ಕಲಬುರಗಿ: ಮೂರು ದಿನಗಳ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಉತ್ತರಾದಿ ಮಠದಲ್ಲಿ ನಡೆಯುವ ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ ಗುರುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿತು.
ಬೆಂಗಳೂರು ಮುಂಬೈ ಚೆನ್ನೈ ಹೈದರಾಬಾದ್ ಮಣ್ಣೂರ ಮುಂತಾದ ನಗರಗಳಲ್ಲಿರುವ ವಿದ್ಯಾಪೀಠ ಗಳಿಂದ ಎಲ್ಲ ವಿದ್ವಾಂಸರು ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ದೇಶಾದ್ಯಂತ ಹರಡಿರುವ ಶ್ರೀ ಉತ್ತರಾದಿ ಮಠದ ಶಿಷ್ಯರು ಮಳಖೇಡದಲ್ಲಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳಕ್ಕೆ ಆಗಮಿಸಿದ್ದಾರೆ. ವಿಶೇಷವಾಗಿ ಬೆಂಗಳೂರು, ಮುಂಬೈ, ಚೆನ್ನೈ ,ಹೈದರಾಬಾದ್, ನವದೆಹಲಿ ನಗರಗಳಿಂದ ವಿದ್ವಾಂಸರು ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಗುರುವಾರ ಶ್ರೀ ಗಳವರು ಬ್ರಾಹ್ಮೀ ಮುಹೂರ್ತದಲ್ಲಿ ( 4.30 ) ಪವಿತ್ರ ಕಾಗಿಣೀ ನದಿಯಲ್ಲಿ ಅವಗಾಹನ ಸ್ನಾನ ಪ್ರಾತರಾಹ್ನೀಕ ಮುಗಿಸಿ ಶ್ರೀ ಜಯತೀರ್ಥರ ಶ್ರೀಪಾದಂಗಳವರ ಮೂಲ ಬೃಂದಾವನ ಕ್ಕೆ ನಿರ್ಮಾಲ್ಯ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಪೂರೈಸಿದರು.
ನಂತರ 7 ಗಂಟೆ ಗೆ ಶ್ರೀ ಮೂಲ ಸೀತಾ ಸಮೇತ ಶ್ರೀ ಮೂಲ ರಾಮ ದೇವರ ಪೂಜೆಯನ್ನು ಬಂಗಾರದ ಮತ್ತು ವಜ್ರ ಮಂಟಪದಲ್ಲಿ ನೆರವೇರಿಸಿದರು.