Advertisement

ಸುದೀಪ್‌ ವೆಬ್‌ಸೈಟ್‌ ಮತ್ತು ಆ್ಯಪ್‌ ಬಿಡುಗಡೆ

11:07 AM Nov 28, 2017 | |

ಕಿಚ್ಚ ಸುದೀಪ್‌ ಫ್ಯಾನ್ಸ್‌ ಅಸೋಸಿಯೇಷನ್ಸ್‌ ಹೀಗೊಂದು ಹೊಸ ಕೆಲಸಕ್ಕೆ ಕೈ ಹಾಕಿದೆ. ಅದು ವೆಬ್‌ಸೈಟ್‌ ಮತ್ತು ಆ್ಯಪ್‌. ಹೌದು, ಕಿಚ್ಚ ಸುದೀಪ್‌ ಅವರ ಬೆಳಗಾವಿಯ ಅಭಿಮಾನಿಗಳು ಇಂಥದ್ದೊಂದು ಹೊಸ ಕೆಲಸ ಮಾಡಿ ಸ್ವತಃ ಸುದೀಪ್‌ ಅವರಿಂದ ಮೆಚ್ಚುಗೆ ಪಡೆದಿದ್ದಾರೆ. ಇತ್ತೀಚೆಗೆ ಸುದೀಪ್‌ ಅವರೇ ಬಿಗ್‌ಬಾಸ್‌ ಸೆಟ್‌ಗೆ ಆ ಅಭಿಮಾನಿಗಳನ್ನು ಪ್ರೀತಿಯಿಂದ ಬರಮಾಡಿಕೊಂಡು ವೆಬ್‌ಸೈಟ್‌ ಮತ್ತು ಆ್ಯಪ್‌ಗೆ ಚಾಲನೆ ನೀಡಿದ್ದಾರೆ.

Advertisement

ಋತ್ವಿಕ್‌ ಹಾಗು ಅವರ ಇನ್ನಿಬ್ಬರ ಗೆಳೆಯರು ಇಂಥದ್ದೊಂದು ಯೋಚನೆ ಮಾಡಿ ಸುದೀಪ್‌ ಅವರ ಬಗೆಗಿನ ವಿಶೇಷ ಮಾಹಿತಿಗಳು ಅಲ್ಲಿ ಸಿಗುವಂತೆ ಮಾಡಿದ್ದಾರೆ. ಅವರು ಮಾಡಿರುವ ವೆಬ್‌ಸೈಟ್‌ ಮತ್ತು ಆ್ಯಪ್‌ನಲ್ಲಿ ಕಿಚ್ಚ ಕ್ರಿಯೇಷನ್ಸ್‌ ಬಗ್ಗೆ, ಅವರ ಬ್ಯಾನರ್‌ನಲ್ಲಿ ತಯಾರಾಗಿರುವ ಆಗುತ್ತಿರುವ ಹೊಸ ಸಿನಿಮಾಗಳು ಮತ್ತು ಅವರ ಕುರಿತಾದ ಸುದ್ದಿಗಳು, ಇನ್ನಿತರೆ ಕ್ಷಣ ಕ್ಷಣದ ಮಾಹಿತಿಗಳು ಸಿಗಲಿವೆ.

ಋತ್ವಿಕ್‌ ಹಾಗೂ  ಇತರೆ ಇಬ್ಬರು ಗೆಳೆಯರು ಸೇರಿಕೊಂಡು ನುರಿತ ತಂತ್ರಜ್ಞರ ಸಹಕಾರವೇ ಇಲ್ಲದಂತೆ ಸ್ವತಃ ಅವರೇ ಎಲ್ಲವನ್ನೂ ತಿಳಿದುಕೊಂಡು ಮಾಡಿರುವ ವೆಬ್‌ಸೈಟ್‌ ಮತ್ತು ಆ್ಯಪ್‌ ಮಾಡಿರುವುದು ವಿಶೇಷ. ವೆಬ್‌ಸೈಟ್‌ ಹಾಗು ಆ್ಯಪ್‌ ಬಗ್ಗೆ ತಿಳಿದುಕೊಂಡು, ಚಾಲನೆ ಕೊಟ್ಟ ಸುದೀಪ್‌, ಅಫಿಷಿಯಲ್‌ ವೆಬ್‌ಸೈಟ್‌ ಮಾಡಿರುವ ಅಭಿಮಾನಿಗಳ ಕೆಲಸ ಮೆಚ್ಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ.

ಈಗ ಸುದೀಪ್‌ ಅವರ ಹೊಸ ಚಿತ್ರಗಳ ಕುರಿತಾದ ಕ್ಷಣ ಕ್ಷಣದ ಮಾಹಿತಿಗಳು ಬೇಕಾದರೆ, ksfaofficial.com ಹೆಸರಿನ ಈ ವೆಬ್‌ಸೈಟ್‌ ಕ್ಲಿಕ್‌ ಮಾಡಿದರೆ ಸುದೀಪ್‌ ಬಗ್ಗೆ ಎಲ್ಲಾ ಮಾಹಿತಿಗಳು ಸಿಗಲಿವೆ.  ಇನ್ನೊಂದು ವಿಶೇಷವೆಂದರೆ, ಸುದೀಪ್‌ ಅಭಿಮಾನಿಗಳು ವೆಬ್‌ಸೈಟ್‌ ಜೊತೆಯಲ್ಲಿ ksfa ಎಂಬ ಆ್ಯಪ್‌ವೊಂದನ್ನೂ ಮಾಡಿದ್ದಾರೆ. ಈ ಮೂಲಕ ಮೊದಲ ಆ್ಯಪ್‌ ಹೊಂದಿರುವ ಕನ್ನಡದ ನಟ ಎಂಬ ಹೆಗ್ಗಳಿಕೆಯೂ ಸುದೀಪ್‌ ಅವರದ್ದಾಗಿದೆ.

ಅಲ್ಲಿಗೆ ಈ ಆ್ಯಪ್‌ ಅನ್ನು ಮೊಬೈಲ್‌ನಲ್ಲಿ ಅಳವಡಿಸಿಕೊಂಡರೆ, ಸುದೀಪ್‌ ಅವರ ಕುರಿತಾದ ಮಾಹಿತಿಯ ಜತೆಗೆ, ಬ್ರೇಕಿಂಗ್‌ ನ್ಯೂಸ್‌ ಮತ್ತು ಎಂದೂ ನೋಡಿರದ ಸುದೀಪ್‌ ಅವರ ಅಪರೂಪದ ಫೋಟೋಗಳು ಕಾಣಸಿಗಲಿವೆ. ಅದೇನೆ ಇರಲಿ, ಯಾವುದೇ ತಂತ್ರಜ್ಞರ ಮೊರೆ ಹೋಗದೆ, ತಮಗೆ ಇಷ್ಟ ಬಂದಂತೆ ವಿನ್ಯಾಸ ಮಾಡಿಕೊಂಡು ಈ ವೆಬ್‌ಸೈಟ್‌ ಹಾಗು ಆ್ಯಪ್‌ ಮಾಡಿರುವ ಅಭಿಮಾನಿಗಳು ಮತ್ತಷ್ಟು ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next