ಬೆಂಗಳೂರು: ಮೂತ್ರಕೋಶವಿಲ್ಲದೆ ಜನಿಸಿದ ಸುಡಾನ್‌ನ ಏಳು ತಿಂಗಳ ಹೆಣ್ಣು ಮಗುವಿಗೆ ನಗರದ ರೈನ್‌ಬೋ ಮಕ್ಕಳ ಆಸ್ಪತ್ರೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಆಸ್ಪಧಿತ್ರೆಯ ಡಾ.ಆಂಟೋನಿ ರಾಬರ್ಟ್ ಚಾರ್ಲ್ಸ್, ಚಿಕಿತ್ಸೆಗೆ ದಾಖಲಾಗಿದ್ದ ಮಗುವಿಗೆ ಮೂತ್ರಕೋಶವೇ ಇರಲಿಲ್ಲ.
ಹೀಗಾಗಿ ಮೂತ್ರಕೋಶದಿಂದ ಮೂತ್ರ ನಿರಂತರವಾಗಿ ಸುರಿಧಿಯುತ್ತಲೇ ಇತ್ತು. ಅಲ್ಲದೇ ವಸ್ತಿಕುಹರದ ಮೂಳೆಧಿಗಳು ಅಗಲವಾಗಿ ಪ್ರತ್ಯೇಕವಾಗಿದ್ದರಿಂದ ಜನಧಿನಾಂಗ ಸ್ಥಳ ಬದಲಾವಣೆಗೊಂಡಿತ್ತು ( “ಬ್ಲಾಡರ್ ಎಕ್ಸ್‌ಸ್‌ಟ್ರೊಫಿ’) ಎಂದು ತಿಳಿಸಿದರು.
“ಬ್ಲಾಡರ್ ಎಕ್ಸ್‌ಸ್‌ಟ್ರೊಫಿ’ ಅಪರೂಪದ ಪ್ರಕರಣವಾಗಿದ್ದು, 20,000 ಗಂಡು ಮಕ್ಕಳಲ್ಲಿ ಒಂದು ಮಗುವಿಗೆ ಮತ್ತು 50,000 ಹೆಣ್ಣುಮಕ್ಕಳಲ್ಲಿ ಒಂದು ಮಗುವಿಗೆ ಕಾಣಿಸಿಕೊಳ್ಳುತ್ತದೆ. ಏಳು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆಯನ್ನು ಎರಡು ಹಂತಗಳಲ್ಲಿ ನಡೆಸಲಾಯಿತು. ಯಶಸ್ವಿ ಶಸ್ತ್ರಚಿಕಿತ್ಸೆ ನಡೆದು ಎರಡು ವಾರಗಳಾಗಿದ್ದು, ಮಗು ಆರೋಗ್ಯವಾಗಿದೆ ಎಂದು ಹೇಳಿದರು.