Advertisement
ವಿಪಕ್ಷ ನಾಯಕರಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉದಯವಾಣಿ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಹಿಂದೆಂದೂ ಅನುಭವಿಸದಂಥ ಸ್ಥಿತಿ ನಮ್ಮ ಹೋರಾಟದಿಂದ ನಿರ್ಮಾಣವಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ ಎನ್ನುತ್ತಿದ್ದ ಅವರ ವಿರುದ್ಧ ಈಗ ನ್ಯಾಯಾಲಯದ ಆದೇಶದ ಅನ್ವಯ 420 ಪ್ರಕರಣ ದಾಖಲಾಗಿದೆ. ನಮ್ಮ ಹೋರಾಟದ ಮೂಲಕ ಸಾರ್ವಜನಿಕ ವಲಯದಲ್ಲಿ ಸಿದ್ದರಾಮಯ್ಯ ಅವರನ್ನು 420 ಎಂದು ಬ್ರ್ಯಾಂಡ್ ಮಾಡಿದ್ದೇವೆ ಎಂದು ಹೇಳಿದರು.
Related Articles
ಬೆಳಗಾವಿ ಅಧಿವೇಶನದಲ್ಲೂ ನಾವು ಅತ್ಯಂತ ಪರಿಣಾಮಕಾರಿ ಹೋರಾಟ ನಡೆಸುತ್ತೇವೆ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಶಾಸಕರು ಹಾಗೂ ಜೆಡಿಎಸ್ ಶಾಸಕರ ಜತೆಗೆ ಸಭೆ ನಡೆಸಿ ತಂತ್ರಗಾರಿಕೆ ನಡೆಸುತ್ತೇವೆ. ಅಷ್ಟರೊಳಗೆ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವೂ ಪ್ರಕಟವಾಗಲಿದ್ದು, ಕಾಂಗ್ರೆಸ್ಗೆ ಹಿನ್ನಡೆ ನಿಶ್ಚಿತ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ವೇಳೆ ಹೊರಗೆ ಬಾರದ ಸಿದ್ದು
ಕೋವಿಡ್ ವಿಚಾರದಲ್ಲಿ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ನಾವು ಮುಡಾ ಹೋರಾಟ ನಡೆಸದೇ ಇದ್ದಿದ್ದರೆ ಕಾಂಗ್ರೆಸ್ನವರು ಈ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಸಿದ್ದರಾಮಯ್ಯ ಭಯಗೊಂಡು ಮನೆಯಿಂದಲೇ ಆಚೆ ಬಂದಿರಲಿಲ್ಲ. ಗೂಡು ಸೇರಿಕೊಂಡಿದ್ದರು ಎಂದು ಅಶೋಕ್ ಟೀಕಿಸಿದರು.
Advertisement
ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ರಾಜ್ಯದ ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದ ಡಿ.ಕೆ.ಸುರೇಶ್ ಅವರನ್ನು ಈ ಬಾರಿ ಸೋಲಿಸಿದ್ದೇ ಸಿದ್ದರಾಮಯ್ಯ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಸೋಲಿಗೆ ಸಿದ್ದರಾಮಯ್ಯನವರೇ ತಂತ್ರ ರೂಪಿಸಿದ್ದಾರೆ. ಜಮೀರ್ ಹೇಳಿಕೆಯ ಹಿಂದಿರುವುದು ಕೂಡ ಅವರೇ ಎಂದು ಅಶೋಕ್ ಆರೋಪಿಸಿದರು.
ಜೆಡಿಎಸ್, ನಮ್ಮ ಶಾಸಕರೊಂದಿಗೆ ಚರ್ಚೆವಕ್ಫ್ ಮಂಡಳಿ ನೋಟಿಸ್, ಅಬಕಾರಿ ಇಲಾಖೆಯಲ್ಲಿ ನಡೆದಿರುವ 700 ಕೋಟಿ ರೂ. ಹಗರಣ, ಬಿಪಿಎಲ್ ಕಾರ್ಡ್ಗಳ ರದ್ದತಿ, ಅಧಿಕಾರಿಗಳ ಸಾವು, ದೇಶದ್ರೋಹದ ಪ್ರಕರಣಗಳನ್ನು ಹಿಂಪಡೆದದ್ದು, ಗಣಪತಿ ಉತ್ಸವದ ವೇಳೆ ಗಲಭೆಗೆ ಅವಕಾಶ ಕೊಟ್ಟಿದ್ದು, ಸೇರಿದಂತೆ ಸಾಕಷ್ಟು ವಿಷಯಗಳನ್ನು ಸರಕಾರವೇ ನಮಗೆ ಹೋರಾಡಲು ಕೊಟ್ಟಿದೆ. ಬೆಳಗಾವಿ ಅಧಿವೇಶನದಲ್ಲಿ ನಮ್ಮ ತಂತ್ರಗಾರಿಕೆ ಏನಾಗಿರಬೇಕು ಎಂಬುದರ ಬಗ್ಗೆ ಜೆಡಿಎಸ್ ಜತೆಗೂ ಚರ್ಚಿಸುತ್ತೇವೆ. ನಮ್ಮ ಶಾಸಕರೊಂದಿಗೂ ಸಮಾಲೋಚನೆ ಮಾಡುತ್ತೇವೆ ಎಂದು ಹೇಳಿದರು. ಅಶೋಕ್ ಹೇಳಿದ್ದೇನು?
