Advertisement
ಇದರಿಂದ ಭಾರತದ ನಾಕೌಟ್ ಪ್ರವೇಶಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಬುಧವಾರದ ಪಂದ್ಯದಲ್ಲಿ ಭಾರತ ಆತಿಥೇಯ ಚೀನವನ್ನು ಎದು ರಿಸಬೇಕಿದೆ. ಚೀನ ತನ್ನ ಮೊದಲ ಸ್ಪರ್ಧೆಯಲ್ಲಿ ಮಲೇಶ್ಯಕ್ಕೆ ಸೋಲುಣಿಸಿತ್ತು.
ಆರಂಭದ ಮಿಕ್ಸೆಡ್ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಅಶ್ವಿನಿ ಪೊನ್ನಪ್ಪ ಜೋಡಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿ ಯಾಗಿತ್ತು. ಆದರೆ ಪುರುಷರ ಸಿಂಗಲ್ಸ್ ನಲ್ಲಿ ಕೆ. ಶ್ರೀಕಾಂತ್ ಬದಲು ಸಮೀರ್ ವರ್ಮ ಅವರನ್ನು ಕಣಕ್ಕಿಳಿಸಿದ್ದು ದುಬಾರಿಯಾಗಿ ಪರಿಣ ಮಿಸಿತು. ವರ್ಮ ಅವರನ್ನು ಲೀ ಜೀ ಜಿಯ 21-13, 21-15 ಅಂತರದಿಂದ ಹಿಮ್ಮೆಟ್ಟಿಸಿದರು. ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು 21-12, 21-8ರಿಂದ ಗೋಹ್ ಜಿನ್ ವೀ ಅವರನ್ನು ಮಣಿಸಿ ಭಾರತಕ್ಕೆ 2-1 ಮುನ್ನಡೆ ಕೊಡಿಸಿದರು. ಆದರೆ ಪುರುಷರ ಡಬಲ್ಸ್‌ನಲ್ಲಿ ಮುನು ಅತ್ರಿ-ಬಿ. ಸುಮೀತ್ ರೆಡ್ಡಿ ಜೋಡಿಗೆ ಗೆಲುವು ಮರೀಚಿಕೆಯಾಯಿತು. ಸ್ಪರ್ಧೆ 2-2 ಸಮಬಲಕ್ಕೆ ಬಂತು.
Related Articles
ವನಿತಾ ಡಬಲ್ಸ್ ವಿಭಾಗದ ನಿರ್ಣಾಯಕ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ವಿಶ್ವದ 13ನೇ ರ್‍ಯಾಂಕಿಂಗ್ ಜೋಡಿಯಾದ ಚೌ ಮೀ ಕುವಾನ್-ಲೀ ಮೆಂಗ್ ಯೀನ್ ಕೈಯಲ್ಲಿ 21-11, 21-19 ಅಂತರದ ಹೊಡೆತ ಅನುಭವಿಸಿದರು.
Advertisement