Advertisement

ಉಚಿತವಾಗಿ ಊರಿಗೆ ಕರೆದೊಯ್ದರೆ ಮೊಕದ್ದಮೆ

12:18 AM Apr 02, 2019 | Team Udayavani |

ಬೆಂಗಳೂರು: ಮತದಾನಕ್ಕಾಗಿ ಊರಿಗೆ ತೆರಳುವವರಿಗೆ ಬೇಕಾಬಿಟ್ಟಿ ಪ್ರಯಾಣ ದರ ವಿಧಿಸುವುದು ಮಾತ್ರವಲ್ಲ; ಪ್ರತ್ಯೇಕ ಖಾಸಗಿ ವಾಹನ ಮಾಡಿ, ಮತದಾರರನ್ನು ಉಚಿತವಾಗಿ ಕರೆದೊಯ್ಯುವುದು ಕೂಡ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಅಂತಹ ವಾಹನಗಳ ಮಾಲಿಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಆಯುಕ್ತ ವಿ.ಪಿ.ಇಕ್ಕೇರಿ ಎಚ್ಚರಿಸಿದರು.

Advertisement

ಅತಿ ಹೆಚ್ಚು ದರ ವಿಧಿಸುವುದಕ್ಕಿಂತ ಮತದಾನಕ್ಕಾಗಿ ಜನರನ್ನು ಉಚಿತವಾಗಿ ಕರೆದೊಯ್ಯುವುದು ಗಂಭೀರ ಪ್ರಕರಣವಾಗಿದೆ. ಅಂತಹ ವಾಹನಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಕಾರ್ಯಾಚರಣೆ ತಂಡ ರಚಿಸಲಾಗಿದೆ. ಅನುಮಾನ ಬಂದ ವಾಹನಗಳನ್ನು ತಪಾಸಣೆಗೆ ಒಳಪಡಿಸಿ, ದಂಡ ವಿಧಿಸುವುದು, ಮೊಕದ್ದಮೆ ದಾಖಲಿಸುವುದು ಸೇರಿದಂತೆ ಹಲವು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ಪ್ರಕಾರದ ವಾಹನಗಳಲ್ಲಿ ಮತದಾರರನ್ನು ಉಚಿತವಾಗಿ ಕರೆದೊಯ್ಯುವುದು ಪ್ರಲೋಭನೆ ಮಾಡಿದಂತಾಗುತ್ತದೆ. ಈ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿ ಮೊಕದ್ದಮೆ ದಾಖಲಿಸಲು ಅವಕಾಶ ಇದೆ ಎಂದ ಅವರು, ಉಚಿತವಾಗಿ ಜನರನ್ನು ಕರೆದೊಯ್ದ ಪ್ರಕರಣಗಳು ಕಂಡುಬಂದರೆ ತಕ್ಷಣ ಸಾರಿಗೆ ಇಲಾಖೆಗೆ ದೂರು ಸಲ್ಲಿಸಬಹುದು ಎಂದರು.

ಬೆಂಗಳೂರಿನಿಂದ ಬೇರೆ ಬೇರೆ ಕಡೆಗೆ ಮತದಾನಕ್ಕಾಗಿ ತೆರಳುವವರ ಸಂಖ್ಯೆಯೇ ಹೆಚ್ಚಿದೆ. ಈ ಮಧ್ಯೆ ಖಾಸಗಿ ಮತ್ತು ಸರ್ಕಾರಿ ಬಸ್‌ಗಳನ್ನು ಈಗಾಗಲೇ ಚುನಾವಣಾ ಸೇವೆಗೆ ಪಡೆಯಲಾಗಿದೆ. ವಾಹನಗಳ ಕೊರತೆಯಿಂದ ಪ್ರಯಾಣಿಕರಿಗೆ ಅನನುಕೂಲ ಆಗಬಹುದು ಎಂದು ಇಕ್ಕೇರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next