Advertisement

PM Modi ಯವರಿಂದ ಇಂದು ಸುದರ್ಶನ ಸೇತು ಉದ್ಘಾಟನೆ

12:32 AM Feb 25, 2024 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭ ಅವರು 52,250 ಕೋಟಿ ರೂ. ಮೌಲ್ಯದ ವಿವಿಧ ಹಲವು ಅಭಿವೃದ್ಧಿ ಕಾಮಗಾರಿ   ಗಳಿಗೆ ಚಾಲನೆ ನೀಡಲಿದ್ದಾರೆ. ಈ ಪೈಕಿ ವಿಶೇಷವಾಗಿ ಗುಜರಾತ್‌ನ ಓಕಾನಿಂದ ಬೇಟಾ ದ್ವಾರಕಾ ವರೆಗಿನ 2.32 ಕಿ.ಮೀ. ಉದ್ದದ ಕೇಬಲ್‌ ಶೈಲಿಯಲ್ಲಿ ನಿರ್ಮಿಸಲಾಗಿರುವ ಸೇತುವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

Advertisement

ಈ ಬಗ್ಗೆ ಅವರು ಶನಿವಾರ ಟ್ವೀಟ್‌ ಮಾಡಿ “ನಾಳೆ ಗುಜರಾತ್‌ನ ಅಭಿವೃದ್ಧಿಯಲ್ಲಿ ವಿಶೇಷ ದಿನ. ಉದ್ಘಾಟನೆ ಮಾಡಲಿರುವ ಹಲವು ಯೋಜನೆಗಳ ಪೈಕಿ ಓಖಾದಿಂದ ಬೇಟ್‌ ದ್ವಾರಕಾಗೆ ಸುದರ್ಶನ ಸೇತು ಕೂಡ ಒಂದು. ಇದು ಹಲವು ವೈಶಿಷ್ಟéಗಳನ್ನು ಹೊಂದಿದೆ’ ಎಂದು ಬರೆದು ಕೊಂಡಿದ್ದಾರೆ.

ಇದಲ್ಲದೆ ರಾಜ್‌ಕೋಟ್‌, ಭಟಿಂಡಾ (ಪಂಜಾಬ್‌), ರಾಯ್‌ಬರೇಲಿ (ಉ.ಪ್ರ.), ಕಲ್ಯಾಣಿ (ಪಶ್ಚಿಮ ಬಂಗಾಲ), ಮಂಗಳ ಗಿರಿ (ಆಂಧ್ರ ಪ್ರದೇಶ)ದಲ್ಲಿ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಗಳನ್ನೂ ಅವರು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಫೆ. 27ರಂದು ತಿರುವನಂತಪುರಕ್ಕೆ ಭೇಟಿ ನೀಡಲಿದ್ದಾರೆ. ಕೇರಳ ಬಿಜೆಪಿ ಕೈಗೊಂಡಿರುವ ಪಾದಯಾತ್ರೆಯ ಸಮಾರೋಪ ದಲ್ಲಿ ಅವರು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next