Advertisement

ಪ್ರತಿ ವಾರ ಅಡುಗೆ ಮಾಡ್ತಾರಾ ಸುದೀಪ್‌?

11:47 AM Oct 06, 2017 | |

“ಬಿಗ್‌ ಬಾಸ್‌’ನ ಐದನೇ ಸೀಸನ್‌ನಲ್ಲಿ ಸುದೀಪ್‌ ಪ್ರತೀ ವಾರ ಅಡುಗೆ ಮಾಡುತ್ತಾರಾ? ಇಂಥದ್ದೊಂದು ಪ್ರಶ್ನೆ ಬರುವುದಕ್ಕೂ ಕಾರಣವಿದೆ. ಈ ಕಾರ್ಯಕ್ರಮದ ಎರಡನೆಯ ಪ್ರೋಮೋ ಇತ್ತೀಚೆಗೆ ಬಿಡುಗಡೆಯಾಗಿದೆ. ಆ ಪ್ರೋಮೋದಲ್ಲಿ ಸುದೀಪ್‌ ಮಾರುಕಟ್ಟೆಗೆ ಹೋಗಿ ತರಕಾರಿ ತರುವ ದೃಶ್ಯಗಳಿವೆ.

Advertisement

ಎಲ್ಲಾ ಬಿಟ್ಟು, ಸುದೀಪ್‌ ಯಾಕೆ ಹೋಗಬೇಕು ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೋದರೆ, ಒಂದು ಸರ್‌ಪ್ರೈಸ್‌ ಕಾದಿದೆ. ಮೂಲಗಳ ಪ್ರಕಾರ, ಈ ಬಾರಿ ಸುದೀಪ್‌ ಅವರು ಪ್ರತಿ ಭಾನುವಾರ “ಬಿಗ್‌ ಬಾಸ್‌’ ಕಾರ್ಯಕ್ರಮದಲ್ಲಿ ಅಡುಗೆ ಮಾಡುತ್ತಾರಂತೆ. ಅದಕ್ಕೆ ಸರಿಯಾಗಿ, ಸುದೀಪ್‌ ಅವರಿಗೆಂದೇ, ಒಂದು ಹೊಸ ಕಿಚನ್‌ ಸೆಟ್‌ ಸಹ ನಿರ್ಮಾಣವಾಗುತ್ತಿದೆಯಂತೆ. ಅದೇ ಈ ಸೀಸನ್‌ನ ಹೈಲೈಟ್‌ ಎಂದು ಹೇಳಲಾಗುತ್ತಿದೆ.

ಎಲ್ಲಾ ಸರಿ, ಸುದೀಪ್‌ ಅವರು ಅಡುಗೆ ಮಾಡುವುದು “ಬಿಗ್‌ ಬಾಸ್‌’ನ ಸ್ಪರ್ಧಿಗಳಿಗಾ ಅಥವಾ ಕಾರ್ಯಕ್ರಮಗಳಿಗೆ ಬರುವ ಅತಿಥಿಗಳಿಗಾ ಎಂಬ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ, ಕಾರ್ಯಕ್ರಮ ಶುರುವಾಗುವವರೆಗೂ ಕಾಯಲೇಬೇಕು. ಅಂದ ಹಾಗೆ, “ಬಿಗ್‌ ಬಾಸ್‌’ನ ಐದನೇ ಸೀಸನ್‌ ಇದೇ ತಿಂಗಳ 15ರಂದು ಪ್ರಾರಂಭವಾಗಲಿದೆ. ಸಾಮಾನ್ಯವಾಗಿ “ಬಿಗ್‌ ಬಾಸ್‌’ ಕಾರ್ಯಕ್ರಮವು ಕಲರ್ಸ್‌ ಕನ್ನಡದಲ್ಲಿ ರಾತ್ರಿ 8ರಿಂದ 9ಕ್ಕೆ ಪ್ರಸಾರವಾಗುತಿತ್ತು.

ಈ ಬಾರಿ ಒಂದು ದೊಡ್ಡ ಬದಲಾವಣೆಯೆಂದರೆ, ಕಾರ್ಯಕ್ರಮ ಕಲರ್ಸ್‌ ಸೂಪರ್‌ ಚಾನಲ್‌ನಲ್ಲಿ ರಾತ್ರಿ 8ರಿಂದ 9ರವರೆಗೂ ಪ್ರಸಾರವಾಗಲಿದೆ. ಅದೇ ಕಾರ್ಯಕ್ರಮವು ಕಲರ್ಸ್‌ ಎಚ್‌.ಡಿಯಲ್ಲಿ ಪುನಃ ಪ್ರಸಾರವಾಗಲಿದೆ. ಇನ್ನೂ ಒಂದು ವಿಶೇಷತೆಯೆಂದರೆ, ಈ ಬಾರಿ ಸ್ಪರ್ಧಿಗಳ ಪೈಕಿ ಕೆಲವು ಸಾಮಾನ್ಯ ವ್ಯಕ್ತಿಗಳೂ ಇರುತ್ತಾರಂತೆ. ಈಗಾಗಲೇ 40 ಸಾವಿರಕ್ಕೂ ಹೆಚ್ಚು ಜನ ವೀಡಿಯೋ ಅಪ್‌ಲೋಡ್‌ ಮಾಡಿದ್ದಾರಂತೆ.

ಆ ಪೈಕಿ ಹಲವರನ್ನು ಶಾರ್ಟ್‌ಲಿಸ್ಟ್‌ ಮಾಡಿ, ಸಂದರ್ಶನ ಮಾಡಿ, ಅದರಲ್ಲಿ ನಾಲ್ಕೈದು ಜನರನ್ನು ಮಾತ್ರ ಆಯ್ಕೆ ಮಾಡಲಾಗುತ್ತದಂತೆ. ಎಲ್ಲಾ ವಯೋಮಾನದ, ವಯಸ್ಸಿನ, ಸಂಸ್ಕೃತಿಯ ಸ್ಪರ್ಧಿಗಳೂ ಇಲ್ಲಿರುತ್ತಾರಂತೆ. ಇನ್ನು ಈ ಬಾರಿ ಮನೆಯನ್ನು ಮರುನವೀಕರಣಗೊಳಿಸಲಾಗಿದೆ. ಮನೆಯ ಇಂಟೀರಿಯರ್‌ ಡಿಸೈನ್‌ ಬದಲಾಗುತ್ತಿದೆ. ಈಗಾಗಲೇ ಅದರ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

ಈ ಬಾರಿಯ ವಿಶೇಷತೆಗಳು 
ಚಾನಲ್‌: ಕಲರ್ಸ್‌  ಸೂಪರ್‌
ಸಮಯ: 8-9
ಸ್ಪರ್ಧಿಗಳು: ಸೆಲೆಬ್ರಿಟಿಗಳು ಮತ್ತು ಜನ ಸಾಮಾನ್ಯರು

Advertisement

Udayavani is now on Telegram. Click here to join our channel and stay updated with the latest news.

Next