Advertisement

ಖಡ್ಗಮೃಗಕ್ಕೆ ದಯಾಮರಣ

07:00 AM Mar 21, 2018 | Team Udayavani |

ಲೈಕಿಪಿಯ(ಕೀನ್ಯ): ಜಗತ್ತಿನ ಏಕೈಕ ಗಂಡು ಖಡ್ಗಮೃಗ “ಸುಡಾನ್‌’ಗೆ ಗೌರವಯುತ  ವಾದ ಮರಣ ಪಡೆಯಲು ಅದನ್ನೇ ಪ್ರಯೋ ಗಿ ಸಲಾಗಿದೆ. ಕೀನ್ಯಾದ ಓಲ್‌ ಪೆತೇಜಾ ತಳಿ ಸಂರಕ್ಷಣಾ ಕೇಂದ್ರದಲ್ಲಿದ್ದ 45 ವರ್ಷದ ಬಿಳಿ ಬಣ್ಣದ ಖಡ್ಗಮೃಗಕ್ಕೆ ವಯೋಸಹಜ ಕಾರಣಗಳಿಂದ ಎದ್ದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಕೊನೆಯ ದಿನಗಳಲ್ಲಿ ಅದರ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಕೇಂದ್ರ ಹೇಳಿದೆ. ಹಿಂದಿನ ಎರಡು ಕಾಲುಗಳ ಪೈಕಿ ಒಂದರಲ್ಲಿ ಸೋಂಕು ಕೂಡ ಉಂಟಾಗಿತ್ತು. 

Advertisement

ಈ ಖಡ್ಗಮೃಗದ ಮೂಲಕ ಅಳಿವಿನ ಅಂಚಿನಲ್ಲಿರುವ ತಳಿಗಳ ರಕ್ಷಣೆಗೆ ಪ್ರಚಾರಾಂದೋಲನಕ್ಕೆ ಬಳಸಲಾಗಿತ್ತು. ಹೀಗಾಗಿಯೇ ಅದೇ ತಳಿಯ ಎರಡು ಖಡ್ಗಮೃಗಗಳು ಬದುಕಿ ಉಳಿಯುವಂತಾಗಿದೆ. ಈ ಪೈಕಿ ಒಂದು ಅದಕ್ಕೇ ಜನಿಸಿದ್ದಾಗಿದೆ. 2009ರಲ್ಲಿ “ಸುಡಾನ್‌’ ಖಡ್ಗಮೃಗವನ್ನು ಇತರ ಮೂರರ ಜತೆಗೆ ಕೀನ್ಯಾಕ್ಕೆ ತರಲಾಗಿತ್ತು. 

ಆಫ್ರಿಕಾದಲ್ಲಿ ಸುಮಾರು 20 ಸಾವಿರದಷ್ಟು ಸದರ್ನ್ ಬಿಳಿ ತಳಿಯ ಖಡ್ಗಮೃಗಗಳು ಇದ್ದವು. ಮಾನವ ದಾಳಿಯಿಂದಾಗಿ ಅವುಗಳ ಸಂಖ್ಯೆ 100ಕ್ಕೆ ಇಳಿಕೆಯಾಗಿತ್ತು. ದಕ್ಷಿಣ ಆಫ್ರಿಕದ ವನ್ಯಜೀವಿಗಳ ಶ್ರಮದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಅವುಗಳ ಸಂಖ್ಯೆ ಏರಿಕೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next