Advertisement

ಮಗುವಿನ ಹೃದಯ ರಂಧ್ರಕ್ಕೆ ಯಶಸ್ವಿ ಚಿಕಿತ್ಸೆ

04:23 PM Apr 08, 2021 | Team Udayavani |

ಬಾಗಲಕೋಟೆ : ನಗರದ ಬಿ.ವಿ.ವಿ ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಹೃದಯ ತಜ್ಞ ಡಾ| ಸಮೀರಕುಮಾರ ಕುಲಕರ್ಣಿ ಅವರು ನಾಲ್ಕು ವರ್ಷದ ಮಗುವಿನ ಹೃದಯ ರಂಧ್ರಕ್ಕೆ ಅತ್ಯಾಧುನಿಕ ಯಂತ್ರದ ಮೂಲಕ ಡಿವೈಸ್‌ ಅಳವಡಿಸಿ ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ.

Advertisement

ಕಳೆದ ಎರಡು ವರ್ಷಗಳಿಂದ ಪೆಟೆಂಟ್‌ ಡಕ್ಟಸ್‌ ಆರ್ಟೆರಿಯಸಸ್‌ (ಪಿಡಿಎ) ಕಾಯಿಲೆಯಿಂದ ಬಳಲುತ್ತಿದ್ದ ಬಾಗಲಕೋಟೆ ನಗರದ ನಾಲ್ಕು ವರ್ಷದ ಮಗುವಿನ ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿತ್ತು. ಹೃದಯದಲ್ಲಿನ ರಂಧ್ರದ ಪರಿಣಾಮ ಮಗುವಿನಲ್ಲಿ ಎದೆಬಡಿತ ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಂಡು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಹೃದಯರೋಗ ವಿಭಾಗದಲ್ಲಿ ದಾಖಲಿಸಲಾಗಿತ್ತು. ಆಸ್ಪತ್ರೆಯ ಹೃದಯ ತಜ್ಞರು ಮಗುವಿನ ಹೃದಯಲ್ಲಿನ ರಂಧ್ರವನ್ನು ತೆರೆದ ಹೃದಯದ ಶಸ್ತ್ರಚಿಕಿತ್ಸೆಯಿಲ್ಲದೆ ಅತ್ಯಾಧುನಿಕ ವಿಧಾನದ ಮೂಲಕ ಮುಚ್ಚುವ ಚಿಕಿತ್ಸೆ ನೀಡಿದರು.

ಈ ಅತ್ಯಾಧುನಿಕ ವಿಧಾನದಲ್ಲಿ ಡಿವೈಸನ್ನು ತಂತಿಯ ಸಹಾಯದಿಂದ ಹೃದಯದ ಹತ್ತಿರ ಕೊಂಡೊಯ್ದು ರಂಧ್ರದ ಸ್ಥಳದಲ್ಲಿ ಅಳವಡಿಸಲಾಯಿತು. ಈ ವಿಧಾನವು ಅತ್ಯಂತ ಕ್ಲಿಷ್ಟಕರ ವಿಧಾನವಾಗಿದೆ. ಈ ಚಿಕಿತ್ಸೆಯಿಂದ ರೋಗಿಯ ಎದೆಯ ಮೇಲೆ ಯಾವುದೇ ಗಾಯದ ಗುರುತುಗಳಿರುವುದಿಲ್ಲ. ಈ ಚಿಕಿತ್ಸೆಯನ್ನು ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯ ಆಯುಷ್ಮಾನ ಭಾರತ ಯೋಜನೆಯಡಿ ನೀಡಲಾಗಿದೆ.

ಚಿಕಿತ್ಸೆಯ ನಂತರ ಮಗು ಸಂಪೂರ್ಣ ಗುಣಮುಖನಾಗಿದ್ದು ಆಸ್ಪತ್ರೆಯಿಂದ ಕೇವಲ ಎರಡು ದಿನಗಳಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಡಾ|ಸಮೀರಕುಮಾರ ಕುಲಕರ್ಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next