Advertisement
ಕೊರಟಗೆರೆ ಪಟ್ಟಣದ ಜಾಮೀಯಾ ಸಮುದಾಯ ಭವನದ ಆವರಣದಲ್ಲಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಕೊರಟಗೆರೆ ಕ್ಷೇತ್ರದಲ್ಲಿ 25 ವರ್ಷ ಸೋತ್ರು-ಗೆದ್ರು ಜನರ ಜೊತೆಗಿದ್ದು ಜನಸೇವೆ ಮಾಡಿದ್ದೀನಿ. ಮುಂದಿನ 30 ದಿನ ಮಾತ್ರ ನೀವು ನನ್ನ ಜೊತೆ ಇರಿ, ನಾನು 5 ವರ್ಷ ಮನೆ ಮಗನಾಗಿ ನಿಮ್ಮ ಸೇವೆ ಮಾಡ್ತೀನಿ.2023 ರ ವಿಧಾನಸಭಾ ಚುನಾವಣೆಗೆ ನಾನು ಎ.15 ರ 10 ಗಂಟೆಗೆ ನಾಮಪತ್ರ ಸಲ್ಲಿಸ್ತೀನಿ. ತಾವೆಲ್ಲರೂ ಆಗಮಿಸಿ ನನಗೆ ಬೆಂಬಲ ಮತ್ತು ಸಹಕಾರ ನೀಡಬೇಕಿದೆ ಎಂದರು.
400 ಕಾರ್ಯಕರ್ತರ ಸೇರ್ಪಡೆ..
ಹಿಂದುಳಿದ ವರ್ಗದ ಬೃಹತ್ ಸಮಾವೇಶದಲ್ಲಿ ಮಾಜಿ ತಾಪಂ ಸದಸ್ಯರಾದ ಸುಮರಾಜು, ಹನುಮಂತರಾಯಪ್ಪ, ಅಶ್ವತ್ಥನಾರಾಯಣ, ಮಾಜಿ ಗ್ರಾಪಂ ಅಧ್ಯಕ್ಷ ಮಂಜುನಾಥ, ಹಾಲಿ ಗ್ರಾಪಂ ಸದಸ್ಯರು, ಮಾಜಿ ಸದಸ್ಯರು ಸೇರಿದಂತೆ 400ಕ್ಕೂ ಅಧಿಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರೇ ಹಿಂದುಳಿದ ವರ್ಗದ ಎಷ್ಟು ಜನರಿಗೆ ಟಿಕೆಟ್ ನೀಡಿದ್ದಿರಿ. ನಮ್ಮ ಜೆಡಿಎಸ್ ಪಕ್ಷ ಬಲಿಜ ಮತ್ತು ಕುರುಬ ಸಮಾಜಕ್ಕೆ ನೀಡಿದೆ. ಕುರುಬ ಸಮಾಜ ಪರಮೇಶ್ವರ್‌ಗೆ ಮತ ಹಾಕ್ತಾರೆ ಎಂಬ ನಂಬಿಕೆಯೇ ಸುಳ್ಳು. ಕೊರಟಗೆರೆ ಕ್ಷೇತ್ರದ ಮನೆಯ ಮಗನಾಗಿ ದುಡಿಯುವ ಸುಧಾಕರಲಾಲ್‌ಗೆ ಕುರುಬ ಸಮಾಜದ ಶೇ.75 ರಷ್ಟು ಜನ ಬೆಂಬಲ ನೀಡ್ತಾರೆ.ಆರ್.ಸಿ.ಅಂಜಿನಪ್ಪ. ಜೆಡಿಎಸ್ ಜಿಲ್ಲಾಧ್ಯಕ್ಷ, ತುಮಕೂರು ಸಮಾವೇಶದಲ್ಲಿ ಹಿಂದುಳಿದ ವರ್ಗದ ರಾಜ್ಯ ಕಾರ್ಯಾಧ್ಯಕ್ಷ ಪಾತಯ್ಯ, ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಕುಸುಮಾ, ಕೊರಟಗೆರೆ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು, ಉಪಾಧ್ಯಕ್ಷ ಕಾಮರಾಜು, ವಕ್ತಾರ ಲಕ್ಷ್ಮಣ್, ಕಾರ್ಯದರ್ಶಿ ಲಕ್ಷ್ಮಣ್, ಹಿಂದುಳಿದ ವರ್ಗದ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಮಂಜುನಾಥ, ವೀರಕ್ಯಾತರಾಯ, ಹನುಮಂತರಾಜು, ಪ್ರಕಾಶ್, ಸತೀಶ್, ದೀಪೋ, ಶ್ರೀನಿವಾಸ್, ದೇವರಾಜು, ಸಾಕರಾಜು, ನಾಗೇಂದ್ರ, ನಟರಾಜು, ಪ್ರಕಾಶ್, ರಮೇಶ್, ಕೌಶಿಕ್, ಅಮರ, ಸೇರಿದಂತೆ ಇತರರು ಇದ್ದರು.