೌಭಾಗ್ಯದ ಸೌಧವಾಗಬೇಕಿದ್ದ ಸಕ್ಕರೆ ಕಾರ್ಖಾನೆ ಅರಣ್ಯದ ನಡುವೆ ರೋದಿಸುತ್ತಾ ಕಿಲುಬೆದ್ದು ಹೋಗುತ್ತಿದ್ದರೂ ,ಆಗೊಮ್ಮೆ ಈಗೊಮ್ಮೆ ರಾಜಕಾರಣದ ವೇದಿಕೆಯಲ್ಲಿ ಭಾಷಣದ ವಸ್ತುವಾಗಿಯಷ್ಟೇ ಸುದ್ದಿಯಾಗಿದ್ದರೂ ನಮ್ಮ ಜಿಲ್ಲೆಯ ರಾಜಕಾರಣಿಗಳಲ್ಲಿನ ಪ್ರಬಲವಾದ ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ಮರುಜೀವ ಪಡೆಯಲೇ ಇಲ್ಲ. ಕೇವಲ ರಾಜಕಾರಣಿಗಳನ್ನಷ್ಟೇ ಹಳಿದರೆ ಸಾಕೇ? ನಮ್ಮ ಜಿಲ್ಲೆಯ ರೈತರು ಪ್ರತಿಭಟಿಸಲೇ ಇಲ್ಲ. ರೈತಪರವಾದಂತಹ ಧ್ವನಿ ಮೊಳಗಲೇ ಇಲ್ಲ. ಹಾಗಾಗಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಬಾಗಿಲು ತೆಗೆಯಲೇ ಇಲ್ಲ. ಇಂದಿಗೂ ಅಲ್ಲೊಂದು ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಲಿದೆ. ಮೊಳಹಳ್ಳಿ ಜಯಶೀಲ ಶೆಟ್ಟರು ಅದರ ಅಧ್ಯಕ್ಷರಾಗಿದ್ದಾರೆ. ನೂರಾರು ಮಾಫಿಯಾಗಳು ಸಕ್ಕರೆ ಕಾರ್ಖಾನೆಯ ಫಲವತ್ತಾದ ಜಾಗವನ್ನು ಕೊಳ್ಳೆಹೊಡೆಯುವ ಸಂಚಿನಲ್ಲಿವೆ. ಸರಕಾರವೇ ಅದನ್ನು ಲಿಕ್ವಿಡೇಶನ್ ಮಾಡಿ ಬಿಡುವ ಸಾಧ್ಯತೆಗಳೂ ಇತ್ತು. ಆದರೆ ಒಂದು ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ.
Related Articles
Advertisement
ಇಥೆನಾಲ್ ಬಳಕೆಗೆ ಕೇಂದ್ರ ಸರ್ಕಾರದ ಪೂರ್ಣ ಬೆಂಬಲವಿದೆ. ಕೇಂದ್ರ ಸರಕಾರವೂ ಇಥೆನಾಲ್ ಬೆಲೆಯನ್ನು ಲೀಟರ್ ಒಂದಕ್ಕೆ 47.50 ರೂಪಾಯಿ ಇಂದ 59.50 ರೂಪಾಯಿಗೆ ಹೆಚ್ಚಿಸಿರುವುದು ಕಬ್ಬು ಬೆಳೆಗಾರರಿಗೆ ಆಶಾದಾಯಕವಾದ ಬೆಳವಣಿಗೆ. ಇಥೆನಾಲ್ ಹೆಚ್ಚಿನ ಪ್ರಮಾಣದ ಬಳಕೆ ಕೇಂದ್ರ ಸರಕಾರದ ಪ್ರಧಾನ ಗುರಿಯಾಗಿದೆ. ರೂಪಾಯಿ ಮೌಲ್ಯವರ್ಧನೆಗೆ ಅದು ಅಗತ್ಯವೂ ಹೌದು. ಇದರಿಂದ ಸಕ್ಕರೆ ಉದ್ಯಮಕ್ಕೆ ಹೆಚ್ಚಿನ ಬೆಂಬಲ ದೊರಕುತ್ತದೆ. ಒಂದೊಮ್ಮೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಇಥೆನಾಲ್ ಪೂರೈಕೆಯನ್ನ ಮಾಡಲು ಹೊರಟಿತೆಂದರೆ ಸಕ್ಕರೆಗಿಂತಲೂ ಇಥೆನಾಲಿಗೇ ಅತೀ ಹೆಚ್ಚಿನ ಬೇಡಿಕೆ ಬರಲಿದೆ. ಆರ್ಥಿಕವಾಗಿಯೂ ಎಂದೂ ಕೊರತೆಯಾಗದಷ್ಟು ಹಣದ ಹರಿವು ಸಾಧ್ಯವಾಗಲಿದೆ. ರಾಜ್ಯದ ಬೇರೆ ಯಾವ ಸಕ್ಕರೆ ಕಾರ್ಖಾನೆಗಿಂತಲೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಅದರ ಲಾಭದ ಅಂಶ ಹೆಚ್ಚು. ಯಾಕೆಂದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಿಂದ ಕೇವಲ ಐವತ್ತು ನಿಮಿಷದ ಅಂತರದಲ್ಲಿ ಎಂ.ಆರ್.ಪಿ.ಎಲ್. ಕಾರ್ಯನಿರ್ವಹಿಸುತ್ತಿದೆ. ಎಷ್ಟು ಇಥೆನಾಲ್ ಕೊಟ್ಟರೂ ಖರೀದಿಗೆ ಎಂ.ಆರ್.ಪಿ.ಎಲ…. ತಯಾರಿದೆ. ಹಾಗಾಗಿ ಕಬ್ಬು ಬೆಳೆದ ರೈತರಿಗೂ ಹಿಂದಿನಂತೆ ಹಣಸಂದಾಯದ ತೊಂದರೆಯಂತೂ ಬರುವುದಿಲ್ಲ. ತಕ್ಷಣವೇ ಹಣವನ್ನ ಕೊಡುವ ವ್ಯವಸ್ಥೆಯೂ ಆಗುತ್ತದೆ. ಎಂ.ಆರ್.ಪಿ.ಎಲ್. ಮುಂಗಡ ಹಣವನ್ನೂ ಪಾವತಿಸಬಲ್ಲುದು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಇನ್ನೊಂದು ಧನಾತ್ಮಕ ಅಂಶವೆಂದರೆ ರಾಷ್ಟ್ರೀಯ ಹೆ¨ªಾರಿಯ ಮಗ್ಗುಲಿನಲ್ಲಿರುವ ಕಾರಣಕ್ಕೆ ಸಾರಿಗೆ ವ್ಯವಸ್ಥೆ ಸುಲಭ. ಬಂದರು ಹತ್ತಿರದÇÉೇ ಇರುವ ಕಾರಣಕ್ಕೆ ಸಕ್ಕರೆಗೆ ಆಮದು ಮತ್ತು ರಪು¤ ಸುಂಕ ವಿನಾಯತಿ ಇರುವ ಕಾರಣಕ್ಕೆ ವಿದೇಶಗಳಿಂದ ಕಚ್ಚಾ ಸಕ್ಕರೆ ತರಿಸಿ ಸಕ್ಕರೆ ತಯಾರು ಮಾಡಿ ರವಾನೆ ಮಾಡಿದರೆ ಕಾರ್ಖಾನೆಯೂ ಲಾಭದಾಯಕವಾಗಿ ನಡೆಯಲಿದ್ದು, ಕಾರ್ಮಿಕರಿಗೂ ವರ್ಷವಿಡೀ ಕೆಲಸ ದೊರಕಲಿದೆ. ಕಬ್ಬಿನ ಉಪ ಉತ್ಪನ್ನಗಳನ್ನು ಇಲ್ಲಿ ಧಾರಾಳವಾಗಿ ಮಾಡಬಹುದು. ಸಕ್ಕರೆ ಕಾರ್ಖಾನೆಯಿಂದ ಯಾವುದೇ ತ್ಯಾಜ್ಯವೂ ನಿರ್ಮಾಣ ವಾಗುವುದಿಲ್ಲ ಮೊಲೇಸಿಸ್ ಬಳಕೆ, ವಿದ್ಯುತ್ ಉತ್ಪಾದನೆ, ಸ್ಪಿರಿಟ್, ಪಶು ಆಹಾರ… ಹಿಗೆ ಹಲವಾರು ಸಾಧ್ಯತೆಗಳಿವೆ.
