ಬೆಂಗಳೂರು: ರಕ್ತದ ಕ್ಯಾನ್ಸರ್(ಎಎಂಎಲ್), ಹೃದ್ರೋಗ ಸಮಸ್ಯೆಯಿಂದ ನರಳುತ್ತಿದ್ದ ರೋಗಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ಗುಣಪಡಿಸಲಾಗಿದೆ ಎಂದ ನಾರಾಯಣ ಹೆಲ್ತ್ ಹಾಸ್ಪಿಟಲ್‌ನ ಅಸ್ಥಿಮಜ್ಜೆ ಕಸಿ ಘಟಕದ ಮುಖ್ಯಸ್ಥ ಡಾ.ಶರತ್ ದಾಮೋದರ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ತದ ಕ್ಯಾನ್ಸರ್ (ಅಕ್ಯೂಟ್ ಮೇಲ್ಯಾಡ್ ಲ್ಯುಕೆಮಿಯಾ) ಮತ್ತು ಹೃದ್ರೋಗ ಸಮಸ್ಯೆ (ಟ್ರಿಪಲ್ ವೆಸೆಲ್ ಕರೊನರಿ ಆರ್ಟಿರಿ ಡಿಸೀಸ್-ಟಿವಿಸಿಎಡಿ)ಯಿಂದ ಬಳಲುತ್ತಿದ್ದ ನರೇಶ್ ಬಾಲಾ ಎಂಬ ರೋಗಿಗೆ ಅಸ್ಥಿಮಜ್ಜೆ ಕಸಿ (ಬಿಎಂಟಿ) ಚಿಕಿತ್ಸೆ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ನಾರಾಯಣ ಹೆಲ್ತ್ ಹಾಸ್ಪಿಟಲ್‌ಗೆ ಸಲ್ಲುತ್ತದೆ ಎಂದರು.
2012ರಲ್ಲಿ ನರೇಶ್‌ಬಾಲಾ ತಪಾಸಣೆಗೆ ಒಳಪಟ್ಟಾಗ ಎಎಂಎಲ್ ಇರುವುದು ಪತ್ತೆ ಮಾಡಲಾಗಿತ್ತು. ವೈದ್ಯರ ತಂಡ ಕಿಮೊಥೆರಪಿ ಜತೆಗೆ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಕೂಡ ನೀಡಿದ್ದು, ಕ್ರಮೇಣ ರೋಗಿ ಗುಣಮುಖರಾಗಿದ್ದರು. ಆದರೆ, ರಕ್ತದ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದ ನರೇಶ್‌ಬಾಲಾ 2-3 ವರ್ಷಗಳಲ್ಲಿ ಹೃದಯ ವೈಫಲ್ಯದ ಸಮಸ್ಯೆಗೆ ತುತ್ತಾಗಿದ್ದರು.
ರೋಗನಿರೋಧಕ ಔಷಧಿಗಳನ್ನು ನೀಡಲಾಗಿದ್ದು, ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗಿತ್ತು. ರೋಗ ಇನ್ನಷ್ಟು ವಿಷಮಗೊಳ್ಳಲು ಆರಂಭಿಸಿತ್ತು. ಇದರಿಂದಾಗಿ ಅವರಿಗೆ ಬೈಪಾಸ್ ಶಸ್ತ್ರಚಿಕಿತ್ಸೆ ನೆರವೇರಿಸಬೇಕಾಯಿತು. ರಕ್ತದ ಕ್ಯಾನ್ಸರ್ ಮತ್ತು ಟಿವಿಸಿಎಡಿ ಒಂದೇ ಬಾರಿಗೆ ಆವರಿಸಿಕೊಳ್ಳುವುದು ಗಂಭೀರ ಸ್ವರೂಪದ ಪರಿಸ್ಥಿತಿ. ಅಸ್ಥಿಮಜ್ಜೆ ಚಿಕಿತ್ಸೆಗೆ ಹೆಚ್ಚಿನ ಕಾಳಜಿ ಅಗತ್ಯ. ಜತೆಗೆ ಹೃದಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಆಗದಂತೆ ಎಚ್ಚರಬಹಿಸಬೇಕಾಗುತ್ತದೆ.
ಸಿಎಬಿಜಿ ಹೆಚ್ಚಿನ ಸೋಂಕು ಆಗಲು ಇದಕ್ಕೆ ಅವರು ತೆಗೆದುಕೊಳ್ಳುತ್ತಿದ್ದ ರೋಗ ನಿರೋಧಕ ಔಷಧವೂ ಕಾರಣವಾಗಿತ್ತು. ಎರಡೂ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದ್ದು, ಸ್ವಲ್ಪ ಏರುಪೇರಾದೂ ಸಾವು ಸಂಭವಿಸುವ ಅಪಾಯವಿತ್ತು. ನಾರಾಯಣ ಹೆಲ್ತ್ ಹಾಸ್ಪಿಟಲ್ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ಮುಗಿಸಿದ್ದು, ರೋಗಿ ನರೇಶಬಾಲಾ ಜೀವ ಉಳಿಸಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು
ರಕ್ತ ಕ್ಯಾನ್ಸರ್ ಚಿಕಿತ್ಸೆ ಜತೆಗೆ ಟಿವಿಸಿಎಡಿಗೂ ಚಿಕಿತ್ಸೆ ನೀಡಿದ್ದೇವೆ. ರೋಗಿ ಈಗ ಗುಣಮುಖರಾಗಿದ್ದು, ಕಳೆದ ಐದು ವರ್ಷದಿಂದ ಸಹಜ ಬದುಕು ಸಾಗಿಸುತ್ತಿದ್ದಾರೆ.
-ಡಾ.ಶರತ್ ದಾಮೋದರ್, ಮುಖ್ಯಸ್ಥ, ಅಸ್ಥಿಮಜ್ಜೆ ಕಸಿ ಘಟಕ, ನಾರಾಯಣ ಹೆಲ್ತ್ ಹಾಸ್ಪಿಟಲ್.
ನಾನು ರೋಗದಿಂದ ಗುಣಮುಖನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಇದು ನನ್ನ ಅದೃಷ್ಟವೆಂದೇ ಹೇಳಬಹುದು. ರಕ್ತ, ಹೃದ್ರೋಗ, ಮೂತ್ರಪಿಂಡ, ಯಕೃತ್ತು ಸಂಬಂಧಿತ ಸಮಸ್ಯೆಗಳಿದ್ದವು. ನಾರಾಯಣ ಹೆಲ್ತ್‌ನ ವಿವಿಧ ವಿಭಾಗಗಳ ವೈದ್ಯರು ಪರಸ್ಪರ ಹೊಂದಾಣಿಕೆಯಿಂದ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ್ದು, ನಾನು ಅವರಿಗೆ ಅಭಾರಿಯಾಗಿದ್ದೇನೆ.
-ನರೇಶ್‌ಬಾಲಾ, ರೋಗಮುಕ್ತವಾದವರು.