Advertisement
ಶಿವಮೊಗ್ಗ-ಸಾಗರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಎದುರು ಸುದೀಪ್ ಅವರ ತಂದೆ ಸರೋವರ ಸಂಜೀವ್ ಸುಮಾರು 18 ಎಕರೆ ಜಮೀನು ಹೊಂದಿದ್ದು, ಇದರ ಪಕ್ಕದಲ್ಲಿರುವ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಸ.ನಂ. 50 ರಲ್ಲಿ ಸಾಗುವಳಿ ಮಾಡಿರುವ ಕಣ್ಣಪ್ಪ ಕುಟುಂಬ ಸರೋವರ ಸಂಜೀವ್ ಅವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೌರ್ಜನ್ಯ ದೂರು ನೀಡಿದೆ.
ನಟ ಸುದೀಪ ಅವರ ತಂದೆ ಸಂಜೀವ ಅವರು, ತಮ್ಮ ಕೃಷಿ ಭೂಮಿಯ ಪಕ್ಕದ ಸಾರ್ವಜನಿಕ ಕೆರೆಯನ್ನು ಅಭಿವೃದ್ಧಿಪಡಿಸಲು ಜಿಪಂನೊಂದಿಗೆ ಒಪ್ಪಂದ ಮಾಡಿಕೊಂಡು ಬಳಿಕ, ಎಲ್ಲ ನಿಯಮಗಳನ್ನು ಉಲ್ಲಂಘಿಸಿ, ಕೆರೆ ನೀರನ್ನು ಸ್ವಂತ ಕೃಷಿ ಭೂಮಿಗೆ ಬಳಸುತ್ತಿದ್ದಾರೆ. ಪುಟ್ಟ ಕೆರೆಯನ್ನು ಅನಧಿಕೃತವಾಗಿ ಇನ್ನಷ್ಟು ವಿಸ್ತಾರಗೊಳಿಸಿದ್ದು, ಅಧಿಕಾರಿಗಳನ್ನು ಬಳಸಿಕೊಂಡು ದಾಖಲೆಗಳನ್ನು ತಿದ್ದಲಾಗಿದೆ ಎಂದು ಸ್ಥಳೀಯ ಸಂಘಟನೆಗಳು ಆರೋಪಿಸಿವೆ. ಕೆರೆ ಒಪ್ಪಂದ ಉಲ್ಲಂಘಿಸಿ ತಮ್ಮ 18 ಎಕರೆ ಅಡಿಕೆ, ತೆಂಗಿನ ತೋಟಕ್ಕೆ ಸಂಜೀವ್ ಅವರು ನೀರು ಹರಿಸುತ್ತಿದ್ದಾರೆ. ಇದಕ್ಕಾಗಿ ಕೆರೆಗೆ ಪ್ರತ್ಯೇಕ ತೂಬು, ಕಾಲುವೆ ನಿರ್ಮಿಸಿದ್ದಾರೆ. ಆದರೆ ಕೆರೆ ಅಭಿವೃದ್ಧಿಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
Related Articles
-ಡಾ| ಎಂ.ಲೋಕೇಶ್, ಜಿಲ್ಲಾಧಿಕಾರಿ, ಶಿವಮೊಗ್ಗ
Advertisement