Advertisement

ಜಾರಿ ಬಿದ್ದು ಸುದರ್ಶನ್ ಕಾಲಿಗೆ ಪೆಟ್ಟು

10:38 AM Sep 06, 2017 | Team Udayavani |

ಹಿರಿಯ ಕಲಾವಿದ ಸುದರ್ಶನ್‌ ಅವರು ಕಾಲು ಜಾರಿ ಬಿದ್ದ ಪರಿಣಾಮ, ಅವರ ಕಾಲಿನ ಮೂಳೆ ಮುರಿದಿದೆ. ಸೋಮವಾರ ರಾತ್ರಿ ಮಲಗಿದ್ದ ಸುದರ್ಶನ್‌ ಅವರು ಮಧ್ಯರಾತ್ರಿಯಲ್ಲಿ ಶೌಚಾಲಯಕ್ಕೆ ತೆರಳಿದ್ದಾಗ, ಜಾರಿ ಬಿದ್ದಿದ್ದಾರೆ. ಈ ಘಟನೆಯಿಂದಾಗಿ ಅವರ ಕಾಲಿನ ಮೂಳೆ ಮುರಿದಿದೆ. ಇದರಿಂದ ತೀವ್ರ ರಕ್ತಸ್ರಾವ ಕೂಡ ಆಗಿದ್ದು, ಅವರನ್ನು ತಕ್ಷಣವೇ ಬನ್ನೇರುಘಟ್ಟ ಬಳಿ ಇರುವ ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮುರಿತಕ್ಕೊಳಗಾದ ಕಾಲನ್ನು ಪರೀಕ್ಷಿಸಿದ ವೈದ್ಯರು, ಸುದರ್ಶನ್‌ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಹೇಳಿದ್ದಾರೆ. ಡಾ.ಶರತ್‌ ಅವರು ಸುದರ್ಶನ್‌ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಶೈಲಜಾ ಸುದರ್ಶನ್‌ ಅವರು, “ನಿನ್ನೆ ತಡರಾತ್ರಿ ಜಾರಿ ಬಿದ್ದ ಪರಿಣಾಮ ಈ ಘಟನೆ ನಡೆದಿದ್ದು, ವೈದ್ಯರು ಚಿಕಿತ್ಸೆಗೆ ಸೂಚಿಸಿದ್ದಾರೆ. ಯಾರೂ ಕೂಡ ಭಯಪಡುವಂತಹ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಸುದರ್ಶನ್‌ ಅವರು “ವಿಜಯನಗರ ವೀರಪುತ್ರ’ ಚಿತ್ರದ ಮೂಲಕ ನಾಯಕರಾಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. ಅವರ ತಂದೆ ನಾಗೇಂದ್ರರಾವ್‌ ಅವರು ಆ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಸುದರ್ಶನ್‌ ಸಹೋದರರಾದ ಆರ್‌.ಎನ್‌.ಜಯಗೋಪಾಲ್‌ ಗೀತೆಗಳನ್ನು ರಚಿಸಿದ್ದರೆ, ಕೃಷ್ಣಪ್ರಸಾದ್‌ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು. ಈ ಸಿನಿಮಾದ ಹಾಡು “ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು..’ ಈ ಹಾಡು ಆಗಿನ ಕಾಲಕ್ಕಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸೂಪರ್‌ ಹಿಟ್‌ ಹಾಡುಗಳ ಪಟ್ಟಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next