Advertisement

ಸುದೀಪ್‌ಗೆ ಜುಲೈ 06 ಸೆಂಟಿಮೆಂಟ್‌

11:27 AM Jul 07, 2018 | Team Udayavani |

ಜುಲೈ 06 ನಟ ಸುದೀಪ್‌ ಕೆರಿಯರ್‌ನಲ್ಲಿ ಮಹತ್ವದ ದಿನ. ಆ ದಿನವನ್ನು ಅವರು ಮರೆಯಲು ಸಾಧ್ಯವಿಲ್ಲ. ಅದೇ ಕಾರಣದಿಂದ ಅವರು ಮರೆತಿಲ್ಲ. ನಿನ್ನೆ (ಜುಲೈ 06) ರಂದು ಅದರ ಮಹತ್ವವನ್ನು ಅವರು ಮೆಲುಕು ಹಾಕಿದ್ದಾರೆ. ಅಷ್ಟಕ್ಕೂ ಸುದೀಪ್‌ ಅವರಿಗೆ ಜುಲೈ 6 ರ ಮಹತ್ವವೇನು ಎಂದು ನೀವು ಕೇಳಬಹುದು.

Advertisement

ಅದಕ್ಕೆ ಉತ್ತರ “ಹುಚ್ಚ’ ಹಾಗೂ “ಈಗ’. ಸುದೀಪ್‌ ಅವರ “ಹುಚ್ಚ’ ಚಿತ್ರ 2001ರ ಜುಲೈ 06 ರಂದು ತೆರೆಕಂಡರೆ, ಅವರ ತೆಲುಗು ಚಿತ್ರ “ಈಗ’ 2012 ರ ಜುಲೈ 06ಕ್ಕೆ ಬಿಡುಗಡೆಯಾಗಿತ್ತು.  ಈ ಎರಡು ಸಿನಿಮಾಗಳು ಸುದೀಪ್‌ ಕೆರಿಯರ್‌ನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರೆ ತಪ್ಪಲ್ಲ.

ಆಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಸುದೀಪ್‌ ಅವರ “ಹುಚ್ಚ’ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು ಚಿತ್ರರಂಗದಲ್ಲಿ ಅವರದೇ ಆದ ಒಂದು ಸ್ಥಾನ ಸೃಷ್ಟಿಯಾಗುವಂತೆ ಮಾಡಿದರೆ, ನಟನಾಗಿ ಅವರನ್ನು ಮತ್ತೂಂದು ಲೆವೆಲ್‌ಗೆ ಕೊಂಡೊಯ್ಯಿದ ಚಿತ್ರ “ಈಗ’. ಅದೇ ಕಾರಣದಿಂದ ಸುದೀಪ್‌ ನಿನ್ನೆ ಈ ಎರಡು ಸಿನಿಮಾಗಳನ್ನು ನೆನಪಿಸಿಕೊಂಡು ಟ್ವೀಟ್‌ ಮಾಡಿದ್ದಾರೆ.

“ಹುಚ್ಚ’ ಹಾಗೂ “ಈಗ’ ಚಿತ್ರಗಳು ನನಗೆ ಈ ದಿನವನ್ನು (ಜುಲೈ 06) ವಿಶೇಷವನ್ನಾಗಿಸಿದೆ. “ಹುಚ್ಚ’ ನನ್ನನ್ನು ನಟನಾಗಿ ಗುರುತಿಸಿಕೊಳ್ಳುವಂತೆ, ನನ್ನ ರಾಜ್ಯದ ಜನರ ಹೃದಯದಲ್ಲಿ ಸ್ಥಾನ ಪಡೆಯುವಂತೆ ಮಾಡಿದರೆ, “ಈಗ’ ಚಿತ್ರ ನನ್ನನ್ನು ಜಗತ್ತಿಗೆ ಪರಿಚಯಿಸಿತು. ಆ ಕಾರಣದಿಂದ ಈ ದಿನ ಹಾಗೂ ಈ ಎರಡು ಚಿತ್ರಗಳು ನನಗೆ ತುಂಬಾನೇ ಸ್ಪೆಷಲ್‌’ ಎಂದು ಟ್ವೀಟ್‌ ಮಾಡಿದ್ದಾರೆ ಸುದೀಪ್‌. ಸದ್ಯ ಸುದೀಪ್‌ ಅವರ “ಕೋಟಿಗೊಬ್ಬ-3′ ಚಿತ್ರೀಕರಣ ವಿದೇಶದಲ್ಲಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next