Advertisement

ಸುದೀಪ್‌ ಚಿತ್ರರಂಗ ಸ್ಪರ್ಶಕ್ಕೆ 25 ನೇ ಹೆಜ್ಜೆ

10:09 AM Feb 02, 2020 | Lakshmi GovindaRaj |

ಸುದೀಪ್‌ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿವೆ. ಒಬ್ಬ ನಟ ಚಿತ್ರರಂಗದಲ್ಲಿ 25 ವರ್ಷ ಹೀರೋ ಆಗಿ ಗಟ್ಟಿ ನೆಲೆ ಕಾಣುವುದು ಸುಲಭದ ಮಾತಲ್ಲ. “ತಾಯವ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ ಸುದೀಪ್‌ ಯಶಸ್ವಿ 24 ವರ್ಷಗಳನ್ನು ಪೂರೈಸಿ ಇದೀಗ 25 ನೇ ವರ್ಷಕ್ಕೆ ಕಾಲಿಟ್ಟು ತಮ್ಮ ಸಿನಿಪಯಣ ಮುಂದುವರೆಸಿದ್ದಾರೆ.

Advertisement

ಇಷ್ಟು ವರ್ಷದ ಸಿನಿಜರ್ನಿಯಲ್ಲಿ ಸುದೀಪ್‌ ಅವರು ಕನ್ನಡ ಚಿತ್ರರಂಗ ಸೇರಿದಂತೆ ತೆಲುಗು, ತಮಿಳು ಹಾಗು ಬಾಲಿವುಡ್‌ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಮಿತಾಭ್‌ ಬಚ್ಚನ್‌, ಸಲ್ಮಾನ್‌ಖಾನ್‌ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸುದೀಪ್‌ ತಮ್ಮದೊಂದು ಛಾಪು ಮೂಡಿಸಿದ್ದಾರೆ.

ಅದೇನೆ ಇರಲಿ, 24 ವರ್ಷಗಳನ್ನು ಪೂರೈಸಿ, 25 ವರ್ಷಕ್ಕೆ ಕಾಲಿಟ್ಟಿರುವ ಸುದೀಪ್‌ ಅವರಿಗೆ ಸೋಶಿಯಲ್‌ ಮೀಡಿಯಾದಲ್ಲಿ ಕನ್ನಡ ಚಿತ್ರರಂಗದ ನಟ,ನಟಿಯರು ಶುಭಾಶಯ ಹೇಳಿದ್ದಾರೆ. ನಿರ್ದೇಶಕ ಅನೂಪ್‌ ಭಂಡಾರಿ, ನಟಿ ರಕ್ಷಿತಾ ಪ್ರೇಮ್‌, ನಿರ್ದೇಶಕ ಸುನಿ, ನಟಿ ಮಾನ್ವಿತಾ ಸೇರಿದಂತೆ ಇತರರು ಶುಭ ಕೋರಿದ್ದಾರೆ. ಇನ್ನು, ಸೋಶಿಯಲ್‌ ಮೀಡಿಯಾದಲ್ಲಿ ಸುದೀಪ್‌ ಅವರ ಸಂಘ -ಸಂಸ್ಥೆಗಳ ಅಭಿಮಾನಿಗಳು ಕೂಡ ತಮ್ಮ ಪ್ರೀತಿಯ ನಟನಿಗೆ ಶುಭಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next