Advertisement

Sudan; ಸೇನಾ ಸಂಘರ್ಷ: ಮುಂದುವರಿದ ಘರ್ಷಣೆ, ಮೃತರ ಸಂಖ್ಯೆ 97ಕ್ಕೆ ಏರಿಕೆ

08:38 PM Apr 17, 2023 | Team Udayavani |

ಖಾರ್ತೂಮ್‌: ಸುಡಾನ್‌ನಲ್ಲಿ ನಡೆಯುತ್ತಿರುವ ಸೇನೆ ಹಾಗೂ ಅರಸೇನಾ ಪಡೆಗಳ ನಡುವಿನ ಕಾದಾಟ ಸತತ ಮೂರನೇ ದಿನವೂ ತಾರಕಕ್ಕೇರಿದ್ದು, ಸಂಘರ್ಷದಲ್ಲಿ ಸಾವನ್ನಪ್ಪಿರುವ ನಾಗರಿಕರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ.

Advertisement

ರಾಜಧಾನಿ ಖಾರ್ತೂಮ್‌ ಪಕ್ಕದ ಓಮ್‌ದುರ್‌ಮನ್‌ನ ಕೆಲ ಭಾಗದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಗುಂಡಿನದಾಳಿ ಜತೆಗೆ ವೈಮಾನಿಕ ದಾಳಿಯನ್ನೂ ನಡೆಸಲಾಗುತ್ತಿದೆ.

ಸೇನಾ ಪ್ರಧಾನ ಕಚೇರಿ ಬಳಿ ಗುಂಡಿನ ಮಳೆಗರೆಯುತ್ತಿರುವ ಸದ್ದು ತೀವ್ರವಾಗಿದ್ದು, ಪ್ರದೇಶದ ಸಮೀಪದಲ್ಲಿರುವ ನಿವಾಸಗಳಲ್ಲಿ ವಿದ್ಯುತ್‌ ಕಡಿತಗೊಳಿಸಲಾಗಿದೆ.

ಇದೇ ವೇಳೆ, ಪುಂಡರು ಮನೆಗಳನ್ನೂ ಲೂಟಿ ಮಾಡುತ್ತಿರುವ ಘಟನೆಗಳು ವರದಿಯಾಗಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next