Advertisement
1. ಬೆಂಡೆಕಾಯಿ ಪಕೋಡಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಬೆಂಡೆಕಾಯಿ, ಕರಿಯಲು ಎಣ್ಣೆ, ಕಡಲೆ ಹಿಟ್ಟು-1 ಕಪ್, ಚಿಟಿಕೆ ಅಡಿಗೆ ಸೋಡಾ, ಅಚ್ಚ ಖಾರದ ಪುಡಿ- 2 ಚಮಚ, ಸಾಜೀರಾ, ಉಪ್ಪು, ಕರಿಬೇವು.
ಬೇಕಾಗುವ ಸಾಮಗ್ರಿ: ಸಣ್ಣಗೆ ವೃತ್ತಾಕಾರದಲ್ಲಿ ಹೆಚ್ಚಿಕೊಂಡ ಹೀರೆಕಾಯಿ- 1 ಬಟ್ಟಲು, ಕಡಲೆಹಿಟ್ಟು- ಒಂದೂವರೆ ಬಟ್ಟಲು, ಕರಿಯಲು ಎಣ್ಣೆ, 1 ಚವåಚ ಜೀರಿಗೆ, 2 ಚಮಚ ಅಚ್ಚ ಖಾರದ ಪುಡಿ, ಉಪ್ಪು, ಒಂದು ಲೋಟ ನೀರು, ಚಿಟಿಕೆ ಅಡುಗೆ ಸೋಡ.
Related Articles
Advertisement
3. ಅನ್ನದ ಗಂಜಿ ಹಲ್ವಬೇಕಾಗುವ ಸಾಮಗ್ರಿ: 2 ಬಟ್ಟಲು ಅನ್ನದ ಗಂಜಿ, ಒಂದು ಬಟ್ಟಲು ಅಕ್ಕಿ ಹಿಟ್ಟು, ಅರ್ಧ ಚಮಚ ಏಲಕ್ಕಿ ಪುಡಿ, ಒಂದು ಬಟ್ಟಲು ಸಕ್ಕರೆ, 2-4 ಚಮಚ ತುಪ್ಪ. ಮಾಡುವ ವಿಧಾನ: ಗಂಜಿಗೆ ಅಕ್ಕಿ ಹಿಟ್ಟು ಬೆರೆಸಿ ಚೆನ್ನಾಗಿ ಗಂಟಿಲ್ಲದಂತೆ ಮಿಶ್ರಣ ಮಾಡಿ, ಬಾಣಲೆಗೆ ಹಾಕಿ ತಳ ಬಿಡದಂತೆ ಕುದಿಸಬೇಕು. ಮಿಶ್ರಣ ಗಟ್ಟಿಯಾದ ನಂತರ ಸಕ್ಕರೆ ಹಾಕಿ ಕರಗುವವರೆಗೂ ಕೈಯಾಡಿಸುತ್ತಿರಿ. ಸಕ್ಕರೆ ಕರಗಿದ ಮೇಲೆ ತುಪ್ಪ ಹಾಕಿ ತಳಬಿಡುವವರೆಗೂ ಕುದಿಸಿ, ಏಲಕ್ಕಿ ಪುಡಿ ಹಾಕಿ ಒಲೆಯಿಂದ ಕೆಳಗಿಳಿಸಿ. ಒಂದು ಪ್ಲೇಟ್‌ಗೆ ತುಪ್ಪ ಸವರಿ ಮಿಶ್ರಣವನ್ನು ಅದಕ್ಕೆ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಒಂದೆರಡು ಗಂಟೆ ಹೀಗೇ ಬಿಟ್ಟರೆ, ಹಲ್ವ ತಿನ್ನಲು ಸಿದ್ಧ. 4. ಸ್ವೀಟ್ ಬ್ರೆಡ್ ರೋಸ್ಟ್
ಬೇಕಾಗುವ ಸಾಮಗ್ರಿ: ಕತ್ತರಿಸಿಟ್ಟ ಬ್ರೆಡ್ ತುಂಡು-6, ಅರ್ಧ ಬಟ್ಟಲು ಸಕ್ಕರೆ, 2 ಚಮಚ ತುಪ್ಪ, ಕರಿಯಲು ಎಣ್ಣೆ, ಅರ್ಧ ಚಮಚ ಏಲಕ್ಕಿ ಪುಡಿ, ಅರ್ಧ ಬಟ್ಟಲು ನೀರು. ಮಾಡುವ ವಿಧಾನ: ಬ್ರೆಡ್ ಅಂಚನ್ನು ತೆಗೆದು ತ್ರಿಭುಜಾಕೃತಿಯಲ್ಲಿ ಕತ್ತರಿಸಿಟ್ಟುಕೊಳ್ಳಿ. ನಂತರ, ಬ್ರೆಡ್ ತುಂಡುಗಳನ್ನು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಒಂದು ಪಾತ್ರೆಗೆ ಸಕ್ಕರೆ, ನೀರು ಹಾಕಿ ತೆಳು ಪಾಕ ತಯಾರಿಸಿ. ಆ ಪಾಕಕ್ಕೆ ಏಲಕ್ಕಿ ಪುಡಿ ಹಾಕಿ, ಒಲೆಯಿಂದ ಕೆಳಗಿಳಿಸಿ ಬ್ರೆಡ್ ತುಂಡುಗಳನ್ನು 15-20 ನಿಮಿಷ ಅದರಲ್ಲಿ ಅದ್ದಿ ಇಡಿ. – ಭಾಗ್ಯ ಆರ್.ಗುರುಕುಮಾರ್