ಪಣಜಿ: ಎಂಜಿಪಿ ಪಕ್ಷ ಕೈ ಹಿಡಿದುಕೊಂಡು ವಿಧಾನಸಭೆ ಪ್ರವೇಶಿಸಿತ್ತು. ಆದರೆ ಬಿಜೆಪಿಯು ಪದೆ ಪದೆ ಎಂಜಿಪಿ ಪಕ್ಷವನ್ನು ಅವಮಾನಿಸಿದೆ. ಇದರಿಂದಾಗಿ ಎಂಜಿಪಿ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಎಂಜಿಪಿ ನಾಯಕ ಸುದೀನ ಧವಳೀಕರ್ ನುಡಿದರು.
ಮಾಂದ್ರೆಮ್‍ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಧವಳೀಕರ್ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಂದ್ರೆಮ್ ಕ್ಷೇತ್ರದ ಎಂಜಿಪಿ ಪಕ್ಷದ ನಾಯಕ ಜೀತ್ ಆರೋಲ್ಕರ್ ಮಾತನಾಡಿ- ಯಾವುದೇ ಪರಿಸ್ಥಿತಿಯಲ್ಲಿಯೂ ಎಂಜಿಪಿ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬೇರೆ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೂ ಕೂಡ ನಮ್ಮ ಪಕ್ಷದ ಚುನಾವಣಾ ಕ್ಷೇತ್ರಗಳು ನಮಗೇ ಲಭಿಸಲಿವೆ ಮತ್ತು ಈ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಉಮೇದುವಾರರು ಜಯಗಳಿಸಲಿದ್ದಾರೆ ಎಂದರು.
ಎಂಜಿಪಿ ಪಕ್ಷವು ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ಧಿ ಮಾಂದ್ರೆಮ್ ಮತಕ್ಷೇತ್ರದಲ್ಲಿ ಹರಿದಾಡಿತ್ತು. ಈ ಕುರಿತಂತೆ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ಬೇಸರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸುದೀನ ಧವಳೀಕರ್ ರವರು ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಚರ್ಚಿಸಿದರು.