ಇದೀಗ ವಾರಾಹಿ ನೀರು ಕೂಡಾ ಹರಿದು ಬರುತ್ತಿದೆ. ವಾರಾಹಿ ಕಾಮಗಾರಿಯೂ ಅತ್ಯಂತ ವೇಗವಾಗಿ ಸಾಗುತ್ತಿದೆ. ಸಕ್ಕರೆ ಕಾರ್ಖಾನೆ ಆರಂಭಿಸುವ ಭರವಸೆ ಕೊಟ್ಟರೆ ಕಬ್ಬು ಬೆಳೆಯಲು ನಾವು ತಯಾರು ಎಂದು 2700 ರೈತರು ಮುಂದೆ ಬಂದಿದ್ದಾರೆ. ಈಗಾಗಲೆ 9000 ಎಕರೆಗೆ ನೀರು ಕೊಡುವಷ್ಟು ವಾರಾಹಿ ಯೋಜನೆ ಯಶಕಂಡಿದೆ. ಸದ್ಯದಲ್ಲೇ ಇನ್ನೂ ಹೆಚ್ಚಾಗಲಿದೆ. ಒಟ್ಟು ಆರು ಸಾವಿರ ಎಕರೆ ಕಬ್ಬು ಬೆಳೆದರೂ ಕಾರ್ಖಾನೆಗೆ ಸಾಕಾದೀತು. ಬದಲಾದ ಹವಮಾನ ವೈಪರೀತ್ಯದಲ್ಲಿ ಭತ್ತದ ಬೆಳೆಗಿಂತಲೂ ಕಬ್ಬು ಬೆಳೆಯುವುದು ಸೂಕ್ತ. ಒಂದರಿಂದ ಏಳು ವರ್ಷದ ತನಕವೂ ಕೊಳೆ ಹಾಕಿ ಮತ್ತೆ ಮತ್ತೆ ಬೆಳೆಯಬಹುದಾದ ಬೆಳೆ ಕಬ್ಬು. ಮಿಗಿಲಾಗಿ ಇದು ವಾಣಿಜ್ಯ ಬೆಳೆ. ವರ್ಷಕ್ಕೆ ಎರಡು ಬುಡ ಮಾಡುವುದು ಬಿಟ್ಟರೆ ಭಾರೀ ಕೆಲಸವನ್ನೂ ಕಬ್ಬು ಬೇಡುವುದಿಲ್ಲ. ಕಟಾವು ಮಾಡಲು ಕಾರ್ಮಿಕರು ಬೇಕಾಗುತ್ತಾರೆ ಹೌದಾದರೂ ಆಧುನಿಕವಾದ ಕ್ರಮದಲ್ಲಿ ಅದೂ ಸುಲಭವಾಗಲಿದೆ. ಇನ್ನು ನಮ್ಮ ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಪ್ರಮಾಣ ಕಡಿಮೆ ಅದು ಶೇ. 9 ಎನ್ನುವ ಮಾತಿದೆ. ಆದರೆ ಇದೀಗ ಯಾವ ಹವಾಮಾನಕ್ಕೆ ಯಾವ ರೀತಿಯ ವಿಕಸಿತ ತಳಿಯನ್ನ ಬಳಸಬೇಕು ಎನ್ನುವುದನ್ನ ಕೃಷಿ ಸಂಶೋಧಕರು ಸಂಶೋಧಿಸಿದ್ದಾರೆ. ಹೆಚ್ಚು ಕಬ್ಬು ಬೆಳೆಯುವ ಮಂಡ್ಯದಲ್ಲಿ ಬರುವುದು ಕೂಡ ಶೇ. 10 ಮಾತ್ರ.
ಹೀಗೆ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಎಲ್ಲಾ ರೀತಿಯಲ್ಲಿಯೂ ಸಕಾರಾತ್ಮಕವಾದ ಅಂಶಗಳು ಗೋಚರಿಸುತ್ತಲಿವೆ. ರೈತರ ಸಾಲಮನ್ನಾಕ್ಕೆ ನಲವತ್ತು ಸಾವಿರ ಕೋಟಿ ವ್ಯಯಿಸುವ ಸರ್ಕಾರಕ್ಕೆ, ಮಠ ಮಾನ್ಯಗಳಿಗೆ ನೂರಾರು ಕೋಟಿ, ಉತ್ಸವಾದಿಗಳಿಗೆ, ಜಯಂತಿಗಳಿಗೆ ನೂರಾರು ಕೋಟಿ ವ್ಯಯ ಮಾಡುವ ಸರಕಾರಕ್ಕೆ ರೈತರ ಕೈಗೆ ಬಲ ಕೊಡುವ, ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ, ಒಂದು ಜಿಲ್ಲೆಯನ್ನೇ ಅಭಿವೃದ್ಧಿಯತ್ತ ಕೊಂಡೊಯ್ಯುವ ಸಕ್ಕರೆ ಕಾರ್ಖಾನೆಗೆ ಅರವತ್ತು- ಎಪ್ಪತ್ತು ಕೋಟಿ ಕೊಡಲಾಗದೆ?
ವಸಂತ್ ಗಿಳಿಯಾರ್