Advertisement

ಸುಡುಮದ್ದು ಘಟಕ ಸ್ಫೋಟ ಪ್ರಕರಣ: ರಾಸಾಯನಿಕ ಸರಬರಾಜು ಮಾಡುತ್ತಿದ್ದ ಆರೋಪಿ ಸೆರೆ

10:56 PM Feb 05, 2024 | Team Udayavani |

ಬೆಳ್ತಂಗಡಿ: ವೇಣೂರಿನ ಕುಕ್ಕೇಡಿ ಸಮೀಪದ ಕಡ್ತ್ಯಾರು ಸುಡುಮದ್ದು ತಯಾರಿ ಘಟಕದಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿ ಸುಡುಮದ್ದು ರಾಸಾಯನಿಕ ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.

Advertisement

ನಾಲ್ಕನೇ ಆರೋಪಿ ಬೆಂಗಳೂರು ಉತ್ತರದ ದಿವಾನರ ಪಾಳ್ಯದ ಗೋಕುಲ ನಿವಾಸಿ ಅನಿಲ್‌ ಎಂ. ಡೇವಿಡ್‌ (49)ನನ್ನು ಫೆ. 4ರಂದು ಬೆಂಗಳೂರಿನಿಂದ ಬಂಧಿಸಿ ಫೆ. 5ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಡೇವಿಡ್‌ ಪಟಾಕಿ ತಯಾರಿಗೆ ರಾಸಾಯನಿಕ ಸರಬರಾಜು ಮಾಡುವ ಪರವಾನಿಗೆ ಪಡೆದಿದ್ದು, ರಾಸಾಯನಿಕಗಳನ್ನು ತಂದು ಇಲ್ಲಿನ ಘಟಕಗಳಿಗೆ ಪೂರೈಸುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ವೇಣೂರಿನ ಘಟಕಕ್ಕೆ ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಸರಬರಾಜು ಮಾಡಿದ ಆರೋಪ ಈತನ ಮೇಲಿದೆ.

ಮತ್ತಿಬ್ಬರಿಗೆ ನ್ಯಾಯಾಂಗ ಬಂಧನ
ಆರಂಭದಲ್ಲಿ ಬಂಧಿಸಲಾಗಿದ್ದ ಮಾಲಕ ವೇಣೂರು ನಿವಾಸಿ ಸೈಯದ್‌ ಬಶೀರ್‌ (47) ಮತ್ತು ಹಾಸನದ ಕಿರಣ್‌ (24) ಅವರ 7 ದಿನಗಳ ಪೊಲೀಸ್‌ ಕಸ್ಟಡಿ ಅವಧಿ ಪೂರ್ಣಗೊಂಡಿದ್ದರಿಂದ ಫೆ. 5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next