Advertisement
ವಿಧಾನಸಭಾ ಚುನಾವಣೆಯಲ್ಲಿ ಒಂದು ಪಕ್ಷದ ಅಭ್ಯರ್ಥಿ ಒಂದು ಬಾರಿ ಗೆದ್ದರೆ ಮತ್ತೂಂದು ಬಾರಿ ಗೆದ್ದ ಉದಾಹರಣೆಗಳು ತಾಲೂಕಿನಲ್ಲಿ ಇರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ನಿಸರ್ಗ ಎಲ್.ಎನ್. ನಾರಾಯಣಸ್ವಾಮಿ ಆಯ್ಕೆಯಾಗುವುದರ ಮೂಲಕ ಜೆಡಿಎಸ್ ಹೊಸ ಇತಿಹಾಸ ಬರೆದಿದೆ. ತಾಲೂಕಿನಲ್ಲಿ ಮತ್ತೂಂದು ಇತಿಹಾಸ ಇರುವುದು ಹೊರಗಿನ ವ್ಯಕ್ತಿಗಳು ಇಲ್ಲಿ ಗೆದ್ದಿರುವ ನಿದರ್ಶನಗಳು ಇರಲಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟಸ್ವಾಮಿ ವಿರುದ್ಧ ನಿಸರ್ಗ ನಾರಾಯಣಸ್ವಾಮಿ 17,010 ಮತಗಳ ಅಂತರದಿಂದ ಗೆಲುವು ಸಾಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿ ದ್ದಾರೆ. ಕಳೆದ 2013ರ ಚುನಾವಣೆಯಲ್ಲಿ ಶಾಸಕರಾಗಿದ್ದ ಪಿಳ್ಳಮುನಿಶಾಮಪ್ಪ70,323 ಗಳಿಸಿ ಅವರ ಪ್ರತಿಸ್ಪರ್ಧಿ ಕೆ.ವೆಂಕಟಸ್ವಾಮಿ 68,381 ಮತಗಳನ್ನು ಪಡೆದಿದ್ದರು. 1,944 ಮತಗಳ ಅಂತರದಿಂದ ಸೋಲು ಕಂಡಿದ್ದರು.
Related Articles
Advertisement
ಸೋಲುಸುತ್ತೇವೆಂದು ಹೇಳಿದ್ದರು: ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರ ವಿರೋಧದ ನಡುವೆಯೂ ಸಂಸದ ವೀರಪ್ಪಮೊಯ್ಲಿ ಪಟ್ಟು ಹಿಡಿದು ವೆಂಕಟಸ್ವಾಮಿ ಅವರಿಗೆ ಟಿಕೆಟ್ ಕೊಡಿಸಿದ್ದರು. ಕಾಂಗ್ರೆಸ್‌ನ ಕೆಲವು ಮುಖಂಡರು ಟಿಕೆಟ್ ನೀಡಿದ್ದಕ್ಕೆ ವಿರೋಧಿಸಿ ಪ್ರತಿಭಟನೆ ಮಾಡಿದ್ದರು. ವೆಂಕಟ ಸ್ವಾಮಿಗೆ ಟಿಕೆಟ್ ನೀಡಿರುವುದು ಸರಿಯಾಗಿದೆ ಎಂದು ಇನ್ನು ಕೆಲವು ಮುಖಂಡರು ಪರ ಪ್ರತಿಭಟನೆ ನಡೆಸಿದರು. ಕೆಲವು ಕಾಂಗ್ರೆಸ್ ಮುಖಂಡರು ನೇರವಾಗಿ ನಾವು ವೆಂಕಟ ಸ್ವಾಮಿಯವರನ್ನು ಸೋಲಿಸುತ್ತೇವೆ ಎನ್ನುವ ಹೇಳಿಕೆಗಳನ್ನು ಬಹಿರಂಗವಾಗಿ ಹೇಳಿದ್ದರು.
ಇತಿಹಾಸ: ದೇವನಹಳ್ಳಿ ಇತಿಹಾಸದಲ್ಲಿ ಮೊದಲ ಬಾರಿಗೆ ನಿಸರ್ಗ ನಾರಾಯಣಸ್ವಾಮಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲು ಹತ್ತುತ್ತಿದ್ದಾರೆ. ಕಳೆದ ವರ್ಷ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. ಶಾಸಕ ಪಿಳ್ಳಮುನಿ ಶಾಮಪ್ಪ2013ರಲ್ಲಿ ಆಯ್ಕೆಯಾಗಿದ್ದರು. ಮತ ಎಣಿಕೆ ಪ್ರಾರಂಭದಲ್ಲಿ ವೆಂಕಟಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದರು. ನಂತರದ ಸುತ್ತುಗಳಲ್ಲಿ ನಿಸರ್ಗ ನಾರಾಯಣಸ್ವಾಮಿ ಹೆಚ್ಚು ಮತ ಪಡೆಯುತ್ತಿದ್ದರು. 9ನೇ ಸುತ್ತಿನಲ್ಲಿ 12,265 ಮತಗಳನ್ನು ಪಡೆದು ಮುಂದೆ ಇದ್ದರು. 10ನೇ ಸುತ್ತಿನಲ್ಲಿ 11,824 ಹಾಗೂ 11ನೇ ಸುತ್ತಿನಲ್ಲಿ 14,066ಮತಗಳ ಮುನ್ನಡೆಯಲ್ಲಿದ್ದರು. ಕಡೆಯ ಸುತ್ತಿನಲ್ಲಿ ಒಟ್ಟಾರೆ ಫಲಿತಾಂಶದಲ್ಲಿ 17,010 ಮತಗಳ ಅಂತರ ದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟಸ್ವಾಮಿ ಯವರನ್ನು ಸೋಲಿಸಿ ಗೆಲುವು ಸಾಧಿಸಿದರು.
ಶಾಪ ವಿಮೋಚನೆದೇವನಹಳ್ಳಿ ಮೀಸಲು ಕ್ಷೇತ್ರವಾಗಿರುವುದರಿಂದ ಒಂದು ಬಾರಿ ಗೆದ್ದ ಪಕ್ಷ ಮತ್ತೂಂದು ಬಾರಿ ಗೆಲ್ಲುವ ಉದಾಹರಣೆಗಳು ಇರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನ ಅಭ್ಯರ್ಥಿ ನಿಸರ್ಗ ಎಲ್.ಎನ್. ನಾರಾಯಣಸ್ವಾಮಿ ಹೆಚ್ಚು ಮತಗಳನ್ನು ಪಡೆಯುವುದರ ಮೂಲಕ ಗೆಲುವು ಸಾಧಿಸಿದ್ದಾರೆ. ಒಂದು ಬಾರಿ ಗೆದ್ದ ಪಕ್ಷ ಮೊತ್ತೂಂದು ಬಾರಿ ಗೆಲ್ಲುವುದಿಲ್ಲವೆಂಬ ಮೂಢನಂಬಿಕೆ ಸುಳ್ಳು ಮಾಡಿದ್ದಾರೆ.