Advertisement

ನಟಿ ಸುಧಾರಾಣಿಯನ್ನು ಗೇಟ್ ಹೊರಗೆ ಕಾಯಿಸಿದ ಖಾಸಗಿ ಆಸ್ಪತ್ರೆ: ಸಚಿವ ಸುಧಾಕರ್ ಎಚ್ಚರಿಕೆ

05:57 PM Jul 28, 2020 | keerthan |

ಬೆಂಗಳೂರು: ಕೋವಿಡ್ -19 ಸೋಂಕು ಕಾಟ ಆರಂಭವಾದ ನಂತರ ಖಾಸಗಿ ಆಸ್ಪತ್ರೆಯಲ್ಲಿ ಇತರ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳು, ವೆಂಟಿಲೇಟರ್ ಗಳು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇಂತಹ ಅನುಭವ ಕಳೆದ ರಾತ್ರಿ ನಟಿ ಸುಧಾರಾಣಿ ಅವರಿಗೂ ಆಗಿದ್ದು, ಆಸ್ಪತ್ರೆಯ ವಿರುದ್ಧ ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ ರಾತ್ರಿ ಸುಧಾರಾಣಿ ಅಣ್ಣನ ಮಗಳು ಕಿಡ್ನಿ ಸ್ಟೋನ್ ಕಾರಣದಿಂದ ತಲೆಸುತ್ತಿ ಬಿದ್ದಿದ್ದಾರೆ. ಈ ಕಾರಣದಿಂದ ಸುಧಾರಾಣಿ ಕೂಡಲೇ ಆಕೆಯನ್ನು ಕರೆದುಕೊಂಡು ಆ್ಯಂಬುಲೆನ್ಸ್ ನಲ್ಲಿ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಬೆಡ್, ವೆಂಟಿಲೇಟರ್ ಖಾಲಿಯಿಲ್ಲ ಎಂದಿದ್ದಾರೆ. ರಾತ್ರಿ 10 ಗಂಟೆಯಿಂದ 11 ಗಂಟೆಯವರೆಗೂ ಆಸ್ಪತ್ರೆಯ ಗೇಟ್ ಹೊರಗೆ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಅಪೋಲೋ ಆಸ್ಪತ್ರೆಯ ಸಿಬ್ಬಂದಿಗಳ ವರ್ತನೆಯಿಂದ ಬೇಸತ್ತ ಸುಧಾರಾಣಿ ಕೂಡಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಯುಕ್ತರ ಸೂಚನೆ ದೊರೆತ ನಂತರ ಆಸ್ಪತ್ರೆ ಸಿಬ್ಬಂದಿ ಒಳಗೆ ಸೇರಿಸಿಕೊಂಡಿದ್ದಾರೆ.

ಸಚಿವ ಸುಧಾಕರ್ ಎಚ್ಚರಿಕೆ: ಘಟನೆಯ ಬಗ್ಗೆ ತಿಳಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಆಸ್ಪತ್ರೆಯ ವಿರುದ್ಧ ಶಿಸ್ತುಕ್ರಮ ವಹಿಸಲಾಗುವುದು ಎಂದಿದ್ದಾರೆ. ಟ್ವಿಟ್ ಮಾಡಿರುವ ಅವರು, ನಟಿ ಸುಧಾರಾಣಿ ಅರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ಅವರಷ್ಟೇ ಅಲ್ಲ ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆ ಸಿಗದೇ ಪರದಾಡಬಾರದು. ಆ ಖಾಸಗಿ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next