-ಸಿದ್ದರಾಮಯ್ಯ ಸತ್ಯವಂತರಾಗಿದ್ದರೆ ಮುಡಾ ಸೈಟ್ ವಾಪಸ್ ಮಾಡಿದ್ದೇಕೆ?
– ಸರಕಾರ ವಿರುದ್ಧ ವಿಪಕ್ಷವಾಗಿ ಹೋರಾಟದಲ್ಲಿ ಬಿಜೆಪಿ ಎಂದೂ ಹಿಂದೆ ಬಿದ್ದಿಲ್ಲ
– ಸರಕಾರದ ವಿರುದ್ಧ ಅಧಿವೇಶನದಲ್ಲಿ ಪರಿಣಾಮಕಾರಿ ಹೋರಾಟಕ್ಕೆ ಸಜ್ಜು ರಾಜ್ಯ ಬಿಜೆಪಿಯಲ್ಲಿ
ವ್ಯತ್ಯಾಸ ಇರುವುದು ನಿಜ
ಪಕ್ಷದೊಳಗೆ ಸಣ್ಣ-ಪುಟ್ಟ ಸಮಸ್ಯೆಗಳಿರುವುದು ನಿಜ ಎಂದು ಒಪ್ಪಿಕೊಂಡಿರುವ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಪಕ್ಷದಲ್ಲಿ ಇವೆಲ್ಲ ಸಹಜ. ಕೇಂದ್ರದ ವರಿಷ್ಠರ ಮಟ್ಟದಲ್ಲಿ ಈ ಅಧ್ಯಾಯವನ್ನು ಮುಗಿಸುತ್ತೇವೆ ಎನ್ನುವ ಮೂಲಕ ಪಕ್ಷದೊಳಗಿನ ಬಣ ರಾಜಕೀಯಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ ಎಂಬ ಸುಳಿವು ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳಿಂದ ಸಮಸ್ಯೆ ಆಗುತ್ತಿರುವುದು ನಿಜ. ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಸಹಜ. ಇದನ್ನೆಲ್ಲ ಬಗೆಹರಿಸಲು ಕೇಂದ್ರ ನಾಯಕರೊಂದಿಗೆ ಸಭೆ ನಡೆಸಿ, ಒಂದು ಪ್ರಯತ್ನ ಮಾಡಿರುವುದಂತೂ ನಿಜ ಎಂದರು. ನನ್ನದು ಬಿಜೆಪಿ ಬಣ
ನಾನು 40 ವರ್ಷಗಳ ಕಾಲ ಬಿಜೆಪಿಯನ್ನು ಬೆಂಗಳೂರಿನಲ್ಲಿ ಕಟ್ಟಿ ಬೆಳೆಸಿದ್ದೇನೆ. ಯಾವ ಬಣವೂ ಇಲ್ಲ. ನನ್ನದು ಬಿಜೆಪಿ ಬಣ ಅಷ್ಟೇ. ನನ್ನಂಥ ವರು ಬೇಕಾ ದಷ್ಟು ಮಂದಿ ಇದ್ದಾ ರೆ ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ಯಲ್ಲಾಪುರ ಶಾಸಕ ಶಿವರಾಂ ಹೆಬ್ಟಾರ್ ಕುರಿತ ಪ್ರಶ್ನೆಗೆ, ಅವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದಷ್ಟೇ ಹೇಳಿದರು. ಮೈತ್ರಿಯಿಂದ ಒಕ್ಕಲಿಗ ನ್ಯಾಯಕತ್ವಕ್ಕೆ ಧಕ್ಕೆ ಇಲ್ಲ
ನಮ್ಮ ಹಾಗೂ ಜೆಡಿಎಸ್ನ ಮೈತ್ರಿ ಸಹ ಚೆನ್ನಾಗಿ ಇದೆ. ಈ ಮೈತ್ರಿಯಿಂದ ಯಾವುದೇ ಧಕ್ಕೆ ಆಗಿಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಒಕ್ಕಲಿಗ ಬ್ರ್ಯಾಂಡ್. ನನಗೂ ಒಕ್ಕಲಿಗ ಜನಾಂಗದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಇದೆ. ಆದರೂ ಹಿಂದೂ ಬ್ರ್ಯಾಂಡ್ನಲ್ಲಿ ಇದ್ದೇವೆ. ಹೀಗಾಗಿ ಹಳೇ ಮೈಸೂರಿನ ಬಿಜೆಪಿ-ಜೆಡಿಎಸ್ನಲ್ಲಿರುವ ಒಕ್ಕಲಿಗರ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಅಶೋಕ್ ಹೇಳಿದರು.