ಜಮಖಂಡಿ: ಪರಿಪೂರ್ಣ ಶಿಕ್ಷಣದಿಂದ ಜೀವನ ಯಶಸ್ವಿಯಾಗಲು ಸಾಧ್ಯ ಎಂಬುದನ್ನು ಸಾಧಿಸಿದ ಡಾ. ಬಿ.ಆರ್. ಅಂಬೇಡ್ಕರ್ ಜೀವನ ಜೀವಂತ ಸಾಕ್ಷಿಯಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಕಲ್ಯಾಣ ನಗರದಲ್ಲಿ ಸಂಗಮೇಶ ಆರ್ಟ್ ಗ್ಯಾಲರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 131ನೇ ಜಯಂತ್ಯುತ್ಸವ ನಿಮಿತ್ತ ಜೀವನ ಚರಿತ್ರೆ ಕುರಿತು ಶಿಕ್ಷಕ ಡಾಣ ಸಂಗಮೇಶ ಬಗಲಿ ರಚಿಸಿದ ಕಲಾಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಡಾ. ಅಂಬೇಡ್ಕರ್ ಶಿಕ್ಷಣಕ್ಕಾಗಿ ಅನುಭವಿಸಿದ ಶ್ರಮ, ಕಷ್ಟ ನೋವುಗಳ ಮಧ್ಯೆ ಅವರು ಬೆಳೆದು ಪ್ರತಿಯೊಬ್ಬ ನಾಗರಿಕನಿಗೆ ಮಾದರಿಯಾಗಿದ್ದಾರೆ. ಅವರು ನಡೆಸಿದ ಜೀವನ, ಹೋರಾಟಗಳು ನಮಗೆ ಸ್ಫೂರ್ತಿ. ಗ್ರಂಥಾಲಯಗಳಲ್ಲಿ ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನ ಜ್ಞಾಪಕ ಶಕ್ತಿ ಹೆಚ್ಚಾಗಲಿದೆ. ಡಾಣ ಅಂಬೇಡ್ಕರ್ ಜೀವನ ನಡೆದು ಬಂದ ದಾರಿ ಜನರಿಗೆ ಉತ್ತಮ ಸಂದೇಶವಾಗಿದೆ ಎಂದರು.
ಶಿಕ್ಷಕ ಡಾಣ ಸಂಗಮೇಶ ಬಗಲಿ ಮಾತನಾಡಿದರು. ಈ ವೇಳೆ ಉಪ ವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳಿ, ತಹಶೀಲ್ದಾರ್ ಪ್ರಶಾಂತ ಚನಗೊಂಡ, ತಾಪಂ ಅಧಿಕಾರಿ ಶ್ರವಣಕುಮಾರ ನಾಯಕ, ಬನಹಟ್ಟಿ ರಬಕವಿ ತಹಶೀಲ್ದಾರ್ ಸಂಜಯ ಇಂಗಳೆ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ. ಹೂಗಾರ, ಬಸವರಾಜ ಹರಕಂಗಿ, ಶ್ರೀಶೈಲ ಉಟಗಿ ಇದ್ದರು. ಶಿಕ್ಷಕ ಎಂ.ಎ. ತೇಲಿ ಸ್ವಾಗತಿಸಿ, ನಿರೂಪಿಸಿದರು. ಪ್ರಭಾವತಿ ಬಗಲಿ ವಂದಿಸಿದರು.