Advertisement

ಸುದಿರ್ಮನ್‌ ಕಪ್‌: ಭಾರತ ಹೊರಕ್ಕೆ

11:59 PM May 22, 2019 | Team Udayavani |

ಹೊಸದಿಲ್ಲಿ: ಚೀನ ವಿರುದ್ಧ 0-5 ಅಂತರದಿಂದ ಹೀನಾಯ ಸೋಲು ಕಂಡ ಭಾರತವು ಸುದಿರ್ಮನ್‌ ಕಪ್‌ ಕೂಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಿಂದ ಹೊರಬಿತ್ತು.


Advertisement

“ಡಿ’ ಬಣದ ಮೊದಲ ಪಂದ್ಯಾಟದಲ್ಲಿ ಮಲೇಶ್ಯ ವಿರುದ್ಧ 2-3 ಅಂತರದಿಂದ ಸೋತ ಭಾರತಕ್ಕೆ ಚೀನ ವಿರುದ್ಧ ಗೆಲ್ಲಲೇಬೇಕಾದ ಒತ್ತಡವಿತ್ತು. ಆದರೆ 10 ಬಾರಿಯ ಚಾಂಪಿಯನ್‌ ಚೀನ ಅದ್ಭುತ ರೀತಿಯಲ್ಲಿ ಆಡಿ ಭಾರತಕ್ಕೆ ಪ್ರಬಲ ಹೊಡೆತ ನೀಡಿತು. ಚೀನ ಆಟಗಾರರ ನಿಖರ ಆಟಕ್ಕೆ ಉತ್ತರಿಸಲು ಭಾರತದ ಯಾವುದೇ ಆಟಗಾರರಿಗೆ ಸಾಧ್ಯವಾಗಲಿಲ್ಲ.

ಭಾರತದ ಮಿಕ್ಸೆಡ್‌ ಡಬಲ್ಸ್‌ ಜೋಡಿ ಪ್ರಣವ್‌ ಜೆರ್ರಿ ಚೋಪಾx ಮತ್ತು ಎನ್‌. ಸಿಕ್ಕಿ ರೆಡ್ಡಿ ಅವರು ಮತ್ತೂಮ್ಮೆ ಚೀನದ ವಾಂಗ್‌ ಯಿಲ್ಯು ಮತ್ತು ಹುವಾಂಗ್‌ ಡಾಂಗ್‌ಪಿಂಗ್‌ ಅವರಿಗೆ 5-21, 11-21 ಗೇಮ್‌ಗಳಿಂದ ಸುಲಭವಾಗಿ ಶರಣಾದರು.

ಅಭ್ಯಾಸದ ವೇಳೆ ಗಾಯಗೊಂಡ ಕಿದಂಬಿ ಶ್ರೀಕಾಂತ್‌ ಬದಲು ಸಿಂಗಲ್ಸ್‌ನಲ್ಲಿ ಆಡಲಿಳಿದ ಸಮೀರ್‌ ವರ್ಮ ಒಲಿಂಪಿಕ್‌ ಚಾಂಪಿಯನ್‌ ಚೆನ್‌ ಲಾಂಗ್‌ ವಿರುದ್ಧ ಜಯಕ್ಕಾಗಿ ದೀರ್ಘ‌ ಹೋರಾಟ ನಡೆಸಿದರು. ಮೊದಲ ಗೇಮ್‌ನಲ್ಲಿ 17-21ರಿಂದ ಸೋತರೂ ವರ್ಮ ದ್ವಿತೀಯ ಗೇಮ್‌ನಲ್ಲಿ ಇನ್ನಷ್ಟು ಛಲದಿಂದ ಆಡಿದರು. ಆದರೂ ಒಲಿಂಪಿಕ್‌ ಜಾಂಪಿಯನ್‌ ಲಾಂಗ್‌ 22-20ರಿಂದ ಪಂದ್ಯ ಗೆಲ್ಲಲು ಯಶಸ್ವಿಯಾಗಿ ಚೀನಕ್ಕೆ 2-0 ಮುನ್ನಡೆ ಒದಗಿಸಿದರು.

ಸಾತ್ವಿಕ್‌ರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರಿಂದಲೂ ಭಾರತಕ್ಕೆ ಮುನ್ನಡೆ ಒದಗಿಸಲು ಸಾಧ್ಯವಾಗಲಿಲ್ಲ. ಮೂರು ಗೇಮ್‌ಗಳ ಹೋರಾಟದಲ್ಲಿ ಅವರು ಹಾನ್‌ ಚೆಂಗ್‌ಕಾಯ್‌ ಮತ್ತು ಝೋ ವಿರುದ್ಧ 21-18, 15-21, 17-21 ಗೇಮ್‌ಗಳಿಂದ ಸೋತರು.

Advertisement

ನಿರಂತರ ಮೂರು ಪಂದ್ಯ ಸೋತ ಭಾರತಕ್ಕೆ ಸೈನಾ ನೆಹ್ವಾಲ್‌ ಕೂಡ ಆಸರೆಯಾಗಿ ನಿಲ್ಲಲಿಲ್ಲ. ಅವರು ಆಲ್‌ ಇಂಗ್ಲೆಂಡ್‌ ಜಾಂಪಿಯನ್‌ ಚೆನ್‌ ಯುಫೆಯಿ ಅವರಿಗೆ 33 ನಿಮಿಷಗಳ ಕಾದಾಟದಲ್ಲಿ 12-21, 17-21 ಗೇಮ್‌ಗಳಿಂದ ಶರಣಾದರು.

ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ ಮತ್ತು ಸಿಕ್ಕಿ ಅವರು ಚೆನ್‌ ಕ್ವಿಂಗ್‌ಚೆನ್‌ ಮತ್ತು ಜಿಯಾ ಯಿಫಾನ್‌ ಅವರಿಗೆ 12-21, 15-21 ಗೇಮ್‌ನಿಂದ ಸೋತರು.

2017ರಲ್ಲಿ ಕ್ವಾರ್ಟರ್‌ಫೈನಲ್‌
ಭಾರತ ಈ ಹಿಂದೆ 2011 ಮತ್ತು 2017ರಲ್ಲಿ ನಡೆದ ಸುದೀರ್ಮನ್‌ ಕಪ್‌ ಕೂಟದಲ್ಲಿ ಕ್ವಾರ್ಟರ್‌ಫೈನಲ್‌ ಹಂತ ತಲುಪಿತ್ತು. ಈ ಬಾರಿ ಬಣ ಹಂತದಲ್ಲಿ ಆಡಿದ ಎರಡು ಪಂದ್ಯಾಟದಲ್ಲಿ ಸೋತು ಕೂಟದಿಂದ ನಿರ್ಗಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next