Advertisement
ಅಸ್ಸಾಂ ಮೂಲದ 54 ವರ್ಷದ ವ್ಯಕ್ತಿಗೆ ನಾರಾಯಣ ಹೆಲ್ತ್ ಸಿಟಿಯ ಹೃದ್ರೋಗ ವಿಭಾಗದ ಮಿತ್ರಾಕ್ಲಿಪ್ ಪ್ರಕ್ರಿಯೆನ್ನು ಯಶಸ್ವಿಯಾಗಿ ಬಳಕೆ ಮಾಡಿದೆ. ಕಳೆದ ಮೂರು ತಿಂಗಳ ಹಿಂದೆ ರೋಗಿಯು ಸಾಮಾನ್ಯರ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದ. ಆಗ ಅವರಿಗೆ ಉಸಿರಾಟದ ತೊಂದರೆ ಅನುಭವ ಆಗತೊಡಗಿತು. ಅತಿ ಬೇಗನೆ ಆಯಾಸವಾಗುವುದರ ಜತೆಗೆ ಹೆಜ್ಜೆ ಹಾಕಲು ಕೂಡ ಕಷ್ಟವಾಗುತ್ತಿತ್ತು.
Related Articles
Advertisement
ಆಸ್ಪತ್ರೆಯ ಹಿರಿಯ ಹೃದ್ರೋಗ ಸಲಹಾ ತಜ್ಞರ ತಂಡದ ಡಾ.ಉದಯ್ ಬಿ ಖಾನೋಲ್ಕರ್, ಹಿರಿಯ ಸಲಹೆಗಾರ ಡಾ.ಭಗೀರಥ್ ರಘುರಾಮನ್, ಡಾ.ಸಂಜಯ್ ಮೆಹ್ರೋತ್ರ ತಂಡ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಉದಯ್ ಬಿ ಖಾನೋಲ್ಕರ್, ಈ ರೋಗಿಯ ಪ್ರಕರಣ ಭಿನ್ನವಾಗಿದೆ.
ಕರ್ನಾಟಕದಲ್ಲಿ ಈ ಪ್ರಕ್ರಿಯೆಗೆ ಒಳಗಾದ ಮೊದಲ ರೋಗಿ ಎಂದು ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಈ ವೇಳೆ ಸಂತಸ ಹಂಚಿಕೊಂಡ ಅಸ್ಸಾಂ ಮೂಲದ 54 ವರ್ಷದ ರೋಗಿ, ನಾನೀಗ ಕ್ರಿಯಾಶೀಲ ವ್ಯಕ್ತಿಯಾಗಿದ್ದೇನೆ. ಈ ಹಿಂದೆ ಉಸಿರಾಟದ ತೊಂದರೆ ಮತ್ತು ನಿದ್ರಿಗೆ ಅಡ್ಡಿ ಉಂಟಾಗಿತ್ತು. ಈಗ ಸಾಮಾನ್ಯ ಸ್ಥಿತಿಗೆ ಬಂದಿದ್ದು ